ಕೋಲಾರದಲ್ಲಿ ಭೀಕರ ಅಪಘಾತ: ಮೂವರು ಯುವಕರ ದುರ್ಮರಣ
ಕೋಲಾರ, ಆಗಸ್ಟ್ 4: ಕೋಲಾರ ಜಿಲ್ಲೆಯ ಮಡೇರಹಳ್ಳಿ ಬಳಿ ಇಂದು(ಆಗಸ್ಟ್ 4) ನಡೆದ ಭೀಕರ ಅಪಘಾತದಲ್ಲಿ 3 ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಡೇರಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ಸಂಭವಿಸಿದ್ದು, ಮೃತರನ್ನು ಸುಭಾಷ್, ಶ್ರೀಹರಿ, ರೋಹನ್ ಎಂದು ಗುರುತಿಸಲಾಗಿದೆ. ಮೂವರೂ 30 ವರ್ಷದೊಳಗಿನ ಯುವಕರು ಎನ್ನಲಾಗುತ್ತಿದ್ದು, ಮೃತರ ಕುರಿತು ಸ್ಪಷ್ಟ ಮಾಹಿತಿ ದೊರಕಿಲ್ಲ.

ಸ್ನೇಹಿತನ ಜನ್ಮದಿನ ಆಚರಿಸಿ ಕಾರಿನಲ್ಲಿ ಬರುತ್ತಿದ್ದ ಸಮಯದಲ್ಲಿ ಕಾರು ರಸ್ತೆಯ ಡಿವೈಡರ್ ಗೆ ಡಿಕ್ಕಿಹೊಡೆದಿದೆ. ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಬಸ್ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications