ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವದಂತಿಗಳಿಗೆ ಕಿವಿಕೊಡಬೇಡಿ, ವ್ಯಾಕ್ಸಿನ್ ಅತ್ಯಂತ ಸುರಕ್ಷಿತ: ಜಿಲ್ಲಾಧಿಕಾರಿ

|
Google Oneindia Kannada News

ಕಾರವಾರ, ಫೆಬ್ರವರಿ 12: ವದಂತಿಗಳಿಗೆ ಕಿವಿಕೊಡಬೇಡಿ, ಕೊವಿಡ್ ವ್ಯಾಕ್ಸಿನ್ ಅತ್ಯಂತ ಸುರಕ್ಷಿತವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ಕಾರವಾರ ಕ್ರಿಮ್ಸಗೆ ಭೇಟಿ ನೀಡಿ ಕೊವಿಡ್ ವ್ಯಾಕ್ಸಿನ್ ನೀಡುವ ಕಾರ್ಯವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಸ್ವತಃ ತಾವೇ ಕೊವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ಯಾವುದೇ ವದಂತಿಗಳನ್ನು ನಂಬದೇ ಎಲ್ಲಾ ಮೂಂಚೂಣಿ ಕೋವಿಡ್ ವಾರಿಯರ್ಸ್ ಗಳು ಕೋವಿಡ್ ಲಸಿಕೆಯನ್ನು ಸ್ವಯಂ ಪ್ರೇರೇಪಿತರಾಗಿ ಪಡೆದುಕೊಳ್ಳಬೇಕು ಎಂಬ ಸಂದೇಶ ನೀಡಿದರು.

ಹಾಲಕ್ಕಿ ಸಂಸ್ಕೃತಿ ಸಂವರ್ಧನೆಗೆ ತುಳಸಿ ಗುರುಕುಲ ಸ್ಥಾಪನೆಹಾಲಕ್ಕಿ ಸಂಸ್ಕೃತಿ ಸಂವರ್ಧನೆಗೆ ತುಳಸಿ ಗುರುಕುಲ ಸ್ಥಾಪನೆ

ಕೊರೊನಾ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಕೆಲ ಸಣ್ಣ ಪುಟ್ಟ ಸಾಮಾನ್ಯ ಅಡ್ಡ ಪರಿಣಾಮಗಳು ಕೆಲವರಲ್ಲಿ ಕಂಡು ಬಂದರೂ ಸಹ ಇದರಲ್ಲಿ ಯಾವುದೇ ಅಪಾಯವಿಲ್ಲ ಎಂದು ಅಲ್ಲಿ ಲಸಿಕೆ ಪಡೆದುಕೊಳ್ಳಲು ಬಂದಿದ್ದ ಸಿಬ್ಬಂದಿಗಳಿಗೆ ತಿಳಿಸಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಅವರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಕೂಡಾ ಲಸಿಕೆ ಪಡೆದುಕೊಂಡರು.

Karwar: Dont Heed The Rumors, The Vaccine Is The Safest: Uttar Kannada DC

ಈ ಸಂದರ್ಭದಲ್ಲಿ ಅಲ್ಲಿ ಕ್ರಿಮ್ಸ್ ನಿರ್ದೇಶಕರು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಕ್ರಿಮ್ಸ್ ನ ಬಹುತೇಕ ವೈದ್ಯರು ಹಾಜರಿದ್ದರು. ಜಿಲ್ಲಾಧಿಕಾರಿಗಳು ಲಸಿಕೆ ಪಡೆದುಕೊಳ್ಳವುದನ್ನು ನೋಡಿ ಪ್ರೇರೇಪಿತರಾದ ಕ್ರಿಮ್ಸ್ ನ ನಿರ್ದೇಶಕರಾದ ಡಾ.ಗಜಾನನ ನಾಯಕ ರವರು ತಾವು ಈ ಹಿಂದೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಕೂಡಾ ಲಸಿಕೆಯನ್ನು ಸ್ಥಳದಲ್ಲಿ ಪಡೆದುಕೊಂಡಿರುವದು ವಿಶೇಷವಾಗಿತ್ತು.

Recommended Video

ನಿರ್ಮಲ ಸೀತಾರಾಮನ್ ಗೆ ಬಸವಣ್ಣನ ವಚನವನ್ನ ಬಿಡಿಸಿ ಹೇಳಿದ್ದು ಇದೆ ಕಾರಣಕ್ಕೆ | Oneindia Kannada

English summary
Don't heed the rumors, Covid vaccine is very safe, said Uttar Kannada District Collector Dr. Harishkumar Expressed confidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X