ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೃಣಮೂಲ ಕಾಂಗ್ರೆಸ್ ಛಿದ್ರವಾಗುತ್ತಿದೆ; ಸುವೇಂದು ಅಧಿಕಾರಿ

|
Google Oneindia Kannada News

ಕೋಲ್ಕತ್ತಾ, ಜನವರಿ 01: ಪಶ್ಚಿಮ ಬಂಗಾಳದಲ್ಲಿ ಈಚೆಗಷ್ಟೆ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಸುವೇಂದು ಅಧಿಕಾರಿ, ಟಿಎಂಸಿ ಬಗ್ಗೆ ಅಸಮಾಧಾನಗೊಂಡಿರುವ ನನ್ನ ಸಹೋದರ, ಟಿಎಂಸಿ ಮುಖಂಡ ಸೌಮೇಂದು ಹಲವರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಒಬ್ಬೊಬ್ಬರನ್ನೇ ಕಳೆದುಕೊಂಡು ತೃಣಮೂಲ ಕಾಂಗ್ರೆಸ್ ವಿಭಜನೆಯಾಗುತ್ತಿದೆ ಎಂದು ಹೇಳಿದ್ದಾರೆ.

ಈಚೆಗೆ ಸೌಮೇಂದು ಅವರನ್ನು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಕಾಂತೈ ಪುರಸಭೆ ಆಡಳಿತಾಧಿಕಾರಿ ಹುದ್ದೆಯಿಂದ ತೆಗೆದುಹಾಕಿತ್ತು. ಈ ಕುರಿತು ಶುಕ್ರವಾರ ಪೂರ್ವ ಮಿಡ್ನಾಪುರದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, "ಸೌಮೇಂದು ಕೆಲವು ಕೌನ್ಸಿಲರ್ ಗಳು ಹಾಗೂ ಐದು ಸಾವಿರ ಟಿಸಎಂಸಿ ಕಾರ್ಯಕರ್ತರೊಂದಿಗೆ ಕೇಸರಿ ಪಕ್ಷವನ್ನು ಸೇರಿದ್ದಾರೆ" ಎಂದು ತಿಳಿಸಿದರು. ಮುಂದೆ ಓದಿ...

ಬಂಗಾಳದಲ್ಲಿ ಕಮಲ ಅರಳಿದ ನಂತರವಷ್ಟೇ ನನಗೆ ನಿದ್ದೆ; ಸುವೇಂದು ಅಧಿಕಾರಿ ಶಪಥಬಂಗಾಳದಲ್ಲಿ ಕಮಲ ಅರಳಿದ ನಂತರವಷ್ಟೇ ನನಗೆ ನಿದ್ದೆ; ಸುವೇಂದು ಅಧಿಕಾರಿ ಶಪಥ

"ಟಿಎಂಸಿ ವಿಭಜನೆಯಾಗುತ್ತಿದೆ"

ಸೌಮೇಂದು ಕಾಂತೈನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರೊಂದಿಗೆ ಕೆಲವು ಕೌನ್ಸಿಲರ್ ಗಳು, ಐದು ಸಾವಿರ ತೃಣಮೂಲ ಕಾರ್ಯಕರ್ತರೂ ಬರಲಿದ್ದಾರೆ. ಟಿಎಂಸಿ ವಿಭಜನೆಯಾಗಿ ಹೋಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

 ಪಕ್ಷ ಬದಲಿಸುವ ಸೂಚನೆ ನೀಡಿದ್ದ ಸೌಮೇಂದು

ಪಕ್ಷ ಬದಲಿಸುವ ಸೂಚನೆ ನೀಡಿದ್ದ ಸೌಮೇಂದು

ತೃಣಮೂಲ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಸುವೇಂದು ಈ ಹೇಳಿಕೆ ನೀಡಿದ್ದು, ಗುರುವಾರ ಸುವೇಂದು ಸಹೋದರ ಸೌಮೇಂದು ಪ್ರತಿ ಮನೆಯಲ್ಲೂ ಕಮಲ ಅರಳುತ್ತದೆ ಎಂದು ಹೇಳುವ ಮೂಲಕ ತಾವು ಪಕ್ಷ ಬದಲಿಸಿ ಬಿಜೆಪಿ ಸೇರುವ ಸೂಚನೆ ನೀಡಿದ್ದರು.

ಸುವೇಂದು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮಮತಾ ಸಂಪುಟ ಸಭೆಗೆ ನಾಲ್ವರು ಸಚಿವರ ಗೈರುಸುವೇಂದು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮಮತಾ ಸಂಪುಟ ಸಭೆಗೆ ನಾಲ್ವರು ಸಚಿವರ ಗೈರು

 ಜನವರಿ 8ರಂದು ನಂದಿಗ್ರಾಮದಲ್ಲಿ ಮೆರವಣಿಗೆ

ಜನವರಿ 8ರಂದು ನಂದಿಗ್ರಾಮದಲ್ಲಿ ಮೆರವಣಿಗೆ

ತೃಣಮೂಲ ಕಾಂಗ್ರೆಸ್ ನಲ್ಲಿ ಸುವೇಂದು ತಂದೆ ಶಿಶಿರ್ ಅಧಿಕಾರಿ ಹಾಗೂ ಸಹೋದರ ದಿವ್ಯೇಂದು ಇಬ್ಬರು ಉಳಿದುಕೊಂಡಿದ್ದು, ಅವರು ಪಕ್ಷ ಬಿಡುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಇದೇ ಜನವರಿ 8ರಂದು ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಪ್ರಚಾರ ಮೆರವಣಿಗೆ ನಡೆಯಲಿದ್ದು, ಇದರಲ್ಲಿ ಸುಮಾರು ಒಂದು ಲಕ್ಷ ಜನ ಸೇರಲಿರುವುದಾಗಿ ತಿಳಿಸಿದ್ದಾರೆ.

 ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು

ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು

ಡಿಸೆಂಬರ್ 16ರಂದು ಸುವೇಂದು ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅದಾದ ಮೂರು ದಿನಗಳ ನಂತರ ಶಾಸಕ ಸುನಿಲ್ ಕುಮಾರ್ ಹಾಗೂ ಇತರೆ ಒಂಬತ್ತು ಶಾಸಕರು ಅಮಿತ್ ಶಾ ಮುಂದಾಳತ್ವದಲ್ಲಿ ಬಿಜೆಪಿ ಸೇರಿದ್ದರು. ತನ್ನ ರಾಜಕೀಯ ಜೀವನದಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಕ್ಕೆ ನನಗೇ ನಾಚಿಕೆ ಎನಿಸುತ್ತಿದೆ ಎಂದಿದ್ದರು. ಪೂರ್ವ ಮಿಡ್ನಾಪುರದ ನಂದಿಗ್ರಾಮವನ್ನು ಸುವೇಂದು ಪ್ರತಿನಿಧಿಸುತ್ತಿದ್ದಾರೆ.

English summary
BJP leader Suvendu Adhikari today said his disgruntled brother and TMC leader Soumendu will join the bjp along with a host of other activists,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X