ಯುವಕನ ಕುತ್ತಿಗೆಗೆ ಹಗ್ಗ ಹಾಕಿ, ಬೈಕ್ ನಲ್ಲಿ 15 ಕಿ.ಮೀ. ಎಳೆದೊಯ್ದು ಬಿಸಾಡಿದರು
ಲಖನೌ, ಸೆಪ್ಟೆಂಬರ್ 25: ಇಪ್ಪತ್ತೊಂದು ವರ್ಷದ ಯುವಕನ ಕುತ್ತಿಗೆಗೆ ಹಗ್ಗ ಹಾಕಿ, ಅದನ್ನು ಮೋಟಾರ್ ಸೈಕಲ್ ಗೆ ಕಟ್ಟಿ ಹದಿನೈದು ಕಿಲೋಮೀಟರ್ ಗೂ ಹೆಚ್ಚು ದೂರದ ತನಕ ಎಳೆದೊಯ್ದ ಘಟನೆ ಮೀರತ್ ನಲ್ಲಿ ಮಂಗಳವಾರ ನಡೆದಿದೆ. ಯುವಕನ ದೇಹದಲ್ಲಿ ಗುಂಡಿನ ಗಾಯ ಆಗಿದೆ. ಇನ್ನು ಎಡ ಪಾದವೇ ಇಲ್ಲ.
ಯುವಕ ಮುಕುಲ್ ಕುಮಾರ್ ನನ್ನು ಹಗ್ಗ ಹಾಕಿ ಎಳೆದೊಯ್ಯುವ ಮುನ್ನ ಗುಂಡಿಟ್ಟು ಕೊಲ್ಲಲಾಗಿತ್ತೇ ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಖಾತ್ರಿ ಇಲ್ಲ. ಆದರೆ ದೇಹದಲ್ಲಿ ಹಲವೆಡೆ ಗಾಯಗಳಾಗಿವೆ. ಅದರಲ್ಲೂ ಮುಖ ಹಾಗೂ ತಲೆಯ ಹಲವೆಡೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಎಡ ಪಾದವೇ ಇಲ್ಲ. ಮುಕುಲ್ ವಾಸವಿದ್ದ ಹಾಪುರ ಜಿಲ್ಲೆಯ ಮಂಡಿ ಪ್ರದೇಶದ ಬಳಿಯಿಂದ ಹದಿನೈದು ಕಿಲೋಮೀಟರ್ ಉದ್ದಕ್ಕೂ ರಕ್ತದ ಗುರುತುಗಳು ಕಂಡುಬಂದಿವೆ.
ದೇಹವನ್ನು ಅಷ್ಟು ದೂರಕ್ಕೆ ಬೈಕ್ ನಲ್ಲಿ ಎಳೆದೊಯ್ದು, ಮೀರತ್ ನ ಖರ್ ಖೋಡ ಪ್ರದೇಶದಲ್ಲಿ ಹಾಕಲಾಗಿದೆ. ಶವದ ಬಳಿಯೇ ಮೋಟಾರ್ ಸೈಕಲ್ ದೊರೆತಿದೆ. ವಿರೂಪಗೊಂಡಿದ್ದ ಶವವನ್ನು ದಾರಿಹೋಕರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತುಂಬಾ ಸಂಕೋಚ ಸ್ವಭಾವದ ಮುಕುಲ್ ಗೆ ಯಾರ ಜತೆಗೂ ಶತ್ರುತ್ವ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಸ್ನೇಹಿತರ ಮಧ್ಯದ ಭಿನ್ನಾಭಿಪ್ರಾಯದಲ್ಲಿ ಈ ಘಟನೆ ನಡೆದಿರಬಹುದು. ಫೋನ್ ಕರೆಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಇನ್ನಷ್ಟು ಮಾಹಿತಿ ಸಿಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications