ವಿಡಿಯೋ; ಡ್ಯಾನ್ಸ್ ಮಾಡುವಾಗ ಪ್ರಾಣಬಿಟ್ಟ ಕೋಲಾರ ವಿದ್ಯಾರ್ಥಿನಿ
Recommended Video
ಕೋಲಾರ,
ಜನವರಿ 24: ನೃತ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಕೋಲಾರದಲ್ಲಿ ನಡೆದಿದೆ. ಆ ವಿದ್ಯಾರ್ಥಿನಿ ಬಿದ್ದಿದ್ದನ್ನು ಕಂಡರೂ ತಕ್ಷಣವೇ ಸಹಾಯಕ್ಕೆ ಮುಂದಾಗದೆ ಶಿಕ್ಷಕ ನಿರ್ಲಕ್ಷ್ಯ ವಹಿಸಿದ್ದು, ಈ ದೃಶ್ಯಗಳೆಲ್ಲವೂ ಸಿಸಿ ಟಿವಿಯಲ್ಲಿ ದಾಖಲಾಗಿವೆ. id="toptextpromo"> id='are-slot-1' class='oiad oi-axt oiadv'>ಕೋಲಾರ
ಜಿಲ್ಲೆಯ ಬೇತಮಂಗಲ ಹೋಬಳಿಯ ಟಿ ಗೊಲ್ಲಹಳ್ಳಿ ಗ್ರಾಮದ ಬಳಿಯಿರುವ ವಿಮಲ ಹೃದಯ ಸಂಸ್ಥೆಯಲ್ಲಿ ಓದುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಪೂಜಿತಾ ಸಾವನ್ನಪ್ಪಿದ ವಿದ್ಯಾರ್ಥಿನಿ. ಶಾಲಾ ವಾರ್ಷಿಕೋತ್ಸವದ ಸಲುವಾಗಿ ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. id='are-slot-2' class='oiad oi-axt oiadv'>
ಶನಿವಾರದ ಶಾಲಾ ವಾರ್ಷಿಕೋತ್ಸವಕ್ಕೆ ನೃತ್ಯಾಭ್ಯಾಸ
ಜನವರಿ 25, ಶನಿವಾರದಂದು ವಿಮಲ ಹೃದಯ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭವಿತ್ತು. ಆ ವಾರ್ಷಿಕೋತ್ಸವದ ಸಲುವಾಗಿ ಶಾಲೆಯಲ್ಲಿ ನಿನ್ನೆ ಮಧ್ಯಾಹ್ನ ಶಿಕ್ಷಕರ ನೇತೃತ್ವದಲ್ಲಿ ಏಳು ವಿದ್ಯಾರ್ಥಿನಿಯರು ನೃತ್ಯಾಭ್ಯಾಸದಲ್ಲಿ ತೊಡಗಿದ್ದರು. ಈ ಸಂದರ್ಭ ಇದ್ದಕ್ಕಿದ್ದಂತೆ ಪೂಜಿತಾ ಕುಸಿದುಬಿದ್ದಿದ್ದಾಳೆ.

ಶಿಕ್ಷಕರ ನಿರ್ಲಕ್ಷ್ಯ ಕಾರಣ; ವಿದ್ಯಾರ್ಥಿನಿ ಸಂಬಂಧಿಕರ ಆರೋಪ
ಪೂಜಿತಾ ಬಿದ್ದ ತಕ್ಷಣ ಬೇರೆ ವಿದ್ಯಾರ್ಥಿನಿಯರು ಕೂಗಿಕೊಂಡಿದ್ದಾರೆ. ಸಹಪಾಠಿಗಳು ಗಾಬರಿಗೊಂಡು ಕೂಗಿದ್ದಾರೆ. ಆದರೆ ಶಿಕ್ಷಕ ಕೂತ ಜಾಗದಿಂದ ಕದಲಲೇ ಇಲ್ಲ. ಎಲ್ಲಾ ವಿದ್ಯಾರ್ಥಿನಿಯರೂ ಹತ್ತಿರ ಬಂದು ನೋಡಿ, ಗಾಬರಿಯಾದಾಗಲೂ ಕುಳಿತೇ ಇದ್ದರು. ವಿದ್ಯಾರ್ಥಿನಿಯರು ಹೊರಗೆ ಓಡಿದ ನಂತರ ನಿಧಾನವಾಗಿ ಹತ್ತಿರ ಬಂದು ನೋಡಿ ಸುಮ್ಮನಾಗಿದ್ದಾರೆ.

ಹತ್ತು ನಿಮಿಷದ ನಂತರ ಆಸ್ಪತ್ರೆಗೆ ದಾಖಲು
ವಿದ್ಯಾರ್ಥಿನಿಯರೇ ಹೋಗಿ ಹೊರಗಿದ್ದವರನ್ನು ಕರೆದಿದ್ದಾರೆ. ನಂತರ ಆಕೆಯನ್ನು ಹತ್ತು ನಿಮಿಷದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವಿದ್ಯಾರ್ಥಿನಿ ಬಿದ್ದ ತಕ್ಷಣವೇ ಸಾವನ್ನಪ್ಪಿರುವುದಾಗಿ ಸಂಬಂಧಿಗಳು ದೂರಿದ್ದಾರೆ. ವೈದ್ಯರು, ಹೃದಯ ಸ್ತಂಭನವಾಗಿ ಆಕೆ ಬಿದ್ದು ಸಾವನ್ನಪ್ಪಿರಬಹುದು ಎಂದಿದ್ದಾರೆ.
|
"ಬೇಗ ಆಸ್ಪತ್ರೆಗೆ ಸೇರಿಸಿದ್ದರೆ ಉಳಿಸಿಕೊಳ್ಳಬಹುದಿತ್ತು"
ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದ, ಅದರೆಡೆಗೆ ನಿರ್ಲಕ್ಷ್ಯ ತೋರಿದ ಶಿಕ್ಷಕನ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ವಿದ್ಯಾರ್ಥಿನಿ ಕುಸಿದುಬಿದ್ದಾಗ ಶಿಕ್ಷಕ ನಿರ್ಲಕ್ಷ್ಯ ವಹಿಸಿದ್ದಾರೆ. "ಇನ್ನಷ್ಟು ಬೇಗ ಆಸ್ಪತ್ರೆಗೆ ದಾಖಲಿಸಿದ್ದರೆ ಪೂಜಿತಾಳನ್ನು ಉಳಿಸಿಕೊಳ್ಳಬಹುದಿತ್ತು" ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications