ಫೋನಿ ಚಂಡಮಾರುತದ ಹೊಡೆತಕ್ಕೆ ಎಂಟು ಮಂದಿ ಬಲಿ

ಕೋಲ್ಕತ್ತ, ಮೇ 04: ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳನ್ನು ಅಪ್ಪಳಿಸಿಸರುವ ಫೋನಿ ಚಂಡಮಾರುತಕ್ಕೆ ಇದುವರೆಗೆ ಎಂಟು ಜನರು ಮೃತರಾಗಿದ್ದಾರೆ.

ಸದ್ಯಕ್ಕೆ ಒಡಿಶಾದಲ್ಲಿ ಫೋನಿ ಅಬ್ಬರ ತಗ್ಗಿದ್ದು, ಪಶ್ಚಿಮ ಬಂಗಾಳದತ್ತ ಅದು ದಿಕ್ಕು ಬದಲಿಸಿದೆ. ಈಗಾಗಲೇ ಒಡಿಶಾದಲ್ಲಿ 11 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 600 ಕ್ಕೂ ಹೆಚ್ಚು ಗರ್ಭಿಣಿಯರನ್ನು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

Cyclone Fani: at least 8 people died so far

ಇಂದು ಬೆಳಿಗ್ಗೆಯಷ್ಟೇ 'ಫೋನಿ' ಪಶ್ಚಿಮ ಬಂಗಾಳದ ಖರಗ್ಪುರ ಮೂಲಕ ಪ್ರವೇಶಿಸಿದ್ದು, ಈಶಾನ್ಯ ದಿಕ್ಕಿನತ್ತ ಗಂಟೆಗೆ 90 ಕಿಮೀ ವೇಗದಲ್ಲಿ ಚಲಿಸಲಿದೆ. ಭುವನೇಶ್ವರದಿಂದ ಹೊರಡಬೇಕಿದ್ದ ಎಲ್ಲ ವಿಮಾನಗಳನ್ನು ಮಧ್ಯರಾತ್ರಿಯೇ ರದ್ದು ಮಾಡಲಾಗಿದೆ.

ಶನಿವಾರ ಮಧ್ಯಾಹ್ನ 1 ಗಂಟೆಯ ನಂತರ ಮತ್ತೆ ವಿಮಾನ ಹಾರಟ ಆರಂಭವಾಗಲಿದೆ. ಕೋಲ್ಕತ್ತಾ ವಿಮಾನ ನಿಲ್ದಾಣವನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಶನಿವಾರ ಬೆಳಿಗ್ಗೆ 8 ಗಂಟೆಯ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+