ಕೊಡಗು; ಹಳ್ಳಕ್ಕೆ ಬಿದ್ದ ಕೆಎಸ್ಆರ್‌ಟಿಸಿ ಐರಾವತ ಬಸ್
ಕೊಡಗು, ಜನವರಿ 10 : ಕೆಎಸ್ಆರ್‌ಟಿಸಿಯ ಐರಾವತ ಬಸ್ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ಕೊಡಗಿನಲ್ಲಿ ನಡೆದಿದೆ. ಹಲವು ಪ್ರಯಾಣಿಕರರಿಗೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದೆ.
ಶುಕ್ರವಾರ ಮುಂಜಾನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಬಳಿ ಈ ಅಪಘಾತ ನಡೆದಿದೆ. ಬೆಳಗ್ಗಿನ ದಟ್ಟ ಮಂಜಿನ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ಉರುಳಿದೆ.

ಅಪಘಾತದಲ್ಲಿ ಕೆಲವು ಪ್ರಯಾಣಿಕರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಬೇರೊಂದು ವಾಹನದಲ್ಲಿ ಅವರಿಗೆ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ.
ಅಪಘಾತಗೊಂಡ ಬಸ್ ಮೈಸೂರಿನಿಂದ ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ಹೊರಟಿತ್ತು. ಅಪಘಾತದಲ್ಲಿ ಬಸ್ ಜಖಂಗೊಂಡಿದ್ದು, ಗಾಜುಗಳು ಪಡಿಯಾಗಿವೆ.
ಯಾದಗಿರಿಯಲ್ಲಿ 3 ಸಾವು : ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಆಟೋ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ಯಾದಗಿರಿ ಹೊರವಲಯದ ಗಡೇಸೂರ್ ಗೇಟ್ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಯಾದಗಿರಿಯಿಂದ ವಡಗೇರಾಗೆ ತೆರಳುತ್ತಿದ್ದ ಆಟೋ ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿದೆ.












Click it and Unblock the Notifications