• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಲಕಾವೇರಿ ಗುಡ್ಡ ಕುಸಿತ ಪ್ರಕರಣ: ಅರ್ಚಕ ನಾರಾಯಣ್ ಆಚಾರ್ ಮೃತದೇಹ ಪತ್ತೆ

By ಮೈಸೂರು ಪ್ರತಿನಿಧಿ
|

ಮಡಿಕೇರಿ, ಆಗಸ್ಟ್ 11: ಸತತ ಐದು ದಿನಗಳ ಎನ್‌.ಡಿ.ಆರ್.ಎಫ್ ಕಾರ್ಯಚರಣೆಯ ಬಳಿಕ ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಅವರ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ‌.

   Manmohan Singh : ದೇಶದ ಆರ್ಥಿಕ ಆರೋಗ್ಯಕ್ಕೆ ನೀಡಿದ ಮೂರು ಸೂತ್ರ | Oneindia Kannada

   ಎರಡು ದಿನಗಳ‌ ಹಿಂದೆ ಅವರ ಅಣ್ಣ ಆನಂದ ತೀರ್ಥ ಅವರ ಮೃತದೇಹ ಪತ್ತೆ ಮಾಡಿ ಹೊರತೆಗೆಯಲಾಗಿತ್ತು. ಇದಕ್ಕೂ ಮೊದಲು ಈ ಮೃತದೇಹವನ್ನು ಆಚಾರ್ಯರ ಪತ್ನಿ ಶಾಂತಾ ಅವರ ಮೃತದೇಹ ಎಂದು ಶಂಕಿಸಲಾಗಿತ್ತು. ಆದರೆ ಎನ್‌.ಡಿ.ಆರ್‌.ಎಫ್‌ ತಂಡ ಅದು ಆಚಾರ್ಯ ಅವರ ಮೃತದೇಹ ಎಂದು ಸ್ಪಷ್ಟಪಡಿಸಿದೆ. ಇಂದು ಬೆಳಿಗ್ಗೆ ಆಚಾರ್ಯರ ಎರಡು ವಾಹನಗಳು ಕೂಡಾ ಪತ್ತೆಯಾಗಿದ್ದವು.

   ಭೂಕುಸಿತದಲ್ಲಿ ನಾಪತ್ತೆಯಾದ ಅರ್ಚಕರು; ತಲಕಾವೇರಿ ಪೂಜೆ ನಡೆಸುವವರಾರು?

   ಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೇ ಎನ್‌.ಡಿ.ಆರ್‌.ಎಫ್‌ ತಂಡ ಭೂ ಸಮಾಧಿ ಆಗಿರುವ ಇನ್ನೂ ಮೂವರಿಗಾಗಿ ಶೋಧ ಕಾರ್ಯ ಮುಂದುವರೆಸಿದೆ. ಮೃತರ ಇಬ್ಬರು ಪುತ್ರಿಯರು ಆಸ್ಟ್ರೇಲಿಯಾದಿಂದ ಆಗಮಿಸಿದ್ದು, ಸದ್ಯ ಮಡಿಕೇರಿಯಲ್ಲೇ ಇದ್ದಾರೆ.

   ಈಗಾಗಲೇ ಘಟನಾ ಸ್ಥಳದಲ್ಲಿ ಜೆಸಿಬಿ ಹಾಗೂ ಹಿಟಾಚಿಗಳು ತೀವ್ರ ಶೋಧ ನಡೆಸುತ್ತಿದ್ದು, ಒಟ್ಟು 60 ಸಿಬ್ಬಂದಿ ಉಳಿದ ಮೂವರ ಪತ್ತೆಗಾಗಿ ಶೋಧ ಮಾಡುತ್ತಿದ್ದಾರೆ. ಅನಂದ್ ತೀರ್ಥ ಅವರ ಮೃತದೇಹವನ್ನು ಇಂದು ಅಂತ್ಯಕ್ರಿಯೆ ಮಾಡುವ ಸಾಧ್ಯತೆಗಳಿವೆ.

   ಕಳೆದ ನಾಲ್ಕು ದಿನಗಳಿಂದ ಎನ್‌ಡಿಆರ್ಎಫ್, ಎಸ್‌ಡಿಆರ್ಎಫ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ನಾಪತ್ತೆಯಾದವರಿಗೆ ತೀವ್ರ ಹುಡುಕಾಟವನ್ನು ಆರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮಾರುತಿ ಓಮ್ನಿ ಕಾರುಗಳು ಪತ್ತೆಯಾಗಿವೆ.

   English summary
   The body of Narayana Acharya, the high priest of the Talakaveri temple, was discovered by NDRF Team this afternoon after five consecutive days.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X