'ಎಕ್ಸ್ ಪೈರಿ ಪಿಎಂ' ಎಂಬ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

ಕೂಚ್ ಬೆಹರ್ (ಪಶ್ಚಿಮ ಬಂಗಾಲ), ಏಪ್ರಿಲ್ 3: ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದರು. ಇದೇ ದಿನವೇ ಮಮತಾ ತಿರುಗೇಟು ನೀಡಿದ್ದಾರೆ. ಮೋದಿ ಅವರನ್ನು ಎಕ್ ಪೈರಿ ಬಾಬು ಎಂದು ಲೇವಡಿ ಮಾಡಿದ್ದಾರೆ. ಇದಕ್ಕೂ ಮುನ್ನ ಪಶ್ಚಿಮ ಬಂಗಾಲದ ಅಭಿವೃದ್ಧಿಗೆ ಅಡ್ಡಿ ಇರುವ ಸ್ಪೀಡ್ ಬ್ರೇಕರ್ ದೀದಿ ಎಂದು ಮೋದಿ ಜರಿದಿದ್ದರು.

ಪಶ್ಚಿಮ ಬಂಗಾಲ ಸರಕಾರ ಜನರು ಹಾಗೂ ರಾಜ್ಯದ ಏಳ್ಗೆಗಾಗಿ ತುಂಬ ಕೆಲಸ ಮಾಡಿದೆ ಎಂದು ಕೂಚ್ ಬೆಹರ್ ಜಿಲ್ಲೆಯಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಅವರು ಹೇಳಿದ್ದಾರೆ. ಟಿಎಂಸಿ ಆಡಳಿತಾವಧಿಯಲ್ಲಿ ಬಂಗಾಲದಲ್ಲಿ ರೈತರ ಆದಾಯ ಮೂರು ಪಟ್ಟು ಹೆಚ್ಚಾಗಿದೆ ಎಂದಿದ್ದಾರೆ.

ಮೋದಿ ಅವರನ್ನು ಎಕ್ಸ್ ಪೈರಿ ಬಾಬು ಹಾಗೂ ಎಕ್ಸ್ ಪೈರಿ ಪಿಎಂ ಎಂದು ಲೇವಡಿ ಮಾಡಿದ ಅವರು, ಧೈರ್ಯವಿದ್ದರೆ ಸಾರ್ವಜನಿಕ ಸಭೆಯಲ್ಲಿ ಅಥವಾ ಟೀವಿಯಲ್ಲಿ ನನ್ನೊಂದಿಗೆ ನೇರ ಚರ್ಚೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿ ಎಂದು ಸವಾಲು ಹಾಕಿದರು.

Mamata Banerjee

"ನಾನು ಮೋದಿಯಲ್ಲ, ನಾನು ಸುಳ್ಳು ಹೇಳುವುದಿಲ್ಲ" ಎಂದ ಮಮತಾ, ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಮಾಡಿರುವ ಕೆಲಸಗಳ ಬಗ್ಗೆ ತಪ್ಪಾದ ಹೇಳಿಕೆಗಳನ್ನು ನೀಡಿದ್ದಾರೆ. ಮೋದಿ ಆಡಳಿತಾವಧಿಯಲ್ಲಿ ದೇಶದಲ್ಲಿ ಹನ್ನೆರಡು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+