Video: ಉತ್ತರ ಪ್ರದೇಶದ ಬಿಜೆಪಿ ಮುಖಂಡನ ಕಾಲಿಗೆ ಬಿದ್ದರೇಕೆ ಪ್ರಧಾನಿ ಮೋದಿ?

ಲಕ್ನೋ, ಫೆಬ್ರವರಿ 21: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಪ್ರಚಾರಕ್ಕೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಹಿರಂಗ ಸಮಾವೇಶದಲ್ಲಿಯೇ ಬಿಜೆಪಿ ಮುಖಂಡನ ಕಾಲಿಗೆ ಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಸಲಿಗೆ ಪ್ರಧಾನಿಯವರು ಬಿಜೆಪಿ ನಾಯಕರ ಕಾಲಿಗೆ ಬೀಳುವುದಕ್ಕೆ ಕಾರಣವೇನು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ ಓದಿ.

ಭಾನುವಾರ ಉತ್ತರ ಪ್ರದೇಶ ಉನ್ನಾವೋ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಬಹಿರಂಗ ಸಮಾವೇಶದಲ್ಲಿ ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಉನ್ನಾವೋ ಜಿಲ್ಲಾ ಬಿಜೆಪಿ ಅಧ್ಯಕ್ಷ ಅವಧೇಶ್ ಕಟಿಯಾರ್ ಪ್ರಧಾನಿಯವರಿಗೆ ಶ್ರೀರಾಮನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು.

ಶ್ರೀರಾಮ ದೇವರ ಮೂರ್ತಿ ಉಡುಗೊರೆ ನೀಡಿದ ನಂತರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅವಧೇಶ್ ಕಟಿಯಾರ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾಲಿಗೆ ಬಿದ್ದು ನಮಸ್ಕರಿಸಲು ಮುಂದಾದರು. ಬೇಡ ಎಂದ ಪ್ರಧಾನಿ, ತದನಂತರದಲ್ಲಿ ತೋರಿದ ನಡೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Watch Video: Why PM Modi Touches UP BJP Leader Feet

ಮೋದಿ ಕಾಲು ಸ್ಪರ್ಧಿಸಿದ ಉನ್ನಾವೋ ಬಿಜೆಪಿ ಜಿಲ್ಲಾಧ್ಯಕ್ಷ

ಮೋದಿ ಕಾಲು ಸ್ಪರ್ಧಿಸಿದ ಉನ್ನಾವೋ ಬಿಜೆಪಿ ಜಿಲ್ಲಾಧ್ಯಕ್ಷ

ಉನ್ನಾವೋ ಜಿಲ್ಲಾ ಬಿಜೆಪಿ ಅಧ್ಯಕ್ಷ ಅವಧೇಶ್ ಕಟಿಯಾರ್, ಪ್ರಧಾನಿ ಮೋದಿಯವರ ಕಾಲಿಗೆ ಬಿದ್ದು ನಮಸ್ಕರಿಸಲು ಮುಂದಾದರು. ಈ ವೇಳೆ ಕಟಿಯಾರ್ ಅವರನ್ನು ತಡೆದ ಪ್ರಧಾನಿ ಮೋದಿ, ಪಾದಗಳನ್ನು ಸ್ಪರ್ಧಿಸುವುದು ಸರಿಯಲ್ಲ ಎಂದು ಸನ್ನೆ ಮಾಡಿದರು. ಪ್ರತಿಯಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅವಧೇಶ್ ಕಟಿಯಾರ್ ಪಾದವನ್ನು ಮುಟ್ಟಿದರು.

ಬಿಜೆಪಿಯಲ್ಲಿ ಕಟಿಯಾರ್ ಅವಧೇಶ್ ಹಿನ್ನೆಲೆ

ಬಿಜೆಪಿಯಲ್ಲಿ ಕಟಿಯಾರ್ ಅವಧೇಶ್ ಹಿನ್ನೆಲೆ

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತೀಯ ಜನತಾ ಪಕ್ಷದ ಉನ್ನಾವೊ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅವಧೇಶ್ ಕಟಿಯಾರ್, ಈ ಹಿಂದೆ ಉನ್ನಾವೊದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಅಖಿಲೇಶ್ ವಿರುದ್ಧ ಗುಡುಗಿದ ಪ್ರಧಾನಿ ನರೇಂದ್ರ ಮೋದಿ

ಅಖಿಲೇಶ್ ವಿರುದ್ಧ ಗುಡುಗಿದ ಪ್ರಧಾನಿ ನರೇಂದ್ರ ಮೋದಿ

ಉನ್ನಾವೊದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಕಿಡಿಕಾರಿದರು. "ನೀವು ನೋಡಿರಬೇಕು, ವೇದಿಕೆಯಿಂದ ತಳ್ಳಲ್ಪಟ್ಟ ತಂದೆ ಮುಲಾಯಂ ಸಿಂಗ್ ಯಾದವ್ ಅವಮಾನಕ್ಕೊಳಗಾದರೂ, ಪಕ್ಷ ಅವರನ್ನು ಹಿಡಿದುಕೊಂಡಿತು. ಅದೇ ರೀತಿ ಮುಲಾಯಂ ಅವರ ಕರ್ಹಾಲ್ ಅನ್ನು ಉಳಿಸಿಕೊಳ್ಳಲು ಅಖಿಲೇಶ್ ಮನವಿ ಮಾಡಿಕೊಳ್ಳಬೇಕಾಯಿತು. ರಾಜವಂಶಸ್ಥರಿಗೆ ಅವರ ಮತ್ತು ಅವರ ಆಪ್ತರ ಹಿತಾಸಕ್ತಿಯೇ ಹೆಚ್ಚಿನ ಆದ್ಯತೆಯಾಗಿದೆ. ಯುಪಿಯ ಜನರು ಎಲ್ಲಿಯಾದರೂ ಅವಮಾನಿಸಿದರೆ ಅಥವಾ ಹಿತಾಸಕ್ತಿಗಳನ್ನು ಪೂರೈಸದಿದ್ದರೆ ಅವರು ಆ ಕ್ಷೇತ್ರಗಳತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎಂದು ಮೋದಿ ಆರೋಪಿಸಿದರು.

Recommended Video

    ಹರ್ಷನನ್ನು ಹತ್ಯೆಮಾಡಿದ ರಾಕ್ಷಸರಿಗೆ ತೇಜಸ್ವಿ ಸೂರ್ಯ ಹೇಳಿದ್ದೇನು? | Oneindia Kannada
    ಉನ್ನಾವೋದ 6 ಕ್ಷೇತ್ರಗಳಲ್ಲಿ ಫೆ.23ರಂದು ಮತದಾನ

    ಉನ್ನಾವೋದ 6 ಕ್ಷೇತ್ರಗಳಲ್ಲಿ ಫೆ.23ರಂದು ಮತದಾನ

    ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆಬ್ರವರಿ 23ರಂದು ಚುನಾವಣೆಯ ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಒಟ್ಟು 403 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 7ರಂದು ಅಂತಿಮ ಹಾಗೂ ಏಳನೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರ ಬೀಳಲಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+