• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಊಹಾಪೋಹಗಳಿಗೆ ತೆರೆ: ಖ್ಯಾತ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆ

|

ಕೋಲ್ಕತಾ, ಮಾರ್ಚ್ 7: ಖ್ಯಾತ ಬಂಗಾಳಿ ಮತ್ತು ಹಿಂದಿ ನಟ ಮಿಥುನ್ ಚಕ್ರವರ್ತಿ ಭಾನುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಸುವ ಸಮಾವೇಶನಕ್ಕೂ ಮುನ್ನ ಕಮಲ ಪಾಳೆಯಕ್ಕೆ ಮಿಥುನ್ ಸೇರಿಕೊಂಡಿದ್ದಾರೆ.

ಬಿಜೆಪಿಯ ಪಶ್ಚಿಮ ಬಂಗಾಳ ರಾಜ್ಯ ಅಧ್ಯಕ್ಷ ಕೈಲಾಶ್ ವಿಜಯ್ ವರ್ಇಯಾ ಅವರು ಶನಿವಾರ ಬೆಳ್ಗಚಿಯಾ ಪ್ರದೇಶದಲ್ಲಿನ ಮಿಥುನ್ ಚಕ್ರವರ್ತಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದು ಊಹಾಪೋಹಗಳನ್ನು ಸೃಷ್ಟಿಸಿತ್ತು.

"ನಾನು ಮಿಥುನ್ ಚಕ್ರವರ್ತಿ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರು ಶನಿವಾರ ಇಲ್ಲಿ ಆಗಮಿಸಲಿದ್ದಾರೆ. ಅವರ ಜೊತೆಗೆ ವಿಸ್ತೃತ ಚರ್ಚೆ ನಡೆಸಿದ ನಂತರವಷ್ಟೇ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ" ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ತಿಳಿಸಿದ್ದರು.

ತೃಣಮೂಲ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮಿಥುನ್ ಚಕ್ರವರ್ತಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿದ್ದರು. ಸುದ್ದಿ ವಾಹಿನಿ ಒಂದರ ಸ್ಟಾರ್ ಪ್ರಚಾರಕರಾದ ಮಿಥುನ್ ಚಕ್ರವರ್ತಿ ಅಂದಿನ ಸಮಯದಲ್ಲೇ 1.2 ಕೋಟಿ ರೂಪಾಯಿ ಪಡೆದುಕೊಂಡಿದ್ದರು ಎಂಬ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಹ ಪ್ರಶ್ನೆ ಮಾಡಿದ್ದರು. ಈ ಹಣವನ್ನು ತನಿಖಾ ಸಂಸ್ಥೆಗೆ ಹಿಂತಿರುಗಿಸಿದ್ದ ಮಿಥುನ್ ಚಕ್ರವರ್ತಿ ಅವರು ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದರು.

ಎಲ್ಲೆಲ್ಲೂ ಗುಲ್ಲು: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆ?

70 ವರ್ಷದ ಮಿಥುನ್ ಚಕ್ರವರ್ತಿ, ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ 2006ರ ಸಿನಿಮಾ 'ಎಂಎಲ್‌ಎ ಫತಾಕೆಷ್ಟೊ'ದಲ್ಲಿನ ಸಂಭಾಷಣೆ, 'ನಾನು ಇಲ್ಲಿ ನಿನ್ನನ್ನು ಬಾರಿಸಿದರೆ ನಿನ್ನ ದೇಹ ಶವಾಗಾರದಲ್ಲಿ ಸಿಗುತ್ತದೆ' ಈಗಲೂ ಜನಪ್ರಿಯ.

English summary
West Bengal Assembly Election 2021: Popular actor Mithun Chakraborty joins BJP ahead of PM Narendra Modi's rally in Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X