Pineapple: ಮಿಶ್ರ ಬೆಳೆಯಾಗಿ ಅನಾನಸ್ ಬೆಳೆದು ಬಂಪರ್ ಲಾಭ: ಹೇಗೆ ಗೊತ್ತಾ..?
ಮಡಿಕೇರಿ, ಏಪ್ರಿಲ್ 29 : ಮಲೆನಾಡು ಪ್ರದೇಶದಲ್ಲಿ ಕಾಫಿ, ಕರಿಮೆಣಸು, ಅಡಿಕೆ, ತೆಂಗು ನಂಬಿಕೊಂಡು ಬೆಳೆಗಾರರು ಬಂದಿದ್ದಾರೆ. ಆದರೆ ಕೆಲವೊಮ್ಮೆ ಹವಾಮಾನದ ವೈಪರೀತ್ಯ, ಬೆಲೆಕುಸಿತ ಹೀಗೆ ವಿವಿಧ ಕಾರಣಗಳಿಂದ ಸಂಕಷ್ಟ ಅನುಭವಿಸಿದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಬೆಳೆಗಾರರು ಪರ್ಯಾಯ ಬೆಳೆಯತ್ತ ಚಿತ್ತ ಹರಿಸುವುದು ಕೆಲವೊಮ್ಮೆ ಒಳ್ಳೆಯದು ಬಾಳೆ, ಶುಂಠಿ ಜತೆಗೆ ಅನಾನಸ್ ಬೆಳೆಯುವುದು ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ ಕೃಷಿಕರು ಒಂದೇ ಬೆಳೆಯನ್ನು ನಂಬಿ ಕೂರುವುದು ಸಾಧ್ಯವಾಗದ ಮಾತಾಗಿದೆ. ಹಾಗಾಗಿ ಕೃಷಿಕರು ಮಿಶ್ರ ಬೆಳೆ ಬೆಳೆಯುವ ಪ್ರಯತ್ನ ಮಾಡುತ್ತಾರೆ. ಬಹಳಷ್ಟು ಜನ ಇರುವ ಜಾಗದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಯಾವುದಾದರೊಂದು ಬೆಳೆಯಿಂದಾದರೂ ಒಂದಷ್ಟು ಆದಾಯವನ್ನು ಪಡೆಯಬಹುದಾಗಿದೆ, ಈಗೀಗ ಅನಾನಸ್ ಬೆಳೆಯುವುದು ಕಂಡು ಬರುತ್ತಿದೆ.

ಅನಾನಸ್ ಪಾನೀಯ, ವಿವಿಧ ತಿನಿಸುಗಳಲ್ಲಿ ಉಪಯೋಗವಾಗುವುದರಿಂದ ಇದಕ್ಕೆ ಬೇಡಿಕೆ ಇದ್ದೇ ಇದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ನಿರ್ದಿಷ್ಟವಾಗಿಲ್ಲವಾದರೂ, ಬೆಳೆಗಾರರಿಗೆ ತೊಂದರೆಯಾಗದು ಎಂಬುವುದು ಇದನ್ನು ಬೆಳೆದವರ ಅಭಿಪ್ರಾಯವಾಗಿದೆ. ಅನಾನಸ್ ಹಣ್ಣಿನಲ್ಲಿ ದೇಹಕ್ಕೆ ಬೇಕಾದ ಎಲ್ಲ ಎ, ಬಿ, ಮತ್ತು ಸಿ ಅನ್ನಾಂಗಗಳು, ಲವಣಗಳಿದ್ದು, ಕೆಲವು ರೋಗ ನಿರೋಧಕ ಶಕ್ತಿಗಳು ಸಹ ಇದರಲ್ಲಿದೆ.
ಎರಡು ಬಗೆಯ ತಳಿಯ ಅನಾನಸ್
ಇದು ಉಷ್ಣವಲಯದ ಹಣ್ಣಾಗಿದ್ದು, ಜೇಡಿ ಮಣ್ಣು ಹಾಗೂ ಜೌಗು ಮಣ್ಣನ್ನು ಹೊರತುಪಡಿಸಿದರೆ, ಇತರೆ ಎಲ್ಲ ಮಣ್ಣಿನಲ್ಲಿಯೂ ಇದು ಚೆನ್ನಾಗಿ ಬೆಳೆಯುತ್ತದೆ. ಸಮಶೀತೋಷ್ಣ ವಾತಾವರಣ ಅಥವಾ ಸಾಮಾನ್ಯವಾಗಿ 40 ರಿಂದ 60 ಸೆಂ. ಮೀ ಮಳೆ ಬೀಳುವ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದಾಗಿದೆ. ಅನಾನಸ್ನಲ್ಲಿ ಮುಖ್ಯವಾಗಿ ಎರಡು ತಳಿಗಳಿದ್ದು, ಅವುಗಳೆಂದರೆ ಕ್ಯೂ ಮತ್ತು 'ಕ್ವೀನ್' ಕ್ಯೂ ಜಾತಿಗೆ ಸೇರಿದ ಗಿಡಗಳಲ್ಲಿ ಮುಳ್ಳುಗಳಿರುವುದಿಲ್ಲ ಅಲ್ಲದೆ ಹಣ್ಣುಗಳ ಗಾತ್ರ ಹಿರಿದಾಗಿರುತ್ತದೆ.
ಸಾಮಾನ್ಯವಾಗಿ ಒಂದೂವರೆ ಕಿ.ಗ್ರಾಂ. ನಿಂದ ಮೂರು ಕಿ.ಗ್ರಾಂ ತನಕವೂ ತೂಗುತ್ತವೆ. ಕ್ವೀನ್ಸ್ ತಳಿಗಳು ರುಚಿಯಾಗಿದ್ದು ಹಣ್ಣುಗಳ ಗಾತ್ರ ಚಿಕ್ಕದಾಗಿರುತ್ತವೆ. ಇದು ಅರ್ಧ ಕಿ.ಗ್ರಾಂ ನಿಂದ ಒಂದೂವರೆ ಕಿ.ಗ್ರಾಂ. ತನಕ ತೂಗುತ್ತದೆ. ಅನಾನಸ್ ಸಸ್ಯಾಭಿವೃದ್ಧಿಯನ್ನು ಅನಾನಸ್ ಗಿಡದಲ್ಲಿ ಹುಟ್ಟುವ ಕಂದುಗಳಿಂದ, ಹಣ್ಣಿನ ಕೆಳಭಾಗದಲ್ಲಿರುವ ಚಿಗುರು(ಸ್ಲಿಪ್ಸ್) ಹಣ್ಣಿನ ಮೇಲ್ಭಾಗದಲ್ಲಿರುವ ಚಿಗುರು(ಕ್ರೌನ್ಸ್)ಗಳಿಂದ ಮಾಡಬಹುದಾಗಿದೆ.

ಅನಾನಸ್ ಬೆಳೆಯಲು ತಯಾರಿ ಹೇಗೆ?
ಕಂದುಗಳು ಮತ್ತು ಸ್ಲಿಪ್ಸ್ಗಳನ್ನು ನಾಟಿಗೆ ಉಪಯೋಗಿಸುವುದರಿಂದ ಗಿಡಗಳು ಹುಲುಸಾಗಿ ಬೆಳೆಯುವುದಲ್ಲದೆ ಬಹುಬೇಗ ಫಸಲನ್ನು ಸಹ ನೀಡುತ್ತವೆ. ತೋಟಗಾರಿಕಾ ಇಲಾಖೆಯ ಪ್ರಕಾರ ಅನಾನಸ್ ಕೃಷಿ ಮಾಡುವುದಾದರೆ ಕೃಷಿ ಮಾಡಲು ಉದ್ದೇಶಿಸಿದ ಸ್ಥಳವನ್ನು ಚೆನ್ನಾಗಿ ಉಳುಮೆ ಮಾಡಿ ಇಲ್ಲಿರುವ ಕಳೆ, ಕಸ, ಮುಂತಾದವುಗಳನ್ನು ತೆಗೆದು ಸ್ವಚ್ಛಗೊಳಿಸಬೇಕು.
ಆ ನಂತರ ಸುಮಾರು ಎರಡು ಅಡಿ ಅಂತರದಲ್ಲಿ ಮುಕ್ಕಾಲು ಅಡಿ ಆಳ, ಎರಡು ಅಡಿ ಅಗಲದ ಚರಂಡಿ ತೆಗೆದು ಅದನ್ನು ಕೊಟ್ಟಿಗೆ ಗೊಬ್ಬರ ಹಾಗೂ ರಂಜಕ ಯುಕ್ತ ಗೊಬ್ಬರವನ್ನು ಬೆರೆಸಿ ಮುಚ್ಚಿ ನಂತರ ಚರಂಡಿಯಲ್ಲಿ ಒಂದು ಅಡಿ ಅಂತರದಲ್ಲಿ ಎರಡು ಸಸಿಗಳನ್ನು ನೆಡಬೇಕಾಗುತ್ತದೆ. ಹೀಗೆ ನೆಡುವಾಗ ಸಸಿಯ ಸುಳಿಗೆ ಮಣ್ಣು ಬೀಳದಂತೆ ಎಚ್ಚರ ವಹಿಸುವುದು ಒಳ್ಳೆಯದು. ಸಸಿಯನ್ನು ನೆಟ್ಟ ನಂತರ ಮಳೆ ಬೀಳುತ್ತಿದ್ದರೆ ನೀರು ಹಾಯಿಸುವ ಅಗತ್ಯವಿರುವುದಿಲ್ಲವಾದರೂ ಮಳೆಯಿರದಿದ್ದ ಸಂದರ್ಭವಾದರೆ ನೀರು ಹಾಯಿಸುವುದು ಅತ್ಯಗತ್ಯ.
ಅನಾನಸ್ ಬೆಳೆ ನಿರ್ವಹಣೆ ಮಾಡಿ
ಒಂದು ಎಕರೆ ಪ್ರದೇಶಕ್ಕೆ ಸುಮಾರು ಹನ್ನೆರಡು ಟನ್ ಕೊಟ್ಟಿಗೆ ಗೊಬ್ಬರ ನೂರ ನಲವತ್ತು ಕಿ.ಗ್ರಾಂ. ಸಾರಜನಕ, ಏಳು ನೂರು ಕಿ.ಗ್ರಾಂ. ಅಮೋನಿಯಂ ಸಲ್ಫೇಟ್, ಐವತ್ತೆರಡು ಕಿ.ಗ್ರಾಂ ರಂಜಕ ಅಥವಾ ಮುನ್ನೂರು ಇಪ್ಪತ್ತೈದು ಕಿ.ಗ್ರಾಂ. ಫಾಸ್ಪೇಟ್, ನೂರ ಎಪ್ಪತ್ತೈದು ಕಿ.ಗ್ರಾಂ ಪೋಟ್ಯಾಷ್ ಬೇಕಾಗುತ್ತದೆ. ಅನಾನಸ್ ಸಸಿಯನ್ನು ನೆಟ್ಟ ನಂತರ ಕಾಲಕ್ಕೆ ಸರಿಯಾಗಿ ಗೊಬ್ಬರ ಹಾಕುವುದು, ಕಳೆ ತೆಗೆಯುವುದು, ಮಣ್ಣು ಸೇರಿಸುವುದು ಮುಂತಾದವುಗಳನ್ನು ತಪ್ಪದೆ ಮಾಡಬೇಕು.

ಸಸಿ ನೆಟ್ಟ ಮೂರು ತಿಂಗಳ ನಂತರ ಮೂರು ತಿಂಗಳ ಅಂತರದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಸಾರಜನಕ ಮತ್ತು ಪೋಟ್ಯಾಷ್ ಗೊಬ್ಬರವನ್ನು ಹಾಕಬೇಕು. ಬೇಸಿಗೆಯಲ್ಲಿ ಮಣ್ಣಿನ ತೇವ ನೋಡಿಕೊಂಡು ನೀರು ಹಾಯಿಸಬೇಕಾಗುತ್ತದೆ. ಅನಾನಸ್ ಗಿಡವು ಹದಿಮೂರರಿಂದ ಹದಿನಾಲ್ಕು ತಿಂಗಳ ಬೆಳವಣಿಗೆಯಲ್ಲಿದ್ದಾಗ ನ್ಯಾಪ್ತಲಿನ್ ಅಸಿಟಿಕ್ ಆಮ್ಲವನ್ನು ಶೇಕಡ ಎರಡರ ಯೂರಿಯಾದೊಂದಿಗೆ ಅಥವಾ ಇಂಥೋಪಾಸ್ ಮಾತ್ರ 100 ಪಿ.ಪಿ ಎಂ. ಅಥವಾ 25 ಪಿ.ಪಿ.ಎಂ ಇಂಥೋಪಾಸ್ನ್ನು ಶೇಕಡ 0.04 ಸೋಡಿಯಂ ಕಾರ್ಬೋನೆಟ್ ಮಿಶ್ರಣದೊಂದಿಗೆ ನೀರಿನಲ್ಲಿ ಬೆರೆಸಿ ಗಿಡದ ಸುತ್ತ ಸುಮಾರು 50 ಮಿ.ಲೀನಂತೆ ಹಾಕಬೇಕು.
ಬಾಧಿಸುವ ರೋಗಗಳತ್ತ ಎಚ್ಚರವಿರಲಿ
ಹೀಗೆ ಮಾಡಿದ ನಲವತ್ತು, ನಲವತ್ತೈದು ದಿನಗಳಲ್ಲಿ ಗಿಡವು ಹೂ ಬಿಡಲಾರಂಭಿಸುತ್ತದೆ, ಈ ಸಂದರ್ಭ 200 ಪಿ.ಪಿ.ಎಂ.ಎನ್.ಎ ಯನ್ನು ಕಾಯಿಕಟ್ಟಿದ ಮೂರು ತಿಂಗಳಲ್ಲಿ ನೀಡಬೇಕು. ಇದರಿಂದ ಹಣ್ಣಿನ ಗಾತ್ರ ಹೆಚ್ಚಾಗಲು ಸಾಧ್ಯವಾಗುತ್ತದೆ. ಅನಾನಸ್ ಗಿಡಕ್ಕೆ ಕೆಲವು ರೋಗಗಳು ಬಾಧಿಸುತ್ತಿದ್ದು, ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಎಲೆ ಸೊರಗು ರೋಗ ಹಾಗೂ ಕಾಂಡ ಕೊಳೆರೋಗವಾಗಿದೆ.
ಸಸಿ ನೆಡುವ ಮೊದಲು ಸಸಿಗಳನ್ನು ಕೀಟನಾಶಕಗಳಿಂದ ತೊಯ್ದು ನೆಡುವುದು ಒಳ್ಳೆಯದು. ಇದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಎಲೆ ಸೊರಗು ರೋಗ ಬಂದರೆ ಗಿಡದ ತಳಭಾಗದ ರೋಗಬಾಧಿತ ಎಲೆ (ಗರಿ)ಗಳನ್ನು ಕತ್ತರಿಸಿ ತೆಗೆಯಬೇಕು. 20ಕಿ.ಗ್ರಾಂ. ಡೈಪೋಲಿಟಾನ್ ಅಥವಾ 23 ಗ್ರಾಂ ಜೈನೆಬ್ಗಳನ್ನು 10ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ತಿಗಣೆಗಳ ಬಾಧೆ ಕಂಡು ಬಂದಲ್ಲಿ ಒಂದು ಎಕರೆ ಪ್ರದೇಶಕ್ಕೆ 7 ಕಿ.ಗ್ರಾಂನಷ್ಟು ಪೋರೇಟ್ ಹರಳುಗಳನ್ನು ಹಾಕಬೇಕು. ಒಟ್ಟಾರೆಯಾಗಿ ಹೇಳಬೇಕೆಂದರೆ ಅನಾನಸ್ ಬೆಳೆಯುವುದರಿಂದ ಒಂದಷ್ಟು ಆದಾಯ ಪಡೆಯಲು ಸಾಧ್ಯವಾಗುವುದಂತು ನಿಜ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications