ಸಿದ್ದಾಪುರದಲ್ಲಿ ಕಡವೆ ಬೇಟೆಯಾಡಿ ಮಾರಾಟಕ್ಕೆ ಬಂದವರ ಬಂಧನ
ಸಿದ್ದಾಪುರ, ಮಾರ್ಚ್ 17: ಹಾಡಹಗಲೇ ಮೀಸಲು ಅರಣ್ಯದಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ತರುತ್ತಿದ್ದ ಮೂವರು ಆರೋಪಿಗಳನ್ನು ಮೀನುಕೊಲ್ಲಿ ವಿಭಾಗದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
Recommended Video
Randeep Hooda shares gutting video of people shooting at elephant in Karnataka | Bandipur
ನಂಜರಾಯಪಟ್ಪಣದ ಸಮೀಪದ ದುಬಾರೆ ಮೀಸಲು ಅರಣ್ಯ ಪ್ರದೇಶದ ಒಳಗಿನಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿಕೊಂಡು ಹೊಸಪಟ್ಟಣ ಮೂಲಕ ಬರುತ್ತಿದ್ದ ಸಂದರ್ಭ ಗಸ್ತಿನಲ್ಲಿದ್ದ ಕುಶಾಲನಗರ ಉಪವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಹತ್ತು ಕೆ.ಜಿ ಕಡವೆಯ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ನಂಜರಾಯಪಟ್ಟಣ ಸಮೀಪದ ಹೊಸಪಟ್ಟಣ ನಿವಾಸಿಗಳಾದ ಮಹೇಶ (42), ವಿಶ್ವನಾಥ (60), ಚಂದ್ರಶೇಖರ್ (38) ಎಂಬ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.












Click it and Unblock the Notifications