ಕೊಡಗಿಗೆ ಸಿಕ್ಕಿತು ಕೋವಿಡ್ - 19 ಪರೀಕ್ಷೆಯ ಪ್ರಯೋಗಾಲಯ

ಮಡಿಕೇರಿ, ಮೇ 21 : ಕೊಡಗು ಜಿಲ್ಲೆಗೆ ಕೋವಿಡ್ - 19 ಪ್ರಯೋಗಾಲು ಮಂಜೂರು ಆಗಿದೆ. ಸುಮಾರು 1.06 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಲ್ಯಾಬ್ ಮೇ 22ರಿಂದ ಕಾರ್ಯಾರಂಭ ಮಾಡಲಿದೆ.

Recommended Video

      ಹುಚ್ಚ ವೆಂಕಟ್ ಕಾರಿನ ಗಾಜು ಒಡೆದು ಹಾಕಿದ್ದು ಏಕೆ ಗೊತ್ತಾ..? | Huccha Venkat | Oneindia Kannada

      ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಕ್ಷ್ಮಾಣು ಜೀವಿ ವಿಭಾಗದಲ್ಲಿ ಕೋವಿಡ್ - 19 ಪರೀಕ್ಷೆ ಪ್ರಯೋಗಾಲಯ ನಿರ್ಮಾಣ ಮಾಡಲಾಗಿದೆ. ಶುಕ್ರವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ಉದ್ಘಾಟನೆ ಮಾಡಲಿದ್ದಾರೆ.

      1.06 ಕೋಟಿ ವೆಚ್ಚದ ವಿಪತ್ತು ನಿಧಿಯಡಿ ಕೋವಿಡ್ - 19 ಪರೀಕ್ಷೆಯ ಪ್ರಯೋಗಾಲಯವು ಸ್ಥಾಪನೆ ಮಾಡಲಾಗಿದೆ. ಇಲ್ಲಿ ಒಂದು ಬಾರಿಗೆ 100 ಮೂಗು/ಗಂಟಲು ದ್ರವದ ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಸಹಾಯಕವಾಗಲಿದೆ.

      Kodagu Gets The COVID 19 Test Lab

      ಇಷ್ಟು ದಿನ ಕೊರೊನಾ ಸೋಂಕಿನ ಶಂಕಿತರ ಮೂಗು/ಗಂಟಲು ದ್ರವದ ಮಾದರಿಯನ್ನು ಕೊಡಗು ಜಿಲ್ಲೆಯಿಂದ ಮೈಸೂರಿನಲ್ಲಿರುವ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿಂದ ವರದಿ ಬರುವ ತನಕ ಕಾಯಬೇಕಿತ್ತು. ಇನ್ನು ಮುಂದೆ ಪರೀಕ್ಷಾ ಸೌಲಭ್ಯವು ಜಿಲ್ಲೆಯಲ್ಲಿಯೇ ಸಿಗಲಿದೆ.

      ಕೊಡಗು ಜಿಲ್ಲಾಡಳಿತ ಈ ಕುರಿತು ಪ್ರಕಟಣೆ ಹೊರಡಿಸಿದ್ದು, 'ಮುಂದಿನ ಒಂದು ವಾರದಲ್ಲಿ ಪೂರ್ಣ ಪ್ರಮಾಣದ ಪರೀಕ್ಷೆಯು ಈ ಪ್ರಯೋಗಾಲಯದಲ್ಲಿ ಪ್ರಾರಂಭವಾಗಲಿದೆ' ಎಂದು ಹೇಳಿದೆ.

      ಭವಿಷ್ಯದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅನುಮತಿಯನ್ನು ಪಡೆದು ಈ ಪ್ರಯೋಗಾಲಯವನ್ನು ಇತರ ವೈರಾಣುಗಳಿಂದ ಹರಡುವ ರೋಗಗಳ ಪರೀಕ್ಷೆಗೂ ಬಳಸಿಕೊಳ್ಳಬಹುದಾಗಿದೆ.

      ಮೇ 20ರ ವರದಿಯಂತೆ ಕೊಡಗು ಜಿಲ್ಲೆಯ 1757 ಪ್ರಕರಣದ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದೆ. 1538 ವರದಿಗಳು ನೆಗೆಟಿವ್ ಎಂದು ಬಂದಿದೆ. 217 ಪ್ರಕರಣದ ವರಿದಿಗಾಗಿ ಕಾಯಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+