• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಕಿಂಗ್ ಸುದ್ದಿ: ಚಲಿಸುವ ಬಸ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ!

|

ಲಕ್ನೋ, ಆಗಸ್ಟ್.30: ನವದೆಹಲಿಗೆ ವಾಪಸ್ಸಾಗುತ್ತಿದ್ದ ಮಹಿಳೆಯ ಮೇಲೆ ಚಲಿಸುವ ಬಸ್ ನಲ್ಲಿಯೇ ಅತ್ಯಾಚಾರ ನಡೆಸಿರುವಂತಾ ಘಟನೆಯೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಲಕ್ನೋದಿಂದ ದೆಹಲಿಗೆ ತೆರಳುತ್ತಿದ್ದ ಡಿಲೆಕ್ಸ್ ಡಬಲ್ ಡಕ್ಕರ್ ಬಸ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

40 ಪ್ರಯಾಣಿಕರಿದ್ದ ಡಿಲಕ್ಸ್ ಡಬಲ್ ಡಕ್ಕರ್ ಬಸ್ ನಲ್ಲಿ ಚಾಲಕನ ಕ್ಯಾಬಿನ್ ಹಿಂಭಾಗದಲ್ಲೇ ಕುಳಿತಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಮಥುರಾದ ಮಂತ್ ಟೋಲ್ ಗೇಟ್ ಬಳಿ ಬಸ್ ಆಗಮಿಸುತ್ತಿದ್ದಂತೆ ಮಹಿಳೆಯು ಬಸ್ ನಲ್ಲಿದ್ದ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

10 ದಿನಗಳ ಅಂತರದಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ, ಕೊಲೆ

ಮಂತ್ ಟೋಲ್ ಗೇಟ್ ಬಳಿಗೆ ಬಸ್ ತೆರಳುತ್ತಿದ್ದಂತೆ ಮಹಿಳೆಯರು 112 ಸಹಾಯವಾಣಿಗೂ ಕರೆ ಮಾಡಿದ್ದಾರೆ. ಬಸ್ ಕ್ಲೀನರ್ ನಿಂದ ಅತ್ಯಾಚಾರಕ್ಕೊಳಗಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಮಹಿಳೆಯ ವೈದ್ಯಕೀಯ ಪರೀಕ್ಷೆ:

ಮಥುರಾದ ಮಂತ್ ಟೋಲ್ ಗೇಟ್ ಬಳಿ ಬಸ್ ಅಡ್ಡ ಹಾಕಿದ ಪೊಲೀಸರು ಬಸ್ ಪರಿಶೀಲನೆ ನಡೆಸಿದರು. ಮಹಿಳೆ ಮತ್ತು ಆರೋಪಿ ರವಿ ಎಂಬಾತನನ್ನು ಬಸ್ ನಿಂದ ಕೆಳಗಿಳಿಸಿದರು. ಮಹಿಳೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ವೈದ್ಯಕೀಯ ತಪಾಸಣೆ ನಂತರದ ಮಹಿಳೆಯನ್ನು ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ನಿವಾಸಕ್ಕೆ ಕಳುಹಿಸಲಾಯಿತು. ಬರ್ಹೈಚಿ ಜಿಲ್ಲೆಯ ನಿವಾಸಿ ಆರೋಪಿ ರವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಂತ್ ಪೊಲೀಸ್ ಠಾಣೆಯಲ್ಲಿ ಬಸ್ ಕ್ಲೀನರ್ ಮತ್ತು ಕಂಡೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Uttar Pradesh News: Woman Raped In Moving Bus On Yamuna Expressway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X