ಎಸಿಬಿ ದಾಳಿ; ಕೋಲಾರ ಡಿಹೆಚ್‌ಓ ಮನೆಯಲ್ಲಿ ಸಿಕ್ಕಿದ್ದೇನು?

ಕೋಲಾರ, ಫೆಬ್ರವರಿ 02: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಕೋಲಾರದ ಡಿಹೆಚ್‌ಓ ಡಾ. ಎನ್. ಎಸ್. ವಿಜಯ್ ಕುಮಾರ್ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ. ಕೋಟ್ಯಾಂತರ ರೂಪಾಯಿ ಆಸ್ತಿ ಈ ವೇಳೆ ಪತ್ತೆಯಾಗಿದೆ.

ಮಂಗಳವಾರ ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಡಾ. ವಿಜಯ್ ಕುಮಾರ್ ಮನೆ, ಕೋಲಾರದ ಕಚೇರಿ, ಮುಳಬಾಗಿಲು ಮನೆ, ಖಾಸಗಿ ಆಸ್ಪತ್ರೆ, ಚಿಂತಾಮಣಿಯಲ್ಲಿನ ಮನೆ, ಬೆಂಗಳೂರಿನ ಪ್ಲಾಟ್ ಸೇರಿ ಒಟ್ಟು ಆರು ಕಡೆ ಏಕಕಾಲದಲ್ಲಿ ದಾಳಿ ಮಾಡಿದ್ದರು.

ಸಂಜೆಯ ವೇಳೆಗೆ ಪರಿಶೀಲನೆ ಪೂರ್ಣಗೊಂಡಿದ್ದು ಅಪಾರ ಪ್ರಮಾಣದ ಹಣ, ಆಸ್ತಿಯ ಪತ್ರಗಳು ಪತ್ತೆಯಾಗಿವೆ. ದಾಳಿ ವೇಳೆ ಮೂರು ವಾಸದ ಮನೆಗಳು, ಬೆಂಗಳೂರಿನಲ್ಲಿ ಮೂರು ಪ್ಲಾಟ್​, ಮೂರು ನಿವೇಶನ, ಒಂದು ಖಾಸಗಿ ಆಸ್ಪತ್ರೆ ಇರುವುದು ಪತ್ತೆಯಾಗಿದೆ.

 ACB Conducts Raid On Kolar DHO Dr SN Vijaykumar House

ಎರಡು ಕಾರು, ಒಂದು ಬೈಕ್​, ಬ್ಯಾಂಕ್​ ಖಾತೆಯಲ್ಲಿ 61,21,352 ರೂಪಾಯಿ ಹಣ, ಹತ್ತು ಲಕ್ಷ ನಗದು, 1 ಎಕರೆ 13 ಗುಂಟೆ ಕೃಷಿ ಜಮೀನು ಇರುವುದು ಪತ್ತೆಯಾಗಿದೆ.

ಇನ್ನು ಡಾ. ವಿಜಯ್ ಕುಮಾರ್ ಹಲವು ವರ್ಷಗಳಿಂದಲೂ ಕೋಲಾರದಲ್ಲಿಯೇ ಇದ್ದಾರೆ. ಅನೇಕ ಹಗರಣದಲ್ಲಿಯೂ ಅವರು ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.

ಕೋಲಾರದಲ್ಲಿ ಡಿಹೆಚ್ಓ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಅವರು ಖಾಸಗಿ ಆಸ್ಪತ್ರೆಯನ್ನು ಹೊಂದಿದ್ದಾರೆ. ದಾಳಿಯ ಬಳಿಕ ಎಸಿಬಿ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ? ಎಂದು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+