ಬಾಳಾಜಿ ಗ್ರಾಮದಲ್ಲಿ ಅವಳಿ ಕರುಗಳಿಗೆ ಜನ್ಮ ನೀಡಿದ ಹಸು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ : ಸಾಮಾನ್ಯವಾಗಿ ಹಸುಗಳು ಒಂದೇ ಕರುವನ್ನು ಹಾಕುತ್ತವೆ. ಆದರೆ ಬಾಳಾಜಿ ಗ್ರಾಮದ ಎಂ.ಸಿ. ಬೆಳ್ಯಪ್ಪನವರು ಸಾಕಿರುವ ಆರು ವರ್ಷದ ವಿದೇಶಿ ತಳಿಯ ಜೆರ್ಸಿ ಹಸು ಅವಳಿಕರುಗಳಿಗೆ ಜನ್ಮ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಮನೆಯಪಂಡ ಬೆಳ್ಯಪ್ಪನವರಿಗೆ ಸಾಕು ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಹಸುವನ್ನು ಮುದ್ದಿನಿಂದಲೇ ಸಾಕಿದ್ದರು. ಬಳಿಕ ಪೊನ್ನಂಪೇಟೆಯ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರ ಮೂಲಕ ಕೃತಕ ಗರ್ಭಧಾರಣೆ ಮಾಡಿಸಿದ್ದರು. ಈ ಕಾರ್ಯಕ್ಕೆ ಖರ್ಚಾಗಿದ್ದು ಕೇವಲ 85 ರು. ಮಾತ್ರ.[ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಸಂದರ್ಶನ]

Jersey cow gave birth to twin calf

ಹೊರದೇಶದ ಈ ಜೆರ್ಸಿ ತಳಿಯನ್ನು 6 ವರ್ಷಗಳ ಹಿಂದೆ ತಂದಿದ್ದ ಬೆಳ್ಯಪ್ಪನವರು ಹಸುವನ್ನು ತುಂಬಾ ಚನ್ನಾಗಿ ಬೆಳೆಸಿದ್ದರು. ಎರಡು ವರ್ಷದ ಹಿಂದೆ ಹೆಣ್ಣು ಕರುವಿಗೆ ಜನ್ಮ ನೀಡಿದ್ದ ಈ ಹಸು ದಿನಕ್ಕೆ 10ರಿಂದ 15 ಲೀಟರ್ ಹಾಲು ನೀಡುತ್ತಿತ್ತು. ಇದೀಗ ಕೃತಕ ಗರ್ಭಧಾರಣೆ ಮಾಡಿಸಿದ ತರುವಾಯ ಎರಡನೇ ಬಾರಿಗೆ ಅವಳಿ ಹೆಣ್ಣುಕರುಗಳಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲ ಕರುಗಳು ಆರೋಗ್ಯವಾಗಿವೆ.[ಕೃತ್ರಿಮ ಗರ್ಭಧಾರಣೆ ಮನುಷ್ಯತ್ವಕ್ಕೆ, ಧಾರ್ಮಿಕತೆಗೆ ವಿರುದ್ಧ]

Jersey cow gave birth to twin calf

ಒಂದೇ ಕರುಗೆ ಜನ್ಮನೀಡುವ ಹಸುಗಳು ಅಪರೂಪಕ್ಕೊಮ್ಮೆ ಅವಳಿ ಕರುಗಳಿಗೆ ಜನ್ಮ ನೀಡುತ್ತವೆ. ಈಗಾಗಲೇ ಮೂರು ಕರುಗಳಿಗೆ ಜನ್ಮನೀಡಿದ ಪ್ರಕರಣಗಳು ಇವೆ. ಅದು ಏನೇ ಇರಲಿ. ಬೆಳ್ಯಪ್ಪ ಅವರ ಮನೆಯ ಹಸು ಅವಳಿ ಕರುಗಳಿಗೆ ಜನ್ಮನೀಡಿರುವುದು ಸುತ್ತಮುತ್ತಲಿನವರಿಗೆ ಕುತೂಹಲ ಮೂಡಿಸಿದ್ದು, ಅದನ್ನು ನೋಡಲು ಬೆಳ್ಯಪ್ಪ ಅವರ ದನದ ಕೊಟ್ಟಿಗೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jersey cow gave birth to twin calf in Balaji village, Kodagu district. Usually cow gives birth to one calf. In rare cases gives birth to twins and triplets.
Please Wait while comments are loading...