ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆಗೆ ಬಂದ ನೀರು ಕಂಡು ಕಣ್ಣೀರಿಟ್ಟ ರಮೇಶ್‌ ಕುಮಾರ್

|
Google Oneindia Kannada News

ಕೋಲಾರ, ಜೂನ್ 2: ಕೋಲಾರ ಜಿಲ್ಲೆಗೆ ಮೊದಲ ನೀರಾವರಿ ಯೋಜನೆಯ ಕನಸು ಸಾಕಾರಗೊಂಡಿದ್ದನ್ನು ಕಂಡು ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸಂತೋಷದಿಂದ ಕಣ್ಣೀರಿಟ್ಟರು.

ಮಾಧ್ಯಮಗಳ ಎದುರು ಮಾತಿಗೆ ನಿಂತ ರಮೇಶ್ ಕುಮಾರ್ ಅವರು ತಾಯಿಯನ್ನು ನೆನಪಿಸಿಕೊಂಡು ಭಾವುಕರಾಗಿ ಕಣ್ಣೀರು ಸುರಿಸಿದರು.

ಸ್ಪೀಕರ್ ಮಾಡಿರೆಂದು ಕೇಳಿರಲಿಲ್ಲ, ಅದು ವರಿಷ್ಠರ ಆದೇಶ: ರಮೇಶ್ ಕುಮಾರ್‌ಸ್ಪೀಕರ್ ಮಾಡಿರೆಂದು ಕೇಳಿರಲಿಲ್ಲ, ಅದು ವರಿಷ್ಠರ ಆದೇಶ: ರಮೇಶ್ ಕುಮಾರ್‌

ಕೋಲಾರದ ಕೆ.ಸಿ. ವ್ಯಾಲಿಯಲ್ಲಿರುವ ಲಕ್ಷ್ಮೀಸಾಗರ ಕೆರೆಗೆ ನೀರು ಹಾಯಿಸಲಾಗಿದೆ. ಸ್ವಾತಂತ್ರ್ಯಾನಂತರ ಇದು ಜಿಲ್ಲೆಗೆ ಬಂದಿರುವ ಮೊಟ್ಟ ಮೊದಲ ನೀರಾವರಿ ಯೋಜನೆಯಾಗಿದೆ.

ramesh kumar tears after inaugurating first water project of kolar

ಇದರಿಂದ ಸುತ್ತಮುತ್ತಲ ಪ್ರದೇಶಗಳ ಜನರ ಕುಡಿಯುವ ಮತ್ತು ಕೃಷಿ ಕಾರ್ಯಗಳಿಗೆ ಇದ್ದ ನೀರಿನ ಕೊರತೆ ಶಮನವಾಗಲಿದೆ.

ಯೋಜನೆಯನ್ನು ಉದ್ಘಾಟಿಸಿದ ರಮೇಶ್ ಕುಮಾರ್, ಜಿಲ್ಲೆಗೆ ಈ ನೀರಾವರಿ ಯೋಜನೆ ದೊರೆತಿದ್ದು ಪೂರ್ವಜನ್ಮದ ಪುಣ್ಯ ಎಂದರು.

ಚಿನ್ನದ ನಾಡು ಕೋಲಾರದಲ್ಲಿ ಕಾಂಗ್ರೆಸ್ಸಿಗರೇ 'ಬಂಗಾರ'ದ ಮನುಷ್ಯರು!ಚಿನ್ನದ ನಾಡು ಕೋಲಾರದಲ್ಲಿ ಕಾಂಗ್ರೆಸ್ಸಿಗರೇ 'ಬಂಗಾರ'ದ ಮನುಷ್ಯರು!

ಬಳಿಕ ಭಾವುಕರಾದ ಅವರು, 'ನನ್ನ ತಾಯಿಯನ್ನು ನೆನಪಿಸಿಕೊಳ್ಳುತ್ತೇನೆ. ಆಕೆಗೆ ಬೇರೆ ಏನೂ ತಿಳಿದಿರಲಿಲ್ಲ. ಬಹಳ ಮುಗ್ಧೆ. ಆಕೆ ಇದ್ದಿದ್ದರೆ ಸಂತೋಷಪಡುತ್ತಿದ್ದಳು' ಎಂದು ಕಣ್ಣೀರು ಸುರಿಸಿದರು.

English summary
Assembly speaker and senior congress leader Ramesh Kumar got emotional after he inaugurated the first water project to Lakshmisagar lake in Kolar since independence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X