ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಹರಿದು ಬಂದ ರೊಟ್ಟಿ
ಕೊಪ್ಪಳ, ಜನವರಿ 12: ದಕ್ಷಿಣ ಭಾರತದ ಬೃಹತ್ ಕುಂಭಮೇಳ ಎಂದೇ ಬಿಂಬಿತವಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ವಿವಿಧ ಕಡೆಗಳಿಂದ ರೊಟ್ಟಿಗಳು ಬಂದಿವೆ.
ರೊಟ್ಟಿ ಜಾತ್ರೆ ಎಂದೇ ಕರೆಸಿಕೊಳ್ಳುವ ಈ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಭಕ್ತರು ರೊಟ್ಟಿ ಮಾಡಿ ಕಳಿಸಿದ್ದಾರೆ. ಅಲ್ಲಿ ನಡೆಯುವ ದಾಸೋಹಕ್ಕೆ ಹದಿನೈದು ದಿನಕ್ಕಾಗುವಷ್ಟು ಲಕ್ಷ ಲಕ್ಷ ರೊಟ್ಟಿ ಹರಿದು ಬಂದಿವೆ.
ಇಂದಿನಿಂದ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಭಕ್ತರು ಪಾದಯಾತ್ರೆ, ಬಂಡಿ ಹಾಗೂ ವಾಹನ ಮೂಲಕ ಬರುತ್ತಿದ್ದಾರೆ. ಹಾಗೆ ಬರುವಾಗ ರೊಟ್ಟಿ ಕಳಿಸಿತ್ತೇನೆ ಎಂದು ಹರಕೆ ಹೊತ್ತುಕೊಂಡವರು ಸಾವಿರಾರು ರೊಟ್ಟಿಗಳನ್ನು ಮಾಡಿ ತಂದಿರುತ್ತಾರೆ.

ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರು ಪ್ರಸಾದ ಸ್ವೀಕರಿಸದೇ ಹೋಗುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಖಡಕ್ ಜೋಳದ ರೊಟ್ಟಿ ಭಾರೀ ಫೇಮಸ್ಸು. ಹೀಗಾಗಿ ಅಲ್ಲಿನ ಜನ ಪ್ರತಿ ವರ್ಷ ಸ್ವಯಂ ಪ್ರೇರಿತರಾಗಿ ರೊಟ್ಟಿ ಮಾಡಿ ಕಳಿಸುತ್ತಾರೆ.












Click it and Unblock the Notifications