Mirage Pub: ಬೆಂಗಳೂರು ಪೊಲೀಸರೇ ನಿಮ್ಮನ್ನು ತಡೆದ "ಆ ಆದೇಶ" ಯಾವುದು ಎಂದ ಜೆಡಿಎಸ್
ಕರ್ನಾಟಕದಲ್ಲಿ ಕಾಂಗ್ರೆಸ್‌ನ ಅಂಧ ದರ್ಬಾರ್ ಜೋರಾಗಿಯೇ ನಡೆಯುತ್ತಿದೆ. ಇದನ್ನು ಹೇಳುವವರು, ಇಲ್ಲ ಕೇಳುವವರು ಯಾರು ಇಲ್ಲ ಎಂದು ಜೆಡಿಎಸ್ ಕಿಡಿಕಾರಿದೆ. ಬೆಂಗಳೂರಿನ ಪಬ್ ಒಂದರಲ್ಲಿ ತಡರಾತ್ರಿ ಅವಧಿ ಮೀರಿ ಪಬ್‌ವೊಂದರಲ್ಲಿ ನಡೆಯುತ್ತಿರುವ ಪಾರ್ಟಿಯ ದೃಶ್ಯವನ್ನು ಜೆಡಿಎಸ್ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಂಧ ದರ್ಬಾರ್ ಜೋರಾಗಿದೆ ಎನ್ನುವ ಶೀರ್ಷಿಕೆಯೊಂದಿಗೆ ಈ ಟ್ವೀಟ್ ಪ್ರಾರಂಭವಾಗಿದೆ.
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಹಗಲುಗನಸು ಕಾಣುತ್ತಿರುವ ಸಚಿವರೊಬ್ಬರ ಒಡೆತನದ "ಮಿರಾಜ್ ಪಬ್" ನಿಯಮ ಮೀರಿ ನಡೆಸಲಾಗುತ್ತಿದೆ. ನಾವು ಈ ಸಂಬಂಧ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಜೆಡಿಎಸ್ ದೂರಿದೆ. ಬೆಂಗಳೂರಿನಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ರಾತ್ರಿ ಒಂದು ಗಂಟೆವರೆಗೂ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಸರ್ಕಾರದ ಈ ವ್ಯಕ್ತಿಯ ಒಡೆತನದ ಪಬ್‌ಗೆ ಇದ್ಯಾವುದು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನೆ ಮಾಡಿದೆ. ರಾತ್ರಿ ಒಂದು ಗಂಟೆಯಾದರೂ ಬಂದ್ ಮಾಡದೇ "ಮಿರಾಜ್ ಪಬ್" ನಲ್ಲಿ ಡಿ.ಜೆ ಸೌಂಡ್ ಹಾಕಿ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಎಂದು ದೂರಿದೆ.

ಎರಡು ಬಾರಿ ದೂರು ನೀಡಿದರೂ ಪ್ರಯೋಜ ಇಲ್ಲ
ಬೆಂಗಳೂರಿನಲ್ಲಿರುವ ಮಿರಾಜ್ ಪಬ್ ಅವಧಿ ಮೀರಿ ತೆರೆದಿದೆ ಎಂದು ಸ್ಥಳೀಯರು ಎರಡು ಬಾರಿ ದೂರು ನೀಡಿದರೂ, ಬೆಂಗಳೂರು ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ಆರೋಪಿಸಿದೆ. ಈ ಪಬ್ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯರು ಸೆಪ್ಟೆಂಬರ್ 9 ಹಾಗೂ ಸೆಪ್ಟೆಂಬರ್ 16 ರಂದು ಎರಡು ಬಾರಿ ದೂರು ನೀಡಿದ್ದಾರೆ. ಆದರೆ, ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರೂ "ಮಿರಾಜ್ ಪಬ್" ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೆಡಿಎಸ್ ಹೇಳಿದೆ.
ಬೆಂಗಳೂರು ಪೊಲೀಸರೇ ಆ ಪ್ರಭಾವಿ ಸಚಿವರ ಒತ್ತಡಕ್ಕೆ ಒಳಗಾಗಿ ಕಂಡು ಕಾಣದಂತೆ ಸುಮ್ಮನಿದ್ದೀರಾ..? ಕಾನೂನು, ಕಟ್ಟಳೆ, ನಿಯಮಗಳು ಕೇವಲ ಜನಸಮಾನ್ಯರಿಗಷ್ಟೇ ಸೀಮಿತವೇ..? ಕಾಂಗ್ರೆಸ್ ನಾಯಕರಿಗೆ ಅದು ಅನ್ವಯಿಸುವುದಿಲ್ಲವೇ. ಬೆಂಗಳೂರು ಪೊಲೀಸರೇ ನಿಮ್ಮನ್ನು ತಡೆದಿರುವ ಆ ಆದೇಶ ಯಾವುದು ಎಂದು ಹೇಳುವಿರಾ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಂಧ ದರ್ಬಾರ್ ಜೋರಾಗಿದೆ !
— Janata Dal Secular (@JanataDal_S) September 17, 2024
ಮುಂದಿನ ಮುಖ್ಯಮಂತ್ರಿ ಎಂದು ಹಗಲುಗನಸು ಕಾಣುತ್ತಿರುವ ಸಚಿವರೊಬ್ಬರ ಒಡೆತನದ "ಮಿರಾಜ್ ಪಬ್" ನಿಯಮ ಮೀರಿ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ರಾತ್ರಿ ಒಂದು ಗಂಟೆವರೆಗೂ ಮಾತ್ರ ಅವಕಾಶ ನೀಡಲಾಗಿದೆ.. ಆದರೆ ರಾತ್ರಿ ಒಂದು… pic.twitter.com/DEHSTVwJ3z
ಬ್ರದರ್‌ಸ್ವಾಮಿ ಎಂದು ಟೀಕಿಸಿದ್ದ ಕಾಂಗ್ರೆಸ್
ಇನ್ನು ಈಚೆಗೆ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿತ್ತು. ಈ ಟ್ವೀಟ್‌ನಲ್ಲಿ ತೀಕ್ಷಣವಾಗಿಯೇ ಎಚ್.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದ್ದ ಕಾಂಗ್ರೆಸ್, ಎಲ್ಲ ವಿಷಯದಲ್ಲೂ ಮೂಗು ತೂರಿಸುವ ಬ್ರದರ್ ಸ್ವಾಮಿ ಈ ವಿಷಯದ ಬಗ್ಗೆಯೂ ಮಾತನಾಡಿ ಎಂದು ವ್ಯಂಗ್ಯವಾಡಿತ್ತು. ಮುನಿರತ್ನ ಅವರ ಮಾತನ್ನು ನೀವು ಒಪ್ಪುವಿರಾ ಇಲ್ಲದಿದ್ದರೆ ಇಲ್ಲಿಯವರೆಗೆ ಏಕೆ ನೀವು ಮಾನಾಡುತ್ತಿಲ್ಲ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.












Click it and Unblock the Notifications