ಸ್ಪೀಕರ್ ಮಾಡಿರೆಂದು ಕೇಳಿರಲಿಲ್ಲ, ಅದು ವರಿಷ್ಠರ ಆದೇಶ: ರಮೇಶ್ ಕುಮಾರ್‌

ಕೋಲಾರ, ಮೇ 30: 'ನನ್ನನ್ನು ಸಭಾಧ್ಯಕ್ಷನನ್ನಾಗಿ ಮಾಡಿರೆಂದು ನಾನು ಯಾವ ಕಾಂಗ್ರೆಸ್‌ ಮುಖಂಡರನ್ನೂ ಕೇಳಿರಲಿಲ್ಲ, ಅದು ಹೈಕಮಾಂಡ್ ಆದೇಶ ಹಾಗಾಗಿ ಪಾಲಿಸಿದ್ದೇನೆ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಮಾಡುವ ಮೂಲಕ ನನ್ನ ಕೈ-ಬಾಯಿ ಕಟ್ಟಿಹಾಕ ಬಹುದು ಎಂದು ಯಾದರೂ ಅಂದು ಕೊಂಡಿದ್ದರೆ ಅದು ಸುಳ್ಳು, ಆ ರೀತಿಯ ಪ್ರಯತ್ನ ಮಾಡಿದವರನ್ನೇ ಕಟ್ಟಿ ಹಾಕುತ್ತೇನೆ ಎಂದು ಅವರು ಹೇಳಿದರು.

ಸಚಿವ ಸ್ಥಾನ ಬಿಟ್ಟು ಸ್ಪೀಕರ್ ಸ್ಥಾನ ಸ್ವೀಕರಿಸಿದಕ್ಕೆ ಬೇಸರವಿಲ್ಲ ಎಂದ ಅವರು, ಸ್ಪೀಕರ್ ಆದ ತಕ್ಷಣ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದು ಸುಳ್ಳು, ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುತ್ತದೆ, ಜೂನ್ 7 ರಂದು ಕೆ.ಸಿ.ವ್ಯಾಲಿಯನ್ನು ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರು ಉದ್ಘಾಟಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

I would not ask any body to make me as speaker: Ramesh Kumar

ಇದೇ ಕೆ.ಸಿ.ವ್ಯಾಲಿಯನ್ನು ಈ ಹಿಂದೆ ಕುಮಾರಸ್ವಾಮಿ ಅವರು ವಿರೋಧಿಸಿದ್ದರು ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರೇ ಅದನ್ನು ಉದ್ಘಾಟಿಸಲಿದ್ದಾರೆ. ಈಗ ಅವರು ವಿರೋಧಿಸುವಂತಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+