16ನೇ ಎಫ್‌ಐಆರ್‌ ರದ್ದುಕೋರಿ ಹೈಕೋರ್ಟ್‌ಗೆ ಬಿಎಸ್‌ವೈ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 09 : ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ದಾಖಲು ಮಾಡಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಯಡಿಯೂರಪ್ಪ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 2016ರ ಜನವರಿಯಲ್ಲಿ ಯಡಿಯೂರಪ್ಪ ವಿರುದ್ಧದ 15 ಎಫ್‌ಐಆರ್‌ಗಳನ್ನು ಕೋರ್ಟ್ ರದ್ದುಗೊಳಿಸಿತ್ತು.

ಮಂಗಳವಾರ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಡಿ.ವೈಂಗಣ್‌ಕರ್ ಅವರಿದ್ದ ಪೀಠ, ಸರ್ಕಾರ ಮತ್ತು ಲೋಕಾಯುಕ್ತಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿದೆ. [15 FIR ರದ್ದು : ಯಾರು, ಏನು ಹೇಳಿದರು?]

yeddyurappa

ಯಾವುದು ಈ ಪ್ರಕರಣ? : ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಆಧರಿಸಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್‌ ಅವರು ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. [FIR ರದ್ದಾದರೂ ಕಾನೂನು ಹೋರಾಟ ಮುಗಿದಿಲ್ಲ]

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರು ಉತ್ತರ ತಾಲೂಕಿನ ಕಾಚರಕನಹಳ್ಳಿ ಸರ್ವೆ ನಂ. 222ರಲ್ಲಿ 8 ಎಕರೆ ಜಮೀನನ್ನು ಎಚ್‌ಬಿಆರ್ ಬಡಾವಣೆ 1ನೇ ಹಂತದ ನಿರ್ಮಾಣಕ್ಕೆ ವಶಪಡಿಸಿಕೊಂಡಿತ್ತು. ಆ ಪೈಕಿ 1 ಎಕರೆ ಜಾಗವನ್ನು ಯಡಿಯೂರಪ್ಪ ಅವರು 2010ರ ಸೆ.13ರಂದು ಡಿನೋಟಿಫಿಕೇಷನ್ ಮಾಡಲು ಆದೇಶ ನೀಡಿದ್ದರು. [ರಾಜ್ಯ ಮುಖಂಡರನ್ನು ಬಡಿದೆಬ್ಬಿಸಲು ಬಿಜೆಪಿ ವರಿಷ್ಠರಿಗೆ ಸದಾವಕಾಶ!]

ಶಾಸಕರೊಬ್ಬರ ಶಿಫಾರಸಿನ ಅನ್ವಯ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಸಿಎಜಿ ವರದಿ ಹೇಳಿತ್ತು. ವರದಿ ಆಧರಿಸಿ ಯಡಿಯೂರಪ್ಪ ಅವರ ವಿರುದ್ಧ ಜಯಕುಮಾರ್ ಹಿರೇಮಠ್ ದೂರು ನೀಡಿದ್ದರು. ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.

ಅಂದಹಾಗೆ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ 15 ಎಫ್‌ಐಆರ್‌ಗಳನ್ನು ಹೈಕೋರ್ಟ್ 2016ರ ಜನವರಿಯಲ್ಲಿ ರದ್ದುಗೊಳಿಸಿತ್ತು. ಬೆಂಗಳೂರಿನ ಜೆ.ಪಿ.ನಗರ, ಎಚ್‌ಆರ್‌ಬಿಆರ್‌ ಲೇಔಟ್‌, ಜಯನಗರ 8ನೇ ಬ್ಲಾಕ್‌ ಮತ್ತು ರಾಚೇನಹಳ್ಳಿ ಸುತ್ತಮುತ್ತಲಿನ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former chief minister B.S.Yeddyurappa filed a petition in Karnataka High Court seeking to quash the Lokayukta FIR against him in denotification case.
Please Wait while comments are loading...