ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದ ಕಫೀಲ್ ಖಾನ್

|
Google Oneindia Kannada News

ಲಕ್ನೋ ಜನವರಿ 25: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಯಾವುದೇ ಪಕ್ಷವಿದ್ದರೂ ಗೋರಖ್‌ಪುರದಿಂದ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸಲು ನಾನು ಸಿದ್ಧ ಎಂದು ತಜ್ಞ ಡಾ.ಕಫೀಲ್ ಖಾನ್ ಮಂಗಳವಾರ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಆಮ್ಲಜನಕದ ಕೊರತೆಯಿಂದ ಹಲವಾರು ಮಕ್ಕಳು ಸಾವನ್ನಪ್ಪಿದ 2017 ರ ಬಿಆರ್‌ಡಿ ವೈದ್ಯಕೀಯ ಕಾಲೇಜು ದುರಂತದಲ್ಲಿ ಪ್ರಮುಖ ಆರೋಪಿಯಾಗಿ ಮಕ್ಕಳ ತಜ್ಞ ಡಾ.ಕಫೀಲ್ ಖಾನ್ ಅವರ ಹೆಸರು ಕೇಳುಬಂದಿತ್ತು. ಹೀಗಾಗಿ ಕಳೆದ ವರ್ಷ ನವೆಂಬರ್ 9 ರಂದು ಡಾ ಖಾನ್ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು ಮತ್ತು ಅವರು ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

"ನಾನು ಯೋಗಿ ಆದಿತ್ಯನಾಥ್ ವಿರುದ್ಧ ಗೋರಖ್‌ಪುರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಯಾವುದೇ ಪಕ್ಷ ನನಗೆ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲು ಸಿದ್ಧ" ಎಂದು ಖಾನ್ ಪಿಟಿಐ ಜೊತೆ ಮಾತನಾಡುತ್ತಾ ಹೇಳಿದರು.

ನೀವು ಯಾವುದೇ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಅಥವಾ ಯಾರನ್ನಾದರೂ ಸಂಪರ್ಕಿಸಿದ್ದೀರಾ ಎಂದು ಕೇಳಿದಾಗ, "ಹೌದು, ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ" ಎಂದು ಹೇಳಿದ್ದಾರೆ. ಆದರೆ ಯಾವ ಪಕ್ಷ ಎನ್ನುವ ಬಗ್ಗೆ ಖಾನ್ ಸ್ಪಷ್ಟಪಡಿಸಿಲ್ಲ. ಗೋರಖ್‌ಪುರದಲ್ಲಿ ಮಾರ್ಚ್ 3 ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿದೆ.

Ready to Contest Against Adityanath in Gorakhpur, Says Kafeel Khan

ಆಗಸ್ಟ್ 2017 ರಲ್ಲಿ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ 80 ಕುಟುಂಬಗಳ ಮಕ್ಕಳು ಸಾವನ್ನಪ್ಪಿದ ದುರಂತದಲ್ಲಿ ಅವರನ್ನು ಬಲಿಪಶು ಮಾಡಲಾಯಿತು ಎಂದು ಖಾನ್ ಹೇಳಿದರು. ಅವರು ಗೋರಖ್‌ಪುರದಲ್ಲಿ ಇಲ್ಲದಿದ್ದರೂ, ಅವರ 70 ವರ್ಷದ ತಾಯಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಖಾನ್ ಆರೋಪಿಸಿದ್ದಾರೆ.

"ನಾನು ಫೇಸ್‌ಬುಕ್, ಟ್ವಿಟರ್, ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದೇನೆ ಮತ್ತು ಅಲ್ಲಿ ನಾನು ಇರುವ ಸ್ಥಳದ ಬಗ್ಗೆ ಹೇಳುತ್ತೇನೆ. ಪ್ರಸ್ತುತ, ನಾನು ಮುಂಬೈನಲ್ಲಿದ್ದೇನೆ. ಇಲ್ಲಿಂದ ನಾನು ನನ್ನ ಪುಸ್ತಕದ ಪ್ರಚಾರಕ್ಕಾಗಿ ಹೈದರಾಬಾದ್, ಗೋರಖ್‌ಪುರ ಮತ್ತು ಬೆಂಗಳೂರಿಗೆ ಹೋಗುತ್ತೇನೆ. ಪುಸ್ತಕದ ಹೆಸರು 'ಆಸ್ಪತ್ರೆ ದುರಂತ- ಎ ಡಾಕ್ಟರ್ಸ್ ಮೆಮೊಯಿರ್ ಆಫ್ ಎ ಡೆಡ್ಲಿ ಮೆಡಿಕಲ್ ಕ್ರೈಸಿಸ್', ಇದು 5000 ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುವುದರೊಂದಿಗೆ ಬೆಸ್ಟ್ ಸೆಲ್ಲರ್ ಆಗಿದೆ ಎಂದು ಅವರು ಹೇಳಿದರು.

"ಡಿಸೆಂಬರ್ 17, 2021 ರಂದು ನನ್ನ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಪೊಲೀಸರು ಡಿಸೆಂಬರ್ 20 ರಂದು ಮತ್ತು ನಂತರ ಡಿಸೆಂಬರ್ 28 ರಂದು ಮತ್ತು ಜನವರಿಯಲ್ಲಿ ನನ್ನ ಮನೆಗೆ ಬಂದಿದ್ದರು. ನಾನು ಗೋರಖ್‌ಪುರದ ರಾಜ್‌ಘಾಟ್ ಪೊಲೀಸ್ ಠಾಣೆಯಲ್ಲಿ ವರ್ಷಗಳಿಂದ ಬೇಕಾದ ವ್ಯಕ್ತಿ ಎಂದು ಪೊಲೀಸರು ಹೇಳುತ್ತಾರೆ. ಚುನಾವಣಾ ಕಾರಣ ಪೊಲೀಸರು ನನ್ನ ಬೆನ್ನು ಬಿದ್ದಿದ್ದಾರೆ "ಎಂದು ಖಾನ್ ಅವರು ಆರೋಪಿಸಿದ್ದಾರೆ. ಕಫೀಲ್‌ನ ತಾಯಿ ಗೋರಖ್‌ಪುರದ ಬಸಂತ್‌ಪುರ ಪ್ರದೇಶದಲ್ಲಿ ಅವನ ಸಹೋದರ ಅದೀಲ್‌ ಖಾನ್‌ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ತಮ್ಮ ಪುಸ್ತಕದ ಬಗ್ಗೆ ಕಫೀಲ್ ಅವರು ಆಗಸ್ಟ್ 10, 2017 ರ ಸಂಜೆ ಗೋರಖ್‌ಪುರದ ಸರ್ಕಾರಿ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನ ನೆಹರು ಆಸ್ಪತ್ರೆಯಲ್ಲಿ ಹೇಳಿದರು. ದುರಂತದ ಸುದ್ದಿಯು ರಾಷ್ಟ್ರೀಯ ಗಮನವನ್ನು ಸೆಳೆಯುತ್ತಿದ್ದಂತೆ, ಬಿಕ್ಕಟ್ಟನ್ನು ನಿಯಂತ್ರಿಸಲು ಅವಿರತವಾಗಿ ಕೆಲಸ ಮಾಡಿದ್ದಕ್ಕಾಗಿ ಮತ್ತು ದುರಸ್ತಿಯ ಅಗತ್ಯವಿರುವ ಆರೋಗ್ಯ ವ್ಯವಸ್ಥೆಯತ್ತ ಗಮನ ಸೆಳೆದಿದ್ದಕ್ಕಾಗಿ ಅವರನ್ನು "ಹೀರೋ" ಎಂದು ಕರೆಯಲಾಯಿತು. ಆದರೆ ಕೆಲವು ದಿನಗಳ ನಂತರ, ಭ್ರಷ್ಟಾಚಾರ ಮತ್ತು ಇತರ ಗಂಭೀರ ಆರೋಪಗಳ ಜೊತೆಗೆ ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಅವರು ಸೇರಿದಂತೆ ಒಂಬತ್ತು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ನಂತರ ಅವರು ಜೈಲು ಪಾಲಾಗಬೇಯಿತು ಎಂದು ಅವರು ಹೇಳಿದರು.

ಕಫೀಲ್ ಅವರನ್ನು ಜನವರಿ 2020 ರಲ್ಲಿ ಬಂಧಿಸಲಾಯಿತು ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಅವರ ಉದ್ರೇಕಕಾರಿ ಭಾಷಣಕ್ಕಾಗಿ ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಅಡಿಯಲ್ಲಿ ಆರೋಪ ಹೊರಿಸಲಾಯಿತು ಮತ್ತು ಅಲಹಾಬಾದ್ ಹೈಕೋರ್ಟ್ ಅವರ ವಿರುದ್ಧ NSA ಆರೋಪವನ್ನು ಕೈಬಿಡುವ ಮೊದಲು ಐದು ತಿಂಗಳು ಜೈಲಿನಲ್ಲಿ ಕಳೆದರು.

English summary
Paediatrician Dr Kafeel Khan, whose name surfaced in the 2017 BRD Medical college tragedy in which several children died allegedly for lack of oxygen, said on Tuesday that he may contest against Uttar Pradesh Chief Minister Yogi Adityanath from Gorakhpur if any party supports him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X