ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ: ಓರ್ವ ಬಲಿ
ಕೋಲ್ಕತ್ತಾ, ನವೆಂಬರ್ 02: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನ ತುಫಂಗಂಜ್ ಎಂಬಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತನಾಗಿದ್ದಾನೆ.
ಗುರುವಾರ ತಡರಾತ್ರಿ ಸಂಭವಿಸಿದ ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಬಾಂಬ್ ಯಾವ ಮಾದರಿಯದು ಮತ್ತು ಇದರಲ್ಲಿ ಉಗ್ರ ಸಂಘಟನೆಯ ಕೈವಾಡವಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ.
ಗುರುವಾರವಷ್ಟೇ ಅಸ್ಸಾಮಿನ ತುನ್ಸುಕಿಯಾ ಜಿಲ್ಲೆಯ ಖೆರ್ಬಾರಿ ಎಂಬಲ್ಲಿ ಶಂಕಿತ ಉಲ್ಫಾ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಮೃತರಾಗಿದ್ದಾರೆ.

ಅಂಗಡಿಯ ಬಳಿ ನಿಂತಿದ್ದ ಐವರು ಯುವಕರನ್ನು ಇಲ್ಲಿನ ಬ್ರಹ್ಮಪುತ್ರಾ ನದಿಯ ತಟಕ್ಕೆ ಕರೆದೊಯ್ದು ಒಬ್ಬರಾದ ನಂತರ ಒಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಈ ಘಟನೆಯಿಂದಾಗಿ ತುನ್ಸುಕಿಯಾ ಜಿಲ್ಲೆಯಾದ್ಯಂತ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಕೆಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.











Click it and Unblock the Notifications