ಕೊಡಗಿಗೆ ನೆರವಾಗಿ ಎಂದು ದರ್ಶನ್, ಕಿಚ್ಚ ಸುದೀಪ ಮನವಿ
ಮಡಿಕೇರಿ, ಆಗಸ್ಟ್ 17: ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ, ಶನಿವಾರ ಸಂತೆ, ಮಾಂದಲ್ ಪಟ್ಟಿ ಸೇರಿದಂತೆ ವಿವಿಧೆಡೆ ನಿರಂತರ ಮಳೆಗೆ ಜನತೆ ತತ್ತರಿಸಿದ್ದಾರೆ.
ಕೊಡಗಿನ ಹಲವೆಡೆ ಭೂ ಕುಸಿತ ಉಂಟಾಗಿದ್ದು, ಪ್ರಮುಖ ಹೆದ್ದಾರಿಗಳ ಸಂಪರ್ಕ ಕಡಿದುಕೊಂಡಿದೆ. ಈ ನಡುವೆ ಕನ್ನಡದ ಕೆಚ್ಚೆದೆ ವೀರರ ನಾಡು ಕೊಡಗಿನ ಪರಿಸ್ಥಿತಿ ಸುಧಾರಿಸಲು ನೆರವಾಗಿ ಎಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ದರ್ಶನ್ ತೂಗುದೀಪ ಹಾಗೂ ಕಿಚ್ಚ ಸುದೀಪ ಅವರು ಮನವಿ ಮಾಡಿಕೊಂಡಿದ್ದಾರೆ.

'ಕಷ್ಟದಲ್ಲಿರುವ ಕೊಡಗು ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಈ ಸಂದರ್ಭದಲ್ಲಿ ಅವರಿಗೆ ನಮ್ಮ ಸಹಾಯ ಹಾಗೂ ಬೆಂಬಲ ಅಗತ್ಯವಿದೆ. ನಮ್ಮ ಕೈಲಾದ ಸಹಾಯ ಮಾಡೋಣ' ಎಂದು ದರ್ಶನ್ ಅವರು ಟ್ವೀಟ್ ಮಾಡಿದ್ದಾರೆ.
My prayers are with people of kodagu... they need our prayers and support as well.. let's do our best...For Kodagu #supportcoorg #KodaguFloods pic.twitter.com/vVCFUfE4BS
— Darshan Thoogudeepa (@dasadarshan) August 17, 2018
ಕೊಡಗು ಪ್ರವಾಹಪೀಡಿತ ಜನರಿಗೆ ಅಕ್ಕಿ, ಗೋಧಿ, ರೆಡಿ ಟು ಈಟ್ ಫುಡ್, ಟೂತ್ ಪೇಸ್ಟ್, ಸೋಪು, ಟಾರ್ಚ್, ಮ್ಯಾಚ್ ಬಾಕ್ಸ್, ಕ್ಯಾಂಡಲ್, ಸ್ಯಾನಿಟರಿ ಪ್ಯಾಡ್, ಬ್ಲಾಂಕೇಟ್ ಹಾಗೂ ಇನ್ನಿತರ ವಸ್ತುಗಳನ್ನು ಕೊಡಬಯಸುವವರು ಈ ವಿಳಾಸವನ್ನು ಸಂಪರ್ಕಿಸಬಹುದು.
I request all my fans associations to please look into what best could be done to the rain affected areas of Karnataka. This is the best gift u all wil be giving me. Please please do ur best .. these are our people .. I also plead th government to do their best.
— Kichcha Sudeepa (@KicchaSudeep) August 17, 2018
🙏🏼🙏🏼🙏🏼












Click it and Unblock the Notifications