ಕೋಲಾರ ನೀರಿನ ಸಮಸ್ಯೆ ನೀಗಿಸುವೆ: ಜನಾರ್ದನ ರೆಡ್ಡಿ ಭರವಸೆ
ಕೋಲಾರ, ಮೇ 5: ''ಕೋಲಾರ ಜಿಲ್ಲೆ ಎದುರಿಸುತ್ತಿರುವ ನೀರಿನ ಸಮಸ್ಯೆಯ ಸ್ಪಷ್ಟ ಅರಿವು ನನಗಿದ್ದು, ಶೀಘ್ರದಲ್ಲೇ ಈ ಜಿಲ್ಲೆಯ ನೀರಿನ ಸಮಸ್ಯೆಯನ್ನು ನೀಗಿಸುತ್ತೇನೆ'' ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಗಾಲಿ ಜನಾರ್ಧನ ರೆಡ್ಡಿ ಭರವಸೆ ನೀಡಿದ್ದಾರೆ.
ವಾಸವಿ ಜಯಂತಿ ಸಮಾರಂಭದ ಪ್ರಯುಕ್ತ ಮೇ 5ರಂದು ಕೋಲಾರಕ್ಕೆ ಆಗಮಿಸಿದ್ದ ರೆಡ್ಡಿ, ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಆಶಿಸಿದ ರೆಡ್ಡಿ, ಸದ್ಯಕ್ಕೆ ರಾಜ್ಯ ಬಿಜೆಪಿಯಲ್ಲಿ ಇರುವ ಭಿನ್ನಮತೀಯತೆ ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಇಲ್ಲವೆಂದು ಇದೇ ವೇಳೆ ಸ್ಪಷ್ಟಪಡಿಸಿದ ಅವರು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ವಹಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವುದಾಗಿ ಹೇಳಿದರು.












Click it and Unblock the Notifications