ಕೊಡಗಿನಲ್ಲಿ ಗಾಂಜಾ ವಾಸನೆ: ಪೊಲೀಸರ ಬಲೆಗೆ ಬಿದ್ದ 8 ಮಂದಿ ಆರೋಪಿಗಳು
ಮಡಿಕೇರಿ, ಜುಲೈ, 26: ವಿರಾಜಪೇಟೆಯ ಕದನೂರು ನಾಪೋಕ್ಲು ರಸ್ತೆ ಜಂಕ್ಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅಷ್ಟಕ್ಕೂ ಈ ಆರೋಪಿಗಳು ಸಿಕ್ಕಿದ್ದೇಗೆ, ಹೇಗೆ ಗಾಂಜಾ ಸಾಗಾಟ ಮಾಡುತ್ತಿದ್ದರು, ಇವರ ಮೂಲ ಯಾವುದು ಎನ್ನುವ ರೋಚಕ ಸ್ಟೋರಿ ಇಲ್ಲಿದೆ ಓದಿ ತಿಳಿಯಿರಿ.
ಕೊಡಗಿನಲ್ಲಿ ಆಗಾಗ್ಗೆ ಗಾಂಜಾದ ಕಮಟು ವಾಸನೆ ಮೂಗಿಗೆ ಬಡಿಯುತ್ತಲೇ ಇರುತ್ತದೆ. ಎಂಜಾಯ್ ಮಾಡಲೆಂದು ಬರುವ ಪ್ರವಾಸಿಗರಿಗೆ, ಕಾಲೇಜ್ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಸುಲಭವಾಗಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳು ಸರಬರಾಜಾಗುತ್ತಿವೆ. ಹೀಗಾಗಿ ಇಲ್ಲಿನ ಬಹುತೇಕ ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗಿ ಹೆತ್ತವರಿಗೆ ಹೊರೆಯಾಗುತ್ತಿದ್ದಾರೆ. ಜೊತೆಗೆ ಆರೋಗ್ಯ ಕೆಡಿಸಿಕೊಂಡು ಆಸ್ಪತ್ರೆಗೆ ಸೇರುತ್ತಿದ್ದಾರೆ.

ಅದರಲ್ಲೂ ಕೆಲವು ಪುಂಡ ಹುಡುಗರು ಸಿಗರೇಟ್‌ನಲ್ಲಿ ಗಾಂಜಾ ಮಿಕ್ಸ್ ಮಾಡಿ ದಮ್ಮು ಹೊಡೆದು ಆ ಮತ್ತಿನಲ್ಲಿ ಹೊಡೆದಾಟ, ಬಡಿದಾಟಕ್ಕೂ ಮುಂದಾಗುತ್ತಿದ್ದಾರೆ. ಗಾಂಜಾ ಸೇರಿದಂತೆ, ಮಾದಕ ವಸ್ತುಗಳ ಅಮಲಿನಲ್ಲಿ ಜಿಲ್ಲೆಯಲ್ಲಿ ಬಹಳಷ್ಟು ಅಹಿತಕರ ಘಟನೆಗಳು ನಡೆದಿವೆ. ಇನ್ನು ಗಾಂಜಾ ಪ್ರಕರಣಗಳು ನಡೆಯದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಅವು ಜಿಲ್ಲೆಯೊಳಗೆ ನುಗ್ಗಿ ಬರುತ್ತಿದ್ದು, ಅಲ್ಲೊಂದು ಇಲ್ಲೊಂದು ಪ್ರಕರಣ ಮಾತ್ರ ಬೆಳಕಿಗೆ ಬರುತ್ತಿವೆ. ಉಳಿದಂತೆ ಎಲ್ಲವೂ ರಹಸ್ಯವಾಗಿಯೇ ನಡೆದುಹೋಗುತ್ತಿದೆ.
ಕೊಡಗು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದು, ಹಣದ ವಹಿವಾಟುಗಳು ಚೆನ್ನಾಗಿ ನಡೆಯುತ್ತಿರುವುದರಿಂದ ಅದರಲ್ಲೂ ಪ್ರವಾಸೋದ್ಯಮ ಜಿಗಿತುಕೊಂಡ ಪರಿಣಾಮ ದೂರದಿಂದ ಬರುವ ಪ್ರವಾಸಿಗರು ಗಾಂಜಾದಂತಹ ಮಾದಕ ವಸ್ತುಗಳನ್ನು ಬಯಸುತ್ತಿರುವುದರಿಂದ ಕೆಲವರು ದಂಧೆಗಳನ್ನು ಕೂಡ ರಹಸ್ಯವಾಗಿಯೇ ಮಾಡುತ್ತಿದ್ದಾರೆ.
ಇಂತಹ ದಂಧೆಗಳನ್ನು ಹತ್ತಿಕ್ಕುವ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಂತೆಯೇ ಕಾಣುತ್ತಿಲ್ಲ. ಇನ್ನು ಗಾಂಜಾ ದಂಧೆ ನಡೆಸುವವರು ಕೂಡ ಪ್ರವಾಸಿಗರು, ಕಾರ್ಮಿಕರು, ಕಾಲೇಜು ಹುಡುಗರನ್ನು ಟಾರ್ಗೆಟ್ ಮಾಡಿಕೊಂಡು ಜಿಲ್ಲೆಯೊಳಗೆ ಎಂಟ್ರಿಕೊಡುತ್ತಿದ್ದು, ಕೈತುಂಬಾ ಹಣ ಸಿಗುತ್ತಿರುವುದರಿಂದ ಸ್ಥಳೀಯರು ಕೂಡ ಇದರಲ್ಲಿ ಭಾಗೀದಾರರಾಗಿದ್ದಾರೆ.
ಗಾಂಜಾದ ಹಿಂದಿನ ಕಿಂಗ್ ಪಿನ್‌ಗಳು ಯಾರು?
ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಪೊಲೀಸರು ಗಾಂಜಾ ಸಹಿತ ಒಂದಷ್ಟು ಮಂದಿಯನ್ನು ಬಂಧಿಸಿ ಜೈಲಿಗೆ ತಳ್ಳಿದರೂ ಕೂಡ ಜಾಮೀನಿನ ಮೇಲೆ ಬಂದು ಅದನ್ನೇ ಮಾಡುತ್ತಾರೆ. ಅಥವಾ ಮತ್ತೊಬ್ಬ ಗಾಂಜಾ ಸರಬರಾಜಿಗೆ ನಿಂತು ಬಿಡುತ್ತಾನೆ. ಹೀಗಾಗಿ ಪೊಲೀಸರ ಕಣ್ಣಿಗೆ ಬೀಳದೆ ಸ್ಥಳೀಯರಿಗೂ ತಿಳಿಯದಂತೆ ಬಹಳ ನಾಜೂಕಾಗಿ ಈ ವ್ಯವಹಾರಗಳು ನಡೆಯುತ್ತಿವೆ. ಇಷ್ಟಕ್ಕೂ ಕೊಡಗಿಗೆ ಗಾಂಜಾ ಎಲ್ಲಿಂದ ಬರುತ್ತದೆ? ಅದನ್ನು ಯಾರು ಸರಬರಾಜು ಮಾಡುತ್ತಿದ್ದಾರೆ. ಕಿಂಗ್ ಪಿನ್ ಯಾರು ಎಂಬುದು ಗೊತ್ತಾಗದೆ ಉಳಿದು ಹೋಗುತ್ತಿದೆ.
ಇದೀಗ ಜಿಲ್ಲೆಯೊಳಗೆ ಮಾರಾಟವಾಗಿ ವ್ಯಸನಿಗಳ ಕೈಗೆ ಸೇರಲಿದ್ದ ಗಾಂಜಾವನ್ನು ತಡೆಯುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಸುಮಾರು 8 ಮಂದಿ ಗಾಂಜಾ ಮಾರಾಟ ಮಾಡುವ ವೇಳೆಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಸೇವಿಸಿ ಕೆಲವರು ಹುಚ್ಚಾಟ ಆಡುತ್ತಿದ್ದು, ಅವರು ಮನೆಗೆ ಮಾತ್ರವಲ್ಲದೆ, ಊರಿಗೂ ಮಾರಿಯಾಗಿದ್ದಾರೆ. ಹೀಗಾಗಿ ಗಾಂಜಾ ಮಾರಾಟದ ಬಗ್ಗೆ ಪೊಲೀಸ್ ಠಾಣೆಗಳಿಗೆ ದೂರುಗಳು ಬರುತ್ತಲೇ ಇರುತ್ತವೆ.
ಸಿಕ್ಕಿ ಬಿದ್ದವರ ಪೈಕಿ ಯುವಕರೇ ಜಾಸ್ತಿ
ಈ ನಡುವೆ ಬುಧವಾರ (ಜುಲೈ 26) ಆರೋಪಿಗಳಾದ 1. ರಶೀದ್ (23), ಅರೇಕಾಡು, 2. ಹೆಚ್.ಆರ್ ಸುದೀಶ್, 23 ವರ್ಷ, ಒಂಟಿಯಂಗಡಿ, 3. ಇಮ್ರಾನ್ ಖಾನ್, 35 ವರ್ಷ, ಕೆಸಿಪಿ ಕಾಲೋನಿ, ಮೈಸೂರು, 4. ಎಂ.ಪ್ರಕಾಶ್, 24 ವರ್ಷ, ಮುರ್ತಾಮುಡಿ, 5. ಹೆಚ್.ಎಂ.ಶಾಂತಕುಮಾರ್, 27 ವರ್ಷ, ಚೇರಂಬಾಂಣೆ, 6. ಎಸ್.ಎಂ.ಸಜೀರ್, 37 ವರ್ಷ, ಕಡಗದಾಳು, 7. ಎಂ.ಇ.ನಿಯಾಜ್, 35 ವರ್ಷ, ಕಡಗದಾಳು, 8. ಇಮ್ರಾನ್ ಖಾನ್, 46 ವರ್ಷ, ಶಾಂತಿನಗರ, ಮೈಸೂರು ಎಂಬುವರು ಗಾಂಜಾದ ಮಾರಾಟದಲ್ಲಿ ತೊಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ವಿರಾಜಪೇಟೆಯ ಸಿಪಿಐ ಬಿ.ಎಸ್.ಶಿವರುದ್ರಪ್ಪ, ಪಿಎಸ್ಐ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ವಿರಾಜಪೇಟೆಯ ಕದನೂರು ನಾಪೋಕ್ಲು ರಸ್ತೆ ಜಂಕ್ಷನ್ ಬಳಿ ಆರೋಪಿಗಳು ಗಾಂಜಾದೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಇನ್ನು ಆರೋಪಿಗಳಿಂದ 1 ಕೆ.ಜಿ 243 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕರು ಎಚ್ಚರವಾಗಿರುವುದು ಒಳಿತು
ಪೊಲೀಸರು ಈ ಸಂಬಂಧ ಆಳವಾದ ತನಿಖೆ ನಡೆಸಿ ಜಿಲ್ಲೆಗೆ ಗಾಂಜಾ ಸರಬರಾಜು ಮಾಡುವ ಕಿಂಗ್ ಪಿನ್‌ಗಳನ್ನು ಮಟ್ಟ ಹಾಕಬೇಕಾಗಿದೆ. ಇಲ್ಲದೆ ಹೋದರೆ ಕೊಡಗಿನಲ್ಲಿ ಗಾಂಜಾದ ಕಮಟು ವಾಸನೆ ನಿಲ್ಲುವುದಿಲ್ಲ. ಸಾರ್ವಜನಿಕರು ಕೂಡ ಈ ವಿಚಾರದಲ್ಲಿ ಎಚ್ಚರವಾಗಿರುವುದು ಒಳಿತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications