ರವಿಶಂಕರ್ ಗುರೂಜಿ ಕಟ್ಟಡ ನೆಲಸಮಕ್ಕೆ ಸುಪ್ರೀಂ ಆದೇಶ

Recommended Video

      ಶ್ರೀ ಶ್ರೀ ರವಿಶಂಕರ್ ಗುರೂಜಿ ಟ್ರಸ್ಟ್ ಕಟ್ಟಡ ನೆಲಸಮ ಮಾಡಲು ಸುಪ್ರೀಂ ಆದೇಶ | Oneindia Kannada

      ಕೋಲ್ಕತಾ, ನವೆಂಬರ್ 09: ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ರವಿಶಂಕರ್ ಗುರೂಜಿ ಅವರ ಟ್ರಸ್ಟಿಗೆ ಸೇರಿರುವ ಕಟ್ಟಡವನ್ನು ನೆಲಸಮಗೊಳಿಸಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

      ಆರ್ಟ್ ಆಫ್ ಲಿವಿಂಗ್ ನ 3 ಅಂತಸ್ತಿನ ಕಟ್ಟಡ ನೆಲಸಮ ಮಾಡಲು ಕೋಲ್ಕತಾ ನಗರ ಪಾಲಿಕೆಗೆ ಅನುಮತಿ ನೀಡಬಾರದು ಎಂದು ಆರ್ಟ್ ಆಫ್ ಲಿವಿಂಗ್​ನ ಭಾಗವಾಗಿರುವ ವೈದಿಕ್ ಧರ್ಮ ಸಂಸ್ಥಾನ ಟ್ರಸ್ಟ್​ಮನವಿ ಮಾಡಿತ್ತು.

      ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮದನ್ ಬಿ ಲೋಕುರ್ ನೇತೃತ್ವದ ನ್ಯಾಯಪೀಠವು, ಪರಿಸರ ಸೂಕ್ಷ್ಮ ಪ್ರದೇಶದ ಸಂರಕ್ಷಣೆ ದೃಷ್ಟಿಯಿಂದ ಈ ಕಟ್ಟಡವನ್ನು ನೆಲಸಮಗೊಳಿಸುವುದು ಸೂಕ್ತ ಎಂದು ಹೇಳಿದೆ.

      Supreme Court Nod for Pulling Down Sri Sri Trust Building in Kolkata

      ಕೋಲ್ಕತಾದ ಪೂರ್ವಭಾಗದಲ್ಲಿ ಜಲಾನಯನ ಪ್ರದೇಶದಲ್ಲಿರುವ ಈ ಕಟ್ಟಡದಿಂದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಧಕ್ಕೆಯಾಗುತ್ತದೆ ಎಂದು 'ಪೀಪಲ್ಸ್ ಯುನೈಟೆಡ್ ಫಾರ್ ಬೆಟರ್ ಲಿವಿಂಗ್ ಇನ್ ಕಲ್ಕತ್ತ (ಪಬ್ಲಿಕ್) ಎಂಬ ಎನ್ ಜಿಒವೊಂಡು ಎನ್​ಜಿಟಿಗೆ ದೂರು ಸಲ್ಲಿಸಿತ್ತು. ಕಟ್ಟಡ ನೆಲಸಮಕ್ಕೆ ಎನ್ಜಿಟಿ ಆದೇಶ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ವೈದಿಕ ಧರ್ಮ ಸಂಸ್ಥಾನ ಟ್ರಸ್ಟ್ ಮೇಲ್ಮನವಿ ಸಲ್ಲಿಸಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+