ಕೊಡವರ ಮೀಸಲಾತಿ ಸರ್ಕಾರದ ಮಹತ್ವದ ಆದೇಶ

ಮಡಿಕೇರಿ, ಡಿಸೆಂಬರ್ 06; ಕೊಡವ ಸಮುದಾಯದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ (ಹೇಮಲತ. ಎಂ) ಸರ್ಕಾರದ ಅಧೀನ ಕಾರ್ಯದರ್ಶಿ-1 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ 'ಕೊಡಗರು' ಎಂದು ನಮೂದಾಗಿರುವುದನ್ನು 'ಕೊಡವ' ಎಂದು ಸೇರಿಸುವ ಕುರಿತು ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.

ಸರ್ಕಾರದ ಆದೇಶ ದಿನಾಂಕ 30/03/2002. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವಿಶೇಷ ವರದಿ-2010. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪತ್ರ ಸಂಖ್ಯೆ 28/01/2022 ಮತ್ತು ರಿಟ್ ಅರ್ಜಿ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ದಿನಾಂಕ 08/12/2021 ಉಲ್ಲೇಖ ಮಾಡಲಾಗಿದೆ.

Kodava Community Reservation Karnataka Government Order

ಪ್ರಸ್ತಾವನೆ; ಸರ್ಕಾರದ ಆದೇಶದಲ್ಲಿ ಭಾರತ ಸಂವಿಧಾನದ ಅನುಚ್ಛೇಧ 15(4)ರಂತೆ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶಾತಿ ಹಾಗೂ ಅನುಚ್ಛೇಧ 16(4)ರನ್ವಯ ಔದ್ಯೋಗಿಕ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸಲು ರಾಜ್ಯದ ಹಿಂದುಳಿದ ವರ್ಗಗಳನ್ನು ಗುರುತಿಸಿ, ಪ್ರವರ್ಗವಾರು ವಿಂಗಡಿಸಿ ಸರ್ಕಾರದ ದಿನಾಂಕ 30/03/2002 ಅನ್ನು ಹೊರಡಿಸಲಾಗಿರುತ್ತದೆ. ಈ ಮೀಸಲಾತಿ ಪಟ್ಟಿಯ ಪ್ರವರ್ಗ-3ಎ ಕ್ರ.ಸಂ:2ರಲ್ಲಿ 'ಕೊಡಗರು' ಜಾತಿಯು ನಮೂದಾಗಿರುತ್ತದೆ.

ಡಾ. ಸಿ. ಎಸ್‌ ದ್ವಾರಕನಾಥ್‌ರವರ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ವಿಶೇಷ ವರದಿ-2010ರ ಸಲಹೆ ಸಂಖ್ಯೆ:01ರಲ್ಲಿ "ಸರ್ಕಾರದ ಆದೇಶ ಸಂಖ್ಯೆ: ಸ.ಕ.ಇ/225/ಬಿಸಿಎ/ 2000 ದಿನಾಂಕ: 30/03/2002ರ ಪ್ರವರ್ಗ-3 (ಎ) ಕ್ರಮ ಸಂಖ್ಯೆ: 2 ರಲ್ಲಿ 'ಕೊಡಗರು' ಎಂಬ ಪದವನ್ನು ತೆಗೆದುಹಾಕಿ 'ಕೊಡವ' ಮತ್ತು 'ಕೊಡವರು ಎಂದು ಸೇರಿಸಬಹುದಾಗಿದೆ. ಅಂತಯೇ, ಇಂಗ್ಲೀಷ್ ಪಟ್ಟಿಯಲ್ಲಿ ಸದರಿ ಕ್ರಮಸಂಖ್ಯೆಯಲ್ಲಿ "Kodagaru' ಎನ್ನುವುದನ್ನು ತೆಗೆದು 'Codava, Codavaru', 'Kodava' Kodavaru' ಎಂದು ಸೇರಿಸಬೇಕೆಂದು ಆಯೋಗವು ಸರ್ಕಾರಕ್ಕೆ ಸಲಹೆ ನೀಡಿರುತ್ತದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ 218ನೇ ಸಭೆಯಲ್ಲಿ ಡಾ.ಸಿ.ಎಸ್. ದ್ವಾರಕನಾಥ್ ನೇತೃತ್ವದ ಆಯೋಗದ ವಿಶೇಷ ವರದಿ- 2010ರಲ್ಲಿ ಕೊಡಗರು ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದು, ಹಿಂದಿನ ಆಯೋಗಗಳು ನೀಡಿದ ಸಲಹೆಗಳು ಸರ್ಕಾರದ ತೀರ್ಮಾನಕ್ಕಾಗಿ ಬಾಕಿ ಇರುವಾಗ ಪುನರ್ ಪರಿಶೀಲಿಸಲು ಹಾಲಿ ಆಯೋಗಕ್ಕೆ ಅವಕಾಶವಿರುವುದಿಲ್ಲದಿರುವುದ ರಿಂದ ಈ ಬಗ್ಗೆ ಸರ್ಕಾರದ ಹಂತದಲ್ಲಿಯೇ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ತೀರ್ಮಾನಿಸಲಾಗಿರುತ್ತದೆ.

ಹೈಕೋರ್ಟ್ ರಿಟ್ ಅರ್ಜಿ ರಾಷ್ಟ್ರೀಯ ಕೊಡವ ಪರಿಷತ್ತು ವಿರುದ್ಧ ರಾಜ್ಯಸರ್ಕಾರ ಮತ್ತಿತರರು ಪಕರಣದಲ್ಲಿ ಈ ಕೆಳಕಂಡಂತೆ ಆದೇಶಿಸಿರುತ್ತದೆ. In the above Circumstances, This writ petitions succeeds; a Writ of Certiorari issues quashing the impugned orders dated 14.10.2015 & 30.09.2021; consequently, a writ of Mandamus issues to the respondent-Government to accept the subject advice of the Karnataka State commission for Backward Class and issue corrective orders in terms thereof and further, to report. ಪ್ರಸ್ತಾವನೆಯನ್ನು ಹಾಗೂ ಕೊಡವ ಸಮುದಾಯದಿಂದ ಸ್ವೀಕೃತವಾದ ಮನವಿಗಳಲ್ಲಿನ ಕೋರಿಕೆಯನ್ನು ಪರಿಶೀಲಿಸಿ ಈ ಆದೇಶ ಹೊರಡಿಸಲಾಗಿದೆ.

ಸರ್ಕಾರಿ ಆದೇಶ; ಈ ಹಿನ್ನಲೆಯಲ್ಲಿ ಸರ್ಕಾರಿ ಆದೇಶ ದಿನಾಂಕ 09/10/2023ರ ಆದೇಶದಲ್ಲಿ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000 ದಿನಾಂಕ 30/03/2002ರ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯ ಪವರ್ಗ-3ಎ ಕ್ರ.ಸಂ:2ರಲ್ಲಿ ನಮೂದಾಗಿರುವ 'ಕೊಡಗರು' (Kodagaru)' ಎಂಬುದರ ಬದಲಾಗಿ ಕನ್ನಡ ಆವೃತ್ತಿಯಲ್ಲಿ 'ಕೊಡವ' ಎಂದು ಮತ್ತು ಆಂಗ್ಲ ಆವೃತ್ತಿಯಲ್ಲಿ 'Kodava' ಎಂದು ಬದಲಾಯಿಸಿ ಆದೇಶಿಸಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+