ಯಡಿಯೂರಪ್ಪ ಎಲ್ಲಿದ್ದಿಯಪ್ಪ?; ಟ್ವೀಟ್ ಬಾಣ ಬಿಟ್ಟ ಕಾಂಗ್ರೆಸ್

Recommended Video

      State Congress Tweet on Yadiyurappa | Oneindia Kannada

      ಬೆಂಗಳೂರು, ಅಕ್ಟೋಬರ್ 22 : ' ಯಡಿಯೂರಪ್ಪ ಎಲ್ಲಿದ್ದಿಯಪ್ಪ?' ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸಂತ್ರಸ್ತರನ್ನು ಕಾಪಾಡಿ ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದೆ.

      ಮಂಗಳವಾರ ಸಂಜೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಬಿ. ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರವನ್ನು ಟೀಕಿಸಿದೆ. 'ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ?' ಎಂದು ಪ್ರಶ್ನೆ ಮಾಡಿದೆ.

      'ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಬದುಕಿವೆಯೆ? ಎಂದು ಪ್ರಶ್ನಿಸಿರುವ ಪ್ರತಿಪಕ್ಷ ಕಾಂಗ್ರೆಸ್ #ಸಂತ್ರಸ್ತರನ್ನುಕಾಪಾಡಿ ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿದೆ. ಕಳೆದ ಮೂರು ದಿನದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡುತ್ತಲೇ ಇದೆ.

      ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ. ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳು ಜಲಾವೃತವಾಗಿದ್ದು, ಮನೆಗಳು ಕುಸಿದು ಬೀಳುತ್ತಿವೆ.

      ಯಡಿಯೂರಪ್ಪ ಎಲ್ಲಿದ್ದಿಯಪ್ಪ?

      ಯಡಿಯೂರಪ್ಪ ಎಲ್ಲಿದ್ದಿಯಪ್ಪ?

      ಪ್ರವಾಹದಿಂದ ಕರ್ನಾಟಕ ನಲುಗಿ ಹೋಗಿದೆ. ನಿಲ್ಲುವ ನೆಲೆಗೂ, ತಿನ್ನುವ ಆಹಾರಕ್ಕೂ ಪರದಾಟ ಶುರುವಾಗಿದೆ. ಸಂತ್ರಸ್ತರು ಕೂಗುತ್ತಿದ್ದಾರೆ, #ಯಡಿಯೂರಪ್ಪ_ಎಲ್ಲಿದ್ದಿಯಪ್ಪ? ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? 25 ಮಂದಿ ಬಿಜೆಪಿ ಸಂಸದರು ಕಾಣೆಯಾಗಿದ್ದಾರೆಯೇ?" ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

      ಸರ್ಕಾರ ಅನಾಹುತ ತಡೆಯಬೇಕು

      ಸರ್ಕಾರ ಅನಾಹುತ ತಡೆಯಬೇಕು

      "ಮತ್ತೆ ಉತ್ತರ ಕರ್ನಾಟಕದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ರಾಜ್ಯ ಸರ್ಕಾರವು ತಕ್ಷಣವೇ ಆದಷ್ಟು ಮುಂಜಾಗ್ರತಾ ಕಾರ್ಯಗಳನ್ನು ಕೈಗೊಂಡು ಯಾವುದೇ ಅನಾಹುತ ಆಗದಂತೆ ತಡೆಯಬೇಕು. ಅಗತ್ಯವಿರುವ ಕಡೆ ಜನ ಜಾನುವಾರುಗಳನ್ನು ಸ್ಥಳಾಂತರಿಸಲು ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು" ಎಂದು ಟ್ವೀಟ್ ಮೂಲಕ ಸರ್ಕಾರವನ್ನು ಆಗ್ರಹಿಸಲಾಗಿದೆ.

      ಮೋದಿ ಅವರ ಮುಂದೆ ಹೋಗಿ ಹೇಳಿ

      ಮೋದಿ ಅವರ ಮುಂದೆ ಹೋಗಿ ಹೇಳಿ

      "ರಾಜ್ಯದ ಭೀಕರ ಪ್ರವಾಹಕ್ಕೆ ಸ್ಪಂದಿಸದೇ ದ್ರೋಹ ಎಸಗಿದ ಕೇಂದ್ರದ ವಿರುದ್ಧ 80ದಿನಗಳ ನಂತರ ಕೊನೆಗೂ ಬಿಜೆಪಿ ಸಂಸದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಲ್ಲ, ಅಸಮಾಧಾನವನ್ನು ತೋರಬೇಕಿರುವುದು ನರೇಂದ್ರ ಮೋದಿ ಅವರ ಮುಂದೆ. ಸಂಸದ ಬಿ.ಎನ್.ಬಚ್ಚೇಗೌಡರು ಹಾಗೂ ಉಳಿದ 24 ಉತ್ತರಕುಮಾರರು ಕೇಂದ್ರದಿಂದ ಪರಿಹಾರಕ್ಕೆ ಒತ್ತಾಯಿಸಬೇಕಿದೆ" ಎಂದು ಕಾಂಗ್ರೆಸ್ ಟೀಕಿಸಿದೆ.

      WakeUpBJP ಎಂದ ಕಾಂಗ್ರೆಸ್

      WakeUpBJP ಎಂದ ಕಾಂಗ್ರೆಸ್

      ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರವಾಹ ಸಂತ್ರಸ್ತರ ವಿಚಾರದಲ್ಲಿ, ಬೆಂಗಳೂರಿಗೆ ಮೂಲ ಸೌಕರ್ಯ ಒದಗಿಸುವ ವಿಚಾರದಲ್ಲಿ, ರೈತರ ಪ್ರತಿಭಟನೆ ತಡೆಯುವಲ್ಲಿ, ಹೊಸ ಕಾರ್ಯಕ್ರಮ ಘೋಷಣೆ ಮಾಡುವುದರಲ್ಲಿ ವಿಫಲರಾಗಿದ್ದಾರೆ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+