ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಮತ್ತೆ ಬಲವರ್ಧಿಸಿಕೊಳ್ಳುತ್ತಿದೆ: ಸೃಜನ್ ಚಕ್ರವರ್ತಿ

ಕೋಲ್ಕತ್ತಾ, ಮಾರ್ಚ್ 02: ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಮತ್ತೆ ಬಲವರ್ಧಿಸಿಕೊಳ್ಳುತ್ತಿದೆ ಎಂದು ಪಕ್ಷದ ನಾಯಕ ಸುಜನ್ ಚಕ್ರವರ್ತಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗಿಂತ ಸಿಪಿಐಎಂ ಹೆಚ್ಚು ಸೀಟುಗಳನ್ನು ಗೆದ್ದಿದೆ, 107 ಸ್ಥಳೀಯ ಸಂಸ್ಥೆಗಳಲ್ಲಿ ಒಂದು ನಗರ ಸಭೆಯನ್ನು ಎಡರಂಗ ಗೆದ್ದಿದೆ. 2018ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಮತ ಪ್ರಮಾಣ ಇಳಿಕೆಯಾಗಿದೆ. ಇದು ರಾಜ್ಯದಲ್ಲಿ ಸಿಪಿಐಎಂ ಮತ್ತೆ ಚಿಗುರಿಕೊಳ್ಳುತ್ತಿರುವ ಲಕ್ಷಣ ಎಂದು ವ್ಯಾಖ್ಯಾನಿಸಿದ್ದಾರೆ.

Sujan

ಹಿಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸಿಪಿಐಎಂ ಲೆಕ್ಕಕ್ಕಿಲ್ಲ ಎಂದು ಪರಿಗಣಿಸಿದ್ದರು ಆದರೆ ಈಗ ನಾದಿಯಾ ಜಿಲ್ಲೆಯ ತಹರೇಪುರ್ ಮುನ್ಸಿಪಾಲಿಟಿಯನ್ನು ಸಿಪಿಐಎಂ ಗೆದ್ದಿದೆ, ಬಿಜೆಪಿ ಯಾವುದೇ ಸ್ಥಳೀಯ ಸಂಸ್ಥೆಗಳನ್ನು ಗೆದ್ದಿಲ್ಲ, ಚುನಾವಣಾ ಅಕ್ರಮಗಳ ಮೂಲಕ ಟಿಎಂಸಿ 100ಕ್ಕೂ ಅಧಿಕ ಕಡೆ ಗೆಲುವು ಸಾಧಿಸಿದೆ.

ಚುನಾವಣೆಯಲ್ಲಿ ಟಿಎಂಸಿ ಸಾಕಷ್ಟು ಕಡೆ ಅಕ್ರಮಗಳನ್ನು ನಡೆಸಿರುವುದು ಬಹಿರಂಗವಾಗಿ ತಿಳಿದುಬಂದಿದೆ, ಇದು ಜನರಲ್ಲಿ ಟಿಎಂಸಿ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಚಕ್ರವರ್ತಿ ಹೇಳಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜ್ಯದ ಹಲವೆಡೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಹಿಂಸಾಚಾರದ ಬಗ್ಗೆ ವರದಿಯಾಗಿದೆ.

ಉತ್ತರ 24 ಪರಗಣದಲ್ಲಿನ ವಾರ್ಡ್ ನಂಬರ್ 9 ರಲ್ಲಿ ಮತದಾನ ವೇಳೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಎರಡು ಇವಿಎಂಗಳನ್ನು ಧ್ವಂಸಗೊಳಿಸಲಾಗಿದೆ. ರಾಜ್ಯಾದ್ಯಂತ ಇದೇ ರೀತಿಯ ಪರಿಸ್ಥಿತಿವೇರ್ಪಟ್ಟಿದೆ. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದು, ಮತದಾನ ಮಾಡಲು ಬಿಡುತ್ತಿಲ್ಲ. ಎಲ್ಲಾ ಬೂತ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಜೆಪಿ ಮುಖಂಡ ಅರ್ಜುನ್ ಸಿಂಗ್ ಆರೋಪಿಸಿದ್ದಾರೆ.

ಪೊಲೀಸರು ಮತ್ತು ರೌಡಿಗಳು ಮಾತ್ರ ಮತದಾನ ಮಾಡುತ್ತಿದ್ದಾರೆ. ಮತ ಹಾಕಲು ಮತದಾರರು ಹೆದರುತ್ತಿದ್ದಾರೆ. ವಿಶೇಷವಾಗಿ ಬೆಂಗಾಲಿ ಜನರಿಗೆ ಮತದಾನಕ್ಕೆ ಅವಕಾಶ ನೀಡುತ್ತಿಲ್ಲ. ಮುಸ್ಲಿಂರು ಕೂಡಾ ಮತದಾನ ಮಾಡದಂತಾಗಿದೆ. ಇಲ್ಲಿನ ಪೊಲೀಸರು ಗಾಂಧೀಜಿ ಅವರ ಮೂರು ಕೋತಿಗಳಲ್ಲಿ ಒಂದರಂತೆ ಆಟವಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+