ಭಾರತ ಬಂದ್: ಮಾಲೂರಿನ ಗಣೇಶ್ ಹೋಟೆಲ್ ಮಾಲೀಕನ ಮೇಲೆ ಹಲ್ಲೆ

ಕೋಲಾರ, ಸೆಪ್ಟೆಂಬರ್ 10: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಬಲವಂತವಾಗಿ ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಮಾಲೂರಿನಲ್ಲಿರುವ ಗಣೇಶ ಭವನದ ಮಾಲೀಕ ಬಂದ್ ಗೆ ಬೆಂಬಲ ನೀಡಿಲ್ಲ ಎನ್ನುವ ಕಾರಣಕ್ಕಾಗಿ ಅವರಿಗೆ ಥಳಿಸಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

Bharath bandh:Congress wokers attack hotel in Kolar

ಮಧು ಹಲ್ಲೆಗೊಳಗಾದವರು, ಮಾಲೂರಿನ ಗಣೇಶ್ ಹೋಟೆಲ್ ಎಂದಿನಂತೆ ಬಾಗಿಲು ತೆರದಿತ್ತು, ಹಲವು ಕಾರ್ಯಕರ್ತರು ಬಂದು ಬಾಗಿಲು ಮುಚ್ಚಲು ತಿಳಿಸಿದ್ದಾರೆ, ನಿರಾಕರಿಸಿದ ಮಧು ಮೇಲೆ ಹಲ್ಲೆ ನಡೆಸಿದ್ದಾರೆ, ಸಂದರ್ಭದಲ್ಲಿ ಮಧು ಬಿಜೆಪಿ ಸರ್ಕಾರದ ಪರವಾಗಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ಕಾರ್ಯಕರ್ತರು ಆತನ ಮೇಲೆ ಹಲ್ಲೆ ನಡೆಸುವುದರ ಜತೆಗೆ ಹೋಟೆಲ್‌ನಲ್ಲಿರುವ ತಿಂಡಿಯನ್ನೇಲ್ಲಾ ಚೆಲ್ಲಿ ತಮ್ಮ ದರ್ಪ ಮೆರೆದಿದ್ದಾರೆ.

Bharath bandh:Congress wokers attack hotel in Kolar

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಪೆಟ್ರೋಲ್ ಮೇಲಿನ ವ್ಯಾಟ್ ಕಡಿಮೆ ಮಾಡುವ ಕುರಿತು ಕರ್ನಾಟಕ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ, ಇನ್ನು ಕೇಂದ್ರ ಸರ್ಕಾರ ದರ ಕಡಿಮೆ ಮಾಡುವ ಬಗ್ಗೆ ಆಲೋಚಿಸಿಲ್ಲ, ಹೀಗಾಗಿ ಸಾಮಾನ್ಯ ಜನರಿಗೆ ಬರೆ ಎಳೆದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+