• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದುವೆಯಲ್ಲಿ ಈರುಳ್ಳಿ ಹಾರ ಬದಲಿಸಿಕೊಂಡ ವಧುವರರು!

|

ಲಕ್ನೋ, ಡಿಸೆಂಬರ್, 14: ಈರುಳ್ಳಿ ದರ ಏರಿಕೆ ಕಥೆ ಅಂತೂ ಮುಗಿಯುವಂತೆ ಕಾಣುತ್ತಿಲ್ಲ. ದಿನ ಬೆಳಗಾದರೆ ಈರುಳ್ಳಿ ಮಾತ್ರ ಟ್ರೆಂಡಿಂಗ್ ನಲ್ಲಿ ಹೋಗುತ್ತಿದೆ. ಇತ್ತ ಈರುಳ್ಳಿ ಬಡವರಿಗೆ ಕೈಗೆ ಸಿಗದೇ ಆಟ ಆಡಿಸುತ್ತಿದ್ದರೆ, ಅತ್ತ ಈರುಳ್ಳಿಯನ್ನು ಬಳಸಿಕೊಂಡು ಟ್ರೋಲ್ ಮಾಡುವವರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.

ಹೌದು, ಉತ್ತರಪ್ರದೇಶದ ವಾರಣಾಸಿ ಜೋಡಿಯೊಂದು ತಮ್ಮ ಮದುವೆಯಲ್ಲಿ ಈರುಳ್ಳಿ ಹಾರವನ್ನೇ ಬಳಸಿಕೊಂಡು ಮದುವೆಯಾಗಿರುವುದು ಭಾರೀ ಗಮನ ಸೆಳೆಯುತ್ತಿದೆ. ವಧುವರರು ಈರುಳ್ಳಿ ಹಾಗೂ ಬಳ್ಳೊಳ್ಳಿಯಿಂದ ಮಾಡಿದ ದುಬಾರಿ ಹಾರವನ್ನು ಬದಲಾಯಿಸಿಕೊಂಡು ಮದುವೆಯಾಗಿರುವುದು ಕಣ್ಣು ಕುಕ್ಕುವಂತೆ ಮಾಡಿದೆ. ಮದುವೆಗೆ ಬಂದವರೂ ಸಹ ವಧುವರರಿಗೆ ಈರುಳ್ಳಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ವಧುವರರ ಮದುವೆ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವರ ಸಮಾಜವಾದಿ ಪಕ್ಷದ ಮುಖಂಡನಾಗಿದ್ದು, ಈ ಮೂಲಕ ದೇಶದಲ್ಲಿ ಏರುತ್ತಿರುವ ಈರುಳ್ಳಿ ದರವನ್ನು ತಹಬದಿಗೆ ತರದ ಕೇಂದ್ರ ಸರರ್ಕಾರದ ಕ್ರಮವನ್ನು ಖಂಡಿಸಿದ್ದಾರೆ ಎಂದು ಎಎನ್ ಐ ಸುದ್ದಿ ಸಂಸ್ಥೆ ತಿಳಿಸಿದೆ.

ಚಿನ್ನವಲ್ಲ, ಬೆಳ್ಳಿಯಲ್ಲ, ಈರುಳ್ಳಿ ಕದ್ದು ಇಬ್ಬರು ಸಿಕ್ಕಿ ಬಿದ್ದರಲ್ಲ

Uttar Pradesh Bride And Groom Exchange Garlands Of Onion At Wedding

ಕಳೆದ ಒಂದು ತಿಂಗಳಿನಿಂದ ಏರುಗತಿಯಲ್ಲಿ ಸಾಗಿದ್ದ ಈರುಳ್ಳಿ ಈಗ ಕೊಂಚ ತಗ್ಗಿದೆ. 140 ರಿಂದ 180 ಕ್ಕೆ ಏರಿದ್ದ ಈರುಳ್ಳಿ ಈಗ 120 ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಇನ್ನೂ ಕೆಲ ದಿನ ಈರುಳ್ಳಿ ಗ್ರಾಹಕರ ಜೇಬನ್ನು ಖಾಲಿ ಮಾಡುವುದನ್ನು ಮುಂದುವರೆಸಲಿದೆ ಎನ್ನಲಾಗಿದೆ.

English summary
Uttar Pradesh Bride And Groom Exchange Garlands Of Onion At Wedding In Varanasi. Groom is Samajavadi Party Leader and his opposes onion price hike through this way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X