• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಭಾಷ್ ಚಂದ್ರ ಬೋಸ್ ಸಂಬಂಧಿ ಚಿತ್ರಾ ನಿಧನಕ್ಕೆ ಮೋದಿ ಸಂತಾಪ

|

ಕೋಲ್ಕತಾ, ಜನವರಿ 8: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಂಬಂಧಿ(ನೇತಾಜಿ ಸೋದರನ ಮಗಳು) ಪ್ರೊ ಚಿತ್ರಾ ಘೋಷ್ ಅವರು ನಿಧನರಾಗಿದ್ದಾರೆ.

90 ವರ್ಷ ವಯಸ್ಸಿನ ಚಿತ್ರಾ ಅವರು ಹೃದಯಸ್ತಂಭನವಾಗಿ ಬೆಳಗ್ಗೆ 10.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಘೋಷ್ ಅವರ ಸೋದರಳಿಯ, ಬಿಜೆಪಿ ಮುಖಂಡ ಚಂದ್ರ ಕುಮಾರ್ ಬೋಸ್ ತಿಳಿಸಿದ್ದಾರೆ.

ನೇತಾಜಿ ಸೋದರ ಶರತ್ ಚಂದ್ರ ಬೋಸ್ ಅವರ ಕಿರಿಯ ಮಗಳು ಪ್ರೊ ಚಿತ್ರಾ ಘೋಷ್ ಅವರ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರೊ ಚಿತ್ರಾ ಘೋಷ್ ಅವರು ಕೋಲ್ಕತ್ತಾದ ಲೇಡಿ ಬ್ರಬೋರ್ನ್ ಕಾಲೇಜಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿದ್ದರು.

ಪ್ರಧಾನಿ ಅವರು ತಮ್ಮ‌ ಟ್ವೀಟ್ ಸಂದೇಶದಲ್ಲಿ "ಪ್ರೊಫೆಸರ್ ಚಿತ್ರಾ ಘೋಷ್ ಅವರು ಶೈಕ್ಷಣಿಕ ಮತ್ತು ಸಮುದಾಯ ಸೇವೆಯಲ್ಲಿ ‌ಅಪ್ರತಿಮ ಕೊಡುಗೆ ನೀಡಿದ್ದಾರೆ. ‌ನೇತಾಜಿ ಬೋಸ್ ಅವರ ಕಡತಗಳ ವರ್ಗೀಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಅವರೊಂದಿಗೆ ಸಮಾಲೋಚನೆ ನಡೆಸಿದ್ದು ನೆನಪಾಗುತ್ತಿದೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬಕ್ಕೆ ಸಂತಾಪಗಳು. ಓಂ ಶಾಂತಿ." ಎಂದು ಹೇಳಿದ್ದಾರೆ.‌

English summary
Netaji Subhas Chandra Bose's niece and eminent academician Chitra Ghosh died on Thursday morning at the age of 90. PM Narendra Modi condoled her death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X