ಸೆಪ್ಟೆಂಬರ್‌ನಲ್ಲಿ ಯಡಿಯೂರಪ್ಪರಿಂದ ಮಧ್ಯಂತರ ಬಜೆಟ್?
Recommended Video
ಬೆಂಗಳೂರು, ಆಗಸ್ಟ್ 06 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆಯೇ?. ಮೈತ್ರಿ ಸರ್ಕಾರ ಮಂಡಿಡಿದ್ದ ವಿಧೇಯಕಕ್ಕೆ ಮೂರು ತಿಂಗಳ ಅನುಮೋದನೆಯನ್ನು ಅವರು ಈಗಾಗಲೇ ಪಡೆದಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ವಾರಗಳು ಕಳೆದಿವೆ. ಅವರು ಇನ್ನೂ ಸಂಪುಟ ವಿಸ್ತರಣೆ ಮಾಡಿಲ್ಲ. ಸಂಪುಟ ವಿಸ್ತರಣೆ ಮಾಡಿದರೂ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ತೀರ್ಮಾನಿಸಿದ್ದಾರೆ.
ಹಣಕಾಸು ಖಾತೆ ತಮ್ಮ ಬಳಿಯೇ ಇದ್ದರೆ ಸೆಪ್ಟೆಂಬರ್‌ನಲ್ಲಿ ಯಡಿಯೂರಪ್ಪ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಹೈಕಮಾಂಡ್ ನಾಯಕರು ಹಣಕಾಸು ಖಾತೆಯನ್ನು ಯಡಿಯೂರಪ್ಪಗೆ ನೀಡಲು ಒಪ್ಪಿಗೆ ನೀಡಲಿದ್ದಾರೆಯೇ? ಕಾದು ನೋಡಬೇಕು.

ಯಡಿಯೂರಪ್ಪ ಈಗಾಗಲೇ ಸಂಪನ್ಮೂಲಗಳ ಕ್ರೋಢಿಕರಣ, ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಖರ್ಚಾಗಿರುವ ಅನುದಾನ, ಹೊಸ ಕಾರ್ಯಕ್ರಮಗಳ ಘೋಷಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ.
ಸೆಪ್ಟೆಂಬರ್ 2ನೇ ವಾರದಲ್ಲಿ ಅಧಿವೇಶನ ನಡೆಸಲು ಯಡಿಯೂರಪ್ಪ ಚಿಂತನೆ ನಡೆಸುತ್ತಿದ್ದಾರೆ. ಮೊದಲು ಬಜೆಟ್ ಮಂಡನೆ ಮಾಡಿ, ಎರಡು ವಾರಗಳ ಕಾಲ ಬಜೆಟ್ ಅಧಿವೇಶನ ನಡೆಸಲು ಚರ್ಚೆ ನಡೆಸಲಾಗುತ್ತಿದೆ. ಮಧ್ಯಂತರ ಬಜೆಟ್ ಮಂಡನೆ ಮಾಡಿದರೆ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ಹಿಂದಿನ ಸರ್ಕಾರ ಮಂಡಿಸಿದ ಬಜೆಟ್‌ಗೆ ಪೂರ್ಣ ಪ್ರಮಾಣದ ಒಪ್ಪಿಗೆ ಪಡೆದರೆ ಹೊಸ ಬಜೆಟ್ ಮಂಡನೆ ಅವಕಾಶ ಸಿಗುವುದಿಲ್ಲ. ಆದ್ದರಿಂದ, ಯಡಿಯೂರಪ್ಪ ಕೇವಲ ಮೂರು ತಿಂಗಳ ಅವಧಿಗೆ ಒಪ್ಪಿಗೆ ಪಡೆದಿದ್ದಾರೆ.












Click it and Unblock the Notifications