ಅಂಫಾನ್: ಬಂಗಾಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ, 1000 ಕೋಟಿ ನೆರವು

ಕೊಲ್ಕತ್ತಾ, ಮೇ 22: ಅಂಪಾನ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದು, 1000 ಕೋಟಿ ಪರಿಹಾರ ಘೋಷಿಸಿದ್ದಾರೆ.

Recommended Video

      ಭಾಸ್ಕರ್ ರಾವ್ ತೆರವಿಗೆ ಚಿಂತಿಸುತ್ತಿದೆಯಾ ರಾಜ್ಯ ಸರ್ಕಾರ ? | Bhaskar Rao

      ಪಶ್ಚಿಮ ಬಂಗಾಳ ರಾಜ್ಯವನ್ನು ಮತ್ತೆ ಪುನರ್‌ನಿರ್ಮಿಸಲು ಕಂದ್ರ ಸರ್ಕಾರ ಜೊತೆಯಲ್ಲಿರಲಿದೆ. ಕೊರೊನಾ ವೈರಸ್‌ ಜೊತೆಯಲ್ಲಿ ಚಂಡಮಾರುತದ ವಿರುದ್ಧ ಹೋರಾಟ ಮಾಡಬೇಕಾದ ಪರಿಸ್ಥಿತಿ. ಮಮತಾ ಬ್ಯಾನರ್ಜಿಯವರು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.

      ಆಂಫಾನ್ ಚಂಡಮಾರುತದಿಂದ ಉಂಟಾದ ಹಾನಿ ಮತ್ತು ಪೀಡಿತ ಪ್ರದೇಶಗಳ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರವಾದ ಸಮೀಕ್ಷೆ ನಡೆಸಲು ಕೇಂದ್ರದ ತಂಡವು ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

      PM Narendra Modi Announces Rs 1,000cr Immediate Relief for Cyclone Amphan-Hit West Bengal

      ಇಂದು ಬೆಳಿಗ್ಗೆ ಕೊಲ್ಕತ್ತಾಗೆ ಬಂದಿಳಿದ ಮೋದಿ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್‌ ಸ್ವಾಗತಿಸಿದರು. ಅಲ್ಲಿಂದ ಮೂವರು ವಾಯುಪಡೆಯ ಹೆಲಿಕಾಫ್ಟರ್ ಮೂಲಕ ವೈಮಾನಿಕ ಸಮೀಕ್ಷೆ ಆರಂಭಿಸಿದರು. ಅಂಫಾನ್‌ಗೆ ಹೆಚ್ಚು ತುತ್ತಾಗಿರುವ ದಕ್ಷಿಣ ಬಂಗಾಳದಲ್ಲಿ ಮೋದಿ ಗಮನ ಹರಿಸಿದರು.

      ಈ ವೇಳೆ ಅಂಪಾನ್ ಚಂಡಮಾರುತಿಂದ ಉತ್ತರ ಹಾಗೂ ದಕ್ಷಿಣ ಬಂಗಾಳದ ಜಿಲ್ಲೆಗಳು ಹೆಚ್ಚು ಹಾನಿಯಾಗಿದ್ದು, ರಾಜ್ಯದಲ್ಲಿ ಈವರೆಗೂ ಸುಮಾರು 80 ಜನರು ಬಲಿಯಾಗಿರುವ ಬಗ್ಗೆ ಮಮತಾ ಅವರು ಮೋದಿಗೆ ಮಾಹಿತಿ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+