ಯಶವಂತಪುರ-ವಾಸ್ಕೋ ರೈಲು ಸಂಚಾರಕ್ಕೆ ಮುಹೂರ್ತ ನಿಗದಿ

ಬೆಂಗಳೂರು, ಮಾರ್ಚ್ 01: ರಾಜಧಾನಿ ಬೆಂಗಳೂರಿಗೆ ಮಲೆನಾಡು ಮತ್ತು ಕರಾವಳಿ ಸಂಪರ್ಕಿಸುವ ಯಶವಂತಪುರ-ವಾಸ್ಕೋ ರೈಲಿನ ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ. 696 ಕಿ. ಮೀ. ರೈಲನ್ನು ನೈಋತ್ಯ ರೈಲ್ವೆ ಘೋಷಣೆ ಮಾಡಿತ್ತು.

ಮಾರ್ಚ್ 7ರಿಂದ ಯಶವಂತಪುರ-ವಾಸ್ಕೋ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಹೇಳಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಬೆಂಗಳೂರಿನಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಇಂಡಿಯನ್ ರೈಲ್ವೆ ಟೈಮ್ ಟೇಬಲ್ ಕಮಿಟಿ ಕಾನೂನಾತ್ಮಕ ಸಭೆಯಲ್ಲಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಲಾಗಿತ್ತು. ಕೊಂಕಣ ರೈಲ್ವೆ ಯಶವಂತಪುರ-ವಾಸ್ಕೋ ರೈಲಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿವೆ.

ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ಗೋವಾದ ವಾಸ್ಕೋ ತನಕ ಸಂಚಾರ ನಡೆಸುತ್ತದೆ. ಹಲವು ವರ್ಷಗಳಿಂದ ಬೆಂಗಳೂರು-ವಾಸ್ಕೋ ನಡುವಿನ ನೇರ ರೈಲಿಗಾಗಿ ಬೇಡಿಕೆ ಇಡಲಾಗಿತ್ತು. ಉಭಯ ನಗರಗಳನ್ನು ರೈಲು 16 ಗಂಟೆಗಳಲ್ಲಿ ಕ್ರಮಿಸಲಿದೆ.

ರೈಲಿನ ವೇಳಾಪಟ್ಟಿ

ರೈಲಿನ ವೇಳಾಪಟ್ಟಿ

ರೈಲು ನಂಬರ್ 06587/06588 ರೈಲು ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ವಾಸ್ಕೋ ನಡುವೆ ಸಂಚಾರ ನಡೆಸಲಿದೆ. ಯಶವಂತಪುರದಿಂದ ಸಂಜೆ 6.45ಕ್ಕೆ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪಲಿದೆ. ವಾಸ್ಕೋಗೆ ಬೆಳಗ್ಗೆ 10.30ಕ್ಕೆ ತಲುಪಲಿದೆ. ವಾಸ್ಕೋದಿಂದ ಪ್ರತಿದಿನ ಸಂಜೆ 4.40ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 8.32ಕ್ಕೆ ಯಶವಂತಪುರ ತಲುಪಲಿದೆ.

ರೈಲಿನ ನಿಲ್ದಾಣಗಳು

ರೈಲಿನ ನಿಲ್ದಾಣಗಳು

ಬೆಂಗಳೂರಿನಿಂದ ಹೊರಡುವ ರೈಲು ಮಲೆನಾಡು, ಕರಾವಳಿಯನ್ನು ಸಂಪರ್ಕಿಸುತ್ತದೆ. ಚನ್ನರಾಯಪಟ್ಟಣ, ಹಾಸನ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಸುರತ್ಕಲ್, ಉಡುಪಿ, ಕುಂದಾಪುರ, ಕಾರವಾರ, ಮಡ್ಗಾಂವ್‌ ಮೂಲಕ ವಾಸ್ಕೋ ತಲುಪಲಿದೆ.

ಕೊಂಕಣ ಮಾರ್ಗದಲ್ಲಿ ಸಂಚಾರ

ಕೊಂಕಣ ಮಾರ್ಗದಲ್ಲಿ ಸಂಚಾರ

ಯಶವಂತಪುರ-ವಾಸ್ಕೋ ರೈಲು ಮಂಗಳೂರು ಜಂಕ್ಷನ್ ಅಥವ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪುವುದಿಲ್ಲ. ಪಡೀಲ್ ಮೂಲಕ ಕೊಂಕಣ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಆದ್ದರಿಂದ, ಕೊಂಕಣ ರೈಲ್ವೆ ಹೊಸ ರೈಲಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಹಲವು ವರ್ಷಗಳ ಬೇಡಿಕೆ

ಹಲವು ವರ್ಷಗಳ ಬೇಡಿಕೆ

ಹಲವಾರು ವರ್ಷಗಳಿಂದ ಕರಾವಳಿ ಮತ್ತು ಬೆಂಗಳೂರು ನಡುವೆ ನೇರ ರೈಲು ಬೇಕು ಎನ್ನುವ ಬೇಡಿಕೆ ಇತ್ತು. ಉಡುಪಿ, ಕುಂದಾಪುರ, ಬೈಂದೂರು, ಕಾರವಾರ ಭಾಗದ ಜನರಿಗೆ ಅನುಕೂಲವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+