ಸಂತ್ರಸ್ತರಿಗೆ ಕಳಿಸಿದ ವಸ್ತುಗಳನ್ನೂ ದೋಚುತ್ತಿರುವ ಖದೀಮರು
ಬೆಂಗಳೂರು, ಆಗಸ್ಟ್ 21: ಕೊಡಗಿನಲ್ಲಿ ಪ್ರವಾಹ ಬಂದು ಜನರೆಲ್ಲ ಮನೆ, ಜಮೀನು ಸಂಬಂಧಿಕರನ್ನು ಕಳೆದುಕೊಂಡು ಯಾತನೆ ಅನುಭವಿಸುತ್ತಿದ್ದರೆ ಅಲ್ಲೊಂದು ಕಳ್ಳರ ಗ್ಯಾಂಗ್ ಹುಟ್ಟಿಕೊಂಡಿದೆ.
ಕೊಡಗಿಗೆ ದಿನನಿತ್ಯ ಸುಮಾರು 100ಕ್ಕೂ ಹೆಚ್ಚು ಟ್ರಕ್‌ಗಳು ಕರ್ನಾಟಕದ ಮೂಲೆ ಮೂಲೆಯಿಂದ ಹೋಗುತ್ತಿದೆ, ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಲು ಅಲ್ಲಿರುವ ಸಿಬ್ಬಂದಿಗಳು ಕಷ್ಟ ಪಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಅವರಿಗೆಂದು ತಂದಿರುವ ಸಾಮಗ್ರಿಗಳನ್ನು ತುಂಬಿರುವ ಲೋಡ್‌ಗಳನ್ನು ಖದೀಮರು ದೋಚುತ್ತಿದ್ದಾರೆ.
ಅವರ ಪರಿಸ್ಥಿತಿಯನ್ನು ನೋಡಿ ಮರುಗದವರಿಲ್ಲ, ಆದರೆ ಕೊಡಗಿನ ಸಂತ್ರಸ್ತರ ಹೆಸರಿನಲ್ಲಿ ಲೂಟಿ ಮಾಡಲು ಮನಸ್ಸಾದರು ಹೇಗೆ ಬಂತೋ, ವಿವಿಧ ಪ್ರದೇಶಗಳಿಂದ ಟ್ರಕ್‌ಗಳಲ್ಲಿ ಕುಶಾಲನಗರಕ್ಕೆ ಬರುತ್ತಿದ್ದಂತೆಯೇ ಕಳ್ಳರು ದೋಚುತ್ತಿದ್ದಾರೆ, ಜಿಲ್ಲಾಧಿಕಾರಿಗಳ ಆದೇಶ ಇದೆ ಎಂದು ಹೇಳಿ ನಕಲಿ ಆದೇಶ ಪ್ರತಿಯನ್ನು ತೋರಿಸಿ ಲೂಟಿ ಮಾಡುತ್ತಿದ್ದಾರೆ.

ಮಡಿಕೇರಿಯಲ್ಲಿ ಜಾಗವಿಲ್ಲದ ಕಾರಣ ಕುಶಾಲನಗರದಲ್ಲಿ ಲೋಡ್ ಇಳಿಸುವಂತೆ ತಿಳಿಸುತ್ತಿದ್ದಾರೆ ಹಾಗಾಗಿ ಲೋಡ್‌ಗಟ್ಟಲೆ ಆಹಾರ ಲೂಟಿಯಾಗುತ್ತಿದೆ, ಅದರ ಜತೆಗೆ ಸರ್ಕಾರಿ ಅಧಿಕಾರಿಗಳ ವೇಷದಲ್ಲಿ ಬಂದು ಸಾಮಗ್ರಿ ಕಳ್ಳತನ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.












Click it and Unblock the Notifications