ಜನವರಿ 17 ರಿಂದ ಚಿತ್ರಮಂದಿರಗಳಲ್ಲಿ ತೆರೆದುಕೊಳ್ಳಲಿದೆ Wild Karnataka!
ಬೆಂಗಳೂರು, ಜನವರಿ 6: ಭಾರತದ ಸಿನಿಮಾ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ವನ್ಯಜೀವಿ, ಜೀವ ವೈವಿದ್ಯತೆಯ ಬಗ್ಗೆ ಚಿತ್ರಿಕರಣಗೊಂಡ ಸಿನಿಮಾವೊಂದು ಚಿತ್ರಮಂದಿರಗಳಲ್ಲಿ ತೆರೆ ಕಾರಣಲು ಸಿದ್ದವಾಗಿದೆ.
ಕರ್ನಾಟಕ ಇಡೀ ಭಾರತದಲ್ಲಿ ಅತಿ ಹೆಚ್ಚು ಹುಲಿ ಹಾಗೂ ಆನೆಗಳನ್ನು ಹೊಂದಿರುವ, ಪ್ರಾಕೃತಿಕ ಸಿರಿ ಸೊಬಗನ್ನು ಹೊಂದಿರುವ ಹಾಗೂ ಹೇರಳ ಜೀವ ವೈವಿದ್ಯವನ್ನು ಹೊಂದಿರುವ ರಾಜ್ಯ. ಕರ್ನಾಟಕದ ಇಂತಹ ವನ್ಯಜೀವಿ ಹಾಗೂ ಜೀವ ವೈವಿದ್ಯದ ಬಗ್ಗೆ ಮೂಡಿಬಂದಿರುವ "Wild Karnataka' ಎಂಬ ಸಿನಿಮಾ ಚಿತ್ರಮಂದಿರದಲ್ಲಿ ತೆರೆ ಕಾಣಲು ಅಣಿಯಾಗಿದೆ.
ಇದು ಭಾರತದ ಮೊಟ್ಟ ಮೊದಲ 4 K BLUE CHIP ತಂತ್ರಜ್ಞಾನ ಒಳಗೊಂಡಿರುವ ಡಾಕ್ಯುಮೆಂಟರಿ ಸಿನಿಮಾವಾಗಿದ್ದು, ಜನವರಿ 17 ರಂದು ಪಿವಿಆರ್ ಸಿನಿಮಾ ಥೀಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕ ಅರಣ್ಯ ಇಲಾಖೆ ಇದಕ್ಕೆ ಸಾತ್ ನೀಡಿದ್ದು, ಯೂಟ್ಯುಬ್ನಲ್ಲಿ ಟೀಸರ್ ಬಿಡುಗಡೆಯಾಗಿ, ಇಲ್ಲಿಯವರೆಗೆ 7 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ದಿಗ್ಗಜರ ತಂಡ
Wild Karnataka ಸಿನಿಮಾವನ್ನು mudskipers.in ಸಂಸ್ಥೆಯಿಂದ ನಿರ್ಮಿಸಲಾಗಿದೆ. ಕನ್ನಡಿಗರಾದ ಅಮೋಘವರ್ಷ ಹಾಗೂ ಕಲ್ಯಾಣ ವರ್ಮಾ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಭಾರತದಲ್ಲಿ ಡಾಕ್ಯುಮೆಂಟರಿ ಸಿನಿಮಾ ವಿಭಾಗದಲ್ಲಿ ಇದುವರೆಗೂ ಮೂಡಿಬರದ ತಂತ್ರಜ್ಞಾನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಧ್ವನಿ ಕಲಾವಿದರಾದ Sir Devid Attenborough ಅವರು ಈ ಸಿನಿಮಾಕ್ಕೆ ಧ್ವನಿ ನೀಡಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಭಾರೀ ತಯಾರಿ
ಕರ್ನಾಟಕದ ಜೀವವೈವಿದ್ಯತೆಯನ್ನು ಯಾರೂ ತೋರಿಸದ ರೀತಿ ತೋರಿಸಬೇಕು ಎಂದು Wild Karnataka ಚಿತ್ರ ತಂಡ ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡಿದೆ. ಅತ್ಯಂತ ದುರ್ಗಮ ಸ್ಥಳಗಳಿಗೆ ತೆರಳಿ, ಅತ್ಯಾಧುನಿಕ ಸಲಕರಣೆಗಳೊಂದಿಗೆ ವಿಡಿಯೋ ಚಿತ್ರಿಕರಣ ಮಾಡಿದೆ. ಇದಕ್ಕಾಗಿ ಒಟ್ಟು 400 ತಾಸುಗಳ ಚಿತ್ರಿಕರಣ ಮಾಡಲಾಗಿದ್ದು, ಸಿನಿಮಾ ಎಡಿಟಿಂಗ್ ಒಳಗಾದ ಮೇಲೆ ಒಟ್ಟು ಎರಡು ಗಂಟೆಯ ಅವಧಿಯನ್ನು ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ.

ಪಿವಿಆರ್ ಸಿನಿಮಾ ಮಾಲ್ಗಳಲ್ಲಿ
Wild Karnataka ಮೊದಲ ಹಂತದಲ್ಲಿ ದೇಶದ ಮಹಾ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ, ಕಲ್ಕತ್ತ, ಚೆನ್ನೈ, ಹೈದರಾಬಾದ್, ಕೊಚ್ಚಿ, ಪುಣೆ, ನಾಗ್ಪುರ್, ಅಹಮದಾಬಾದ್, ವಡೋದರಾ, ಚಂಡೀಗಡ್, ಇಂದೋರ್, ರಾಯಪುರ್, ನಾಸಿಕ್, ಸೂರತ್, ಗುರುಗ್ರಾಮ, ಲೂದಿಯಾನ ಮತ್ತು ಲಕ್ನೋದ ಪಿವಿಆರ್ ಸಿನಿಮಾ ಥೀಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ಎರಡನೇ ಹಂತದಲ್ಲಿ ಇನ್ನಷ್ಟು ನಗರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
|
ಟೀಸರ್ ಸದ್ದು
ಈಗಾಗಲೇ Wild Karnataka ಟೀಸರ್ ಬಿಡುಗಡೆಯಾಗಿದ್ದು, ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳಲ್ಲದೇ ಸಿನಿಮಾಸಕ್ತನ್ನೂ ಈ ಟೀಸರ್ ಸೆಳೆದಿದೆ. ಇದುವರೆಗೆ 7 ಲಕ್ಷಕ್ಕೂ ಅಧಿಕ ಜನ ಟೀಸರ್ನ್ನು ಯೂಟ್ಯುಬ್ನಲ್ಲಿ ನೋಡಿದ್ದಾರೆ. ಇದರ ಜೊತೆ ಖ್ಯಾತ ದ್ವನಿ ಕಲಾವಿದರಾದ ಸರ್ ಡೆವಿಡ್ ಅಟ್ಟೇನ್ಬರ್ಗ್ ಅವರನ್ನೊಳಗೊಂಡ ಮೇಕಿಂಗ್ ವಿಡಿಯೋ ಕೂಡ ಸದ್ದು ಮಾಡುತ್ತಿದೆ. mudskipers.in ಸಂಸ್ಥೆಯು ಅರಣ್ಯ, ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸುವ ಬೆಂಗಳೂರು ಮೂಲದ ಒಂದು ಸಂಸ್ಥೆಯಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ












Click it and Unblock the Notifications