• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದಲ್ಲಿ ತೆಲಂಗಾಣ ಮಾದರಿ ವಿದ್ರಾವಕ ಅತ್ಯಾಚಾರ

|

ಲಖನೌ, ಡಿಸೆಂಬರ್ 14: ಉತ್ತರ ಪ್ರದೇಶದಲ್ಲಿ ಅತ್ಯಾಚಾರಿಗಳ ಅಟ್ಟಹಾಸ ದಿನೇ-ದಿನೇ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಅತ್ಯಾಚಾರ ಸಂತ್ರಸ್ತಿಯನ್ನು ಆರೋಪಿಯೇ ಹಾಡ-ಹಗಲೇ ಬೆಂಕಿ ಇಟ್ಟು ಸುಟ್ಟು ಕೊಂದಿರುವ ಘಟನೆ ನಡೆದಿದೆ. ಘಟನೆ ನೆನಪು ಆರುವ ಮುನ್ನವೇ ಅಂತಹುದ್ದೇ ವಿದ್ರಾವಕ ಘಟನೆ ನಡೆದಿದೆ.

ಉತ್ತರ ಪ್ರದೇಶದ ಫತೇಪುರ್‌ ಜಿಲ್ಲೆ ಉಭಿಪುರ್‌ ನಲ್ಲಿ ಘಟನೆ ನಡೆದಿದ್ದು, 18 ರ ಯುವತಿಯನ್ನು ಆಕೆಯ ಚಿಕ್ಕಪ್ಪನೇ ಅತ್ಯಾಚಾರಗೈದು ಬೆಂಕಿ ಹಚ್ಚಿದ್ದಾನೆ.

ತೀವ್ರ ಸುಟ್ಟುಗಾಯಗಳಿಂದ ನರಳುತ್ತಿದ್ದ ಯುವತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆಂದು ಕಾನ್ಪುರದ ಲಾಲಾಲಜಪತ ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಕಾಲು ಹೊರತುಪಡಿಸಿ ದೇಹಪೂರ್ತಿ ಸುಟ್ಟಗಾಯಗಳಾಗಿವೆ, ಯುವತಿಯನ್ನು ಐಸಿಯು ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಉನ್ನಾವೊ ಯುವತಿಗೆ ಆದ ಗತಿ ನಿನಗೂ ಆಗುತ್ತೆ; ಬೆದರಿಕೆ

ಮನೆಯಲ್ಲಿಯೇ ಚಿಕ್ಕಪ್ಪ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಯುವತಿ ಮನೆಯವರಿಗೆ ವಿಷಯ ತಿಳಿಸುವುದಾಗಿ ಹೇಳಿದಾಗ ಅಲ್ಲಿಯೇ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಆಕೆಯ ಸಹೋದರ ಮತ್ತು ನೆರೆಹೊರೆಯುವವರು ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಅತ್ಯಾಚಾರಿಗಳಿಗೆ 21 ದಿನಗಳಲ್ಲೇ ಗಲ್ಲುಶಿಕ್ಷೆ

ಕೆಲವೇ ದಿನಗಳ ಹಿಂದಷ್ಟೆ ತೆಲಂಗಾಣದಲ್ಲಿ ಇಂತಹುದೇ ಮಾದರಿಯಲ್ಲಿ ಹತ್ಯೆಯಾಗಿತ್ತು. ಪಶುವೈದ್ಯೆ ಮೇಲೆ ಕಾಮುಖರು ಅತ್ಯಾಚಾರಗೈದು ಬೆಂಕಿ ಹಾಕಿ ಸುಟ್ಟು ಹತ್ಯೆ ಮಾಡಿದ್ದರು. ಅವರನ್ನು ಬಂಧಿಸಿದ ನಂತರ ಎನ್‌ಕೌಂಟರ್‌ ನಲ್ಲಿ ಪೊಲೀಸರು ಕೊಂದರು.

English summary
A young girl raped and set ablaze by her uncle in Uttar Pradesh's Fatehpur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X