ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಲು ಕ್ರಿಕೆಟ್ ನೋಡಲು ಹೋಗಿದ್ರಾ: ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು, ಅಕ್ಟೋಬರ್ 21: ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ನೋಡಲು ಹೋಗಿದ್ದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ,ಡಿಕೆಶಿ ಕ್ರಿಕೆಟ್ ನೋಡಕ್ಕೆ ಹೋಗಿದ್ದರು, ಯಾರಿಗೆ ಸಪೋರ್ಟ್ ಕೊಡಕ್ಕೆ ಹೋಗಿದ್ದರು, ಪಾಕಿಸ್ತಾನಕ್ಕೆ ಸಪೋರ್ಟ್ ಕೊಡಕ್ಕೆ ಹೋಗಿದ್ದರಾ. ಕ್ರೀಡೆಗೆ ನನ್ನ ವಿರೋಧ ಇಲ್ಲ, ಆದರೆ ಎಂಟೆಂಟು ಗಂಟೆ ಮ್ಯಾಚ್ ನೋಡಕ್ಕೆ ಹೋಗುತ್ತಾರಾ. ವಿದ್ಯುತ್ ಸಮಸ್ಯೆ ಹೇಳ್ತಿದ್ದೀರಿ. ಬರಗಾಲ ಇದೆ ಅಂತ ಹೇಳ್ತಿದ್ದೀರಿ, ಮ್ಯಾಚ್ ನೋಡಕ್ಕೆ ಹೋಗ್ತೀರಾ ಎಂದು ಅವರು ಪ್ರಶ್ನಿಸಿದರು.

ವಿದ್ಯುತ್ ಅಭಾವ ಸೃಷ್ಟಿ ಹಿಂದೆ ಇರೋದು ಸರ್ಕಾರ. ಇಂಧನ ಸಚಿವ ಜಾರ್ಜ್‌ಗೆ ದುಡ್ಡಿನ ಅವಶ್ಯಕತೆ ಇಲ್ಲ, ಪಾವಗಡ ಸೋಲಾರ್ ಪಾರ್ಕ್ ಯಾಕೆ ಸರ್ಕಾರ ಮಾಡಲಿಲ್ಲ. ಯಾರ ಬೇನಾಮಿಗಳು ಅದರ ಹಿಂದೆ ಇದ್ದಾರೆ. ಏಳು ನಿಮಿಷ ಅರ್ಜಿ ಸಲ್ಲಿಕೆಗೆ ಅವಕಾಶ ಇತ್ತು. ಯಾರು ಸಲ್ಲಿಕೆ ಮಾಡಿದ್ರು. ಮತ್ತೆ 10 ಸಾವಿರ ಎಕರೆ ವಿಸ್ತಾರ ಮಾಡಲು ಡಿಫ್ಯಾಕ್ಟೋ ಚೀಫ್ ಮಿನಿಸ್ಟರ್ ಮತ್ತು ಜಾರ್ಜ್ ಹೋಗಿದ್ದರು. ಪವರ್ ಕಾರ್ಪೊರೇಷನ್ ಇಂದ ಮಾಡಿಸಲಿ, ಸರ್ಕಾರಕ್ಕೆ ಉಳಿಯುತ್ತೆ ಎಂದರು.
ಸಂಕಷ್ಟ ದೂರ ಮಾಡುವ ಕೆಲಸ ನಾಡದೇವತೆ ಮಾಡಲಿ:
ಸರ್ಕಾರದ ಗ್ಯಾರೆಂಟಿ ಯೋಜನೆಗಳ ನಡುವೆ ಜನರಿಗೆ ಸಂಕಷ್ಟ ದೂರ ಮಾಡುವ ಕೆಲಸ ನಾಡದೇವತೆ ಮಾಡಲಿ. ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ನಾವು ಮಾಡಿದ್ದೇ ಸರಿ. ಅದಕ್ಕೆ ಜನರ ಒಪ್ಪಿಗೆ ಇದೆ ಎಂದು ಹೇಳ್ತಿದ್ದಾರೆ. ಇತ್ತಿಚೆಗೆ ರಾಜ್ಯದಲ್ಲಿ ಕಮಿಷನ್ ಬಗ್ಗೆ ಚರ್ಚೆ ಆಗುತ್ತಿದೆ. 40% ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂತು, ಈಗ ಇವರ ವಿರುದ್ಧವೂ ನಮ್ಮ ಮಿತ್ರ ಪಕ್ಷ ಕಮಿಷನ್ ಆರೋಪ ಮಾಡಿದೆ. ಜನರಿಗೆ ಮನರಂಜನೆ ಅಂತೂ ದೊರಕುತ್ತಿದೆ. 40% ಕಮಿಷನ್ ಮತ್ತು ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಅವರು ಹೇಳಿದರು.
ಇದು ಸತ್ಯಾ ಹರಿಶ್ಚಂದ್ರ ಸರ್ಕಾರ:
ಇವರ ಯೋಜನೆಗಳ ಬಗ್ಗೆ ಚರ್ಚೆ ಆಗ್ತಿಲ್ಲ. ಬರೀ ವರ್ಗಾವಣೆ ಸೇರಿದಂತೆ ಕಮಿಷನ್ ಬಗ್ಗೆ ಚರ್ಚೆ ಆಗುತ್ತಿದೆ. ಇದು ಸತ್ಯಾ ಹರಿಶ್ಚಂದ್ರ ಸರ್ಕಾರ. ಇವರು ಹೇಗೆ ನಡೆಸುತ್ತಿದ್ದಾರೆ. ಐದು ಗ್ಯಾರೆಂಟಿ ಗಳಲ್ಲಿ ನಾಲ್ಕು ಗ್ಯಾರೆಂಟಿ ಜಾರಿ ಮಾಡಿದ್ದೇವೆ. ಜನರು ಸುಭಿಕ್ಷವಾಗಿದ್ದಾರೆ ಅಂತ ಹೇಳ್ತಿದ್ದಾರೆ. ಮತ್ತೊಂದು ಕಡೆ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿ ಇದೆ ಎಂದರು.
ವಿಪಕ್ಷಗಳು ಏನಾದರೂ ಹೇಳಿದ್ರೆ ನುಡಿ ಮುತ್ತುಗಳು ಅಂತ ಡಿಸಿಎಂ ಹೇಳ್ತಿದ್ದಾರೆ. 33,700 ಕೋಟಿ ನಷ್ಟ ಆಗಿದೆ ಅನ್ನೋದನ್ನ ರಾಜ್ಯ ಸರ್ಕಾರ ಹೇಳಿದೆ. ಕೇಂದ್ರದಿಂದ ಅನುದಾನ ಬೇಕು - ಪತ್ರ ಬರೆದಿದ್ದೇವೆ ಭೇಟಿ ಗೆ ಅವಕಾಶ ಕೊಡ್ತಿಲ್ಲ ಅಂತ ಸಿಎಂ ಹೇಳ್ತಿದ್ದಾರೆ. ದೆಹಲಿ ಪ್ರತಿನಿಧಿಗಳನ್ನ ಮಾಡಿದ್ದೀರಿ. ಅಲ್ಲಿ ಹೋಗಿ ಕೂರುವ ಕೆಲಸ ಮಾಡಬೇಕು ಎಂದರು.
ದೆಹಲಿ ಅವರಿಗೂ ಕಾರು ಇದೀಯೋ:
ಪತ್ರ ಬರೆದ್ರೆ ಆಗಲ್ಲ. ದೆಹಲಿ ಪ್ರತಿನಿಧಿಗಳು ಒತ್ತಾಯ ಮಾಡಿ ಸಮಯ ಪಡೆಯಲಿ. ಹೊಸ ಕಾರು ಪಡೆದಿದ್ದೀರಿ, ದೆಹಲಿ ಅವರಿಗೂ ಕಾರು ಇದೀಯೋ ಇಲ್ಲವೋ. ಆಹಾರ ಧಾನ್ಯಗಳನ್ನ ಹೊರ ದೇಶಗಳಿಂದ ತರುವ ಪರಿಸ್ಥಿತಿ ಬಂದಿದೆ. ಬೆಳಿಗ್ಗೆ ಎದ್ರೆ ಇಬ್ಬರು ಸೇರಿ ಕೈ ಎತ್ತುತ್ತಿರಿ. ಬೆಳಿಗ್ಗೆ ಪೇಪರ್ ಲ್ಲಿ ನೋಡಿದ್ರೆ ನಿಮ್ಮ ದೇ ಹೆಡ್ ಲೈನ್ ಇರುತ್ತೆ. ನಮಗೂ ಕೈ ಎತ್ತಿ ಬಫೋನ್ ಮಾಡಿದ್ದೀರಿ ಎಂದರು.
ಬಿಜೆಪಿ ಪಾಪದ ಫಲದಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಎಂದು ಸಿಎಂ ಹೇಳಿದ್ದಾರೆ. ಆಯಿತು ನಿಮ್ಮದು ಪುಣ್ಯದ ಫಲವೇನು. ರಾಜ್ಯಕ್ಕೆ ಕತ್ತಲು ತರಿಸಿದ್ದ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಸಂದರ್ಭದಲ್ಲಿ ಹೇಳಿದ್ದೆ. ಬರಗಾಲಕ್ಕೆ ಇಲ್ಲಿಯವರೆಗೂ ಒಂದು ರೂಪಾಯಿ ಬಿಡುಗಡೆ ಬಗ್ಗೆ ಮಾಹಿತಿ ಮಾಡಿಲ್ಲ. ಡಿಸಿ ಅಕೌಂಟ್ ಲ್ಲಿ ಇದೆ ಅಂತೀರಾ, ಅಕೌಂಟ್ ಲಿ ಇಟ್ಕೊಂಡು ಏನಾಗಬೇಕು. ರೈತರ ಸಮಸ್ಯೆ ಕೇವಲವಾಗಿ ತಗೊಬೇಡಿ, ಕೇಂದ್ರ ನೋಡಬೇಡಿ - ರಾಜ್ಯ ದಿಂದ ಪರಿಹಾರ ಕೊಡಿ. ನಿಮ್ಮದೇ ಮಾಡೆಲ್ ಅಂತೀರಿ - ದೇಶದ ವಿವಿಧ ರಾಜ್ಯಗಳಲ್ಲಿ ಈ ಗ್ಯಾರೆಂಟಿ ಘೋಷಣೆ ಮಾಡಿದ್ದೀರಿ - ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದರು.
ರಾಜ್ಯದಲ್ಲಿ ತೆರಿಗೆ ಸಂಗ್ರಹ ಕಡಿಮೆ ಆಗಿಲ್ಲ. ಬರೀ ಗ್ಯಾರೆಂಟಿ ಅಂತ ಹೇಳಿಕೊಂಡು ಹೊರಟಿದ್ದೀರಿ. ವಿದ್ಯುತ್ ಖರೀದಿ ಬಗ್ಗೆ ಸಿಎಂ ಸಭೆ ಮಾಡಿದ್ದರು. ಸೋರಿಕೆ ಬಗ್ಗೆ ಚರ್ಚೆ ಆಗಿದೆ. ಸೋರಿಕೆ ಒಂದು ಭಾಗ ಮಾತ್ರ. ಉತ್ಪಾದನೆ ಕುಂಠಿತಗೊಳಿಸಿದ್ದಾರೆ. ಎಸಿ ರೂಂ ಬಿಟ್ಟು - ಉತ್ಪಾದನೆ ಘಟಕಕ್ಕೆ ಹೋಗಿ ಅಂತ ಹೇಳಿದ್ದೀರಿ. ರೈತರನ್ನ ಮನವರಿಕೆ ಮಾಡಿ ಎಂದು ಹೇಳಿದ್ದೀರಿ, ಏನು ಬೆಳೆಯ ಬೇಡಿ ಎಂದು ಹೇಳ್ತೀರಾ ಎಂದರು.
ಸದನ ಸಮಿತಿ ರಚನೆ:
2013 ರಲ್ಲಿ ವಿದ್ಯುತ್ ಹಗರಣ ಆದಾಗ ಅಂದಿನ ಸಚಿವರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ ಮಾಡಿದ್ದರು. ಕುರಿ ಕಾಯಕೆ ತೋಳ ಕರೆದುಕೊಂಡು ಹೋದಂತೆ ರಚನೆ ಮಾಡಿದ್ದೀರಿ. ನಾನು ಬಟ್ಟೆ ಹರಿದುಕೊಂಡು ಓಡಾಡುತ್ತೇನೆಂದು ಹೇಳಿದ್ದಾರೆ. ಕೆಲ ದಿನ ಕಾಯಿರಿ ಯಾರು ಬಟ್ಟೆ ಹರಿದುಕೊಂಡು ಓಡಾಡುತ್ತಾರೆ ನೋಡೊಣ ಎಂದು ವ್ಯಂಗ್ಯವಾಡಿದರು.
ಬೆಸ್ಕಾಂ ಮುಂದೆ ಮೊಸಳೆ ಹಿಡಿದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. 17848.08 ಮೆಗಾ ವ್ಯಾಟ್ - ನೈಸರ್ಗಿಕ ವಿದ್ಯುತ್ ಮೂಲಗಳಿಂದ ಉತ್ಪಾದನೆ ಆಗುತ್ತಿದೆ. ಖಾಸಗಿ ಮತ್ತು ಸರ್ಕಾರದಿಂದ 32,912 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಥರ್ಮಲ್ ಪ್ಲಾಂಟ್ ಇಂದ 9947 ಮೇಗಾ ವ್ಯಾಟ್ ಉತ್ಪಾದನೆ ಮಾಡಬೇಕು. ನೀವು ಕಲ್ಲಿದ್ದಲು ಸಂಗ್ರಹ ಮಾಡಿಕೊಂಡಿಲ್ಲ, 16867.63 ಮೇಗಾ ವ್ಯಾಟ್ ಉತ್ಪಾದನೆ ಮಾಡಬಹುದಿತ್ತು. ಆದರೆ ಅಗತ್ಯ ಕ್ರಮಗಳನ್ನ ನೀವು ತೆಗೆದುಕೊಂಡಿಲ್ಲ ಎಂದರು.
ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಇದೆ:
32,912 ಮೆಗಾವ್ಯಾಟ್ ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಇದೆ. ಇದು ಖಾಸಗಿ ಹಾಗೂ ಸರ್ಕಾರಿ ಉತ್ಪಾದನೆ ಸೇರಿ 1933 ಮೆಗಾವ್ಯಾಟ್ ಜಲ ವಿದ್ಯುತ್ 9947 ಮೆಗಾ ವ್ಯಾಟ್ ಥರ್ಮಲ್ ಪ್ಲಾಂಟ್ ನಿಂದ ಮಾಡಬಹುದು. ಆದರೆ ಪೂರ್ವ ಸಿದ್ದತೆ ಇಲ್ಲದೆ ಸಮಸ್ಯೆ ಆಗಿದೆ. ಸೋಲಾರ್ 3894 ಮೆಗಾವ್ಯಾಟ್ ಉತ್ಪಾದನೆ ಆಗುತ್ತದೆ. ಎಲ್ಲ ಸೇರಿ ಪ್ರಸ್ತುತ 16867 ಮೆಗಾವ್ಯಾಟ್ ಕನಿಷ್ಟ ಉತ್ಪಾದನೆ ಮಾಡಬಹುದಿತ್ತು. ಆದರೆ ಸರ್ಕಾರದ ವೈಫಲ್ಯದಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಕೃತಕ ಅಭಾವ ತೋರಿಸುತ್ತಿದೆ. ಕೃತಕ ಅಭಾವ ಸೃಷ್ಟಿ ಆದ್ರೆ ಮಾತ್ರ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಗೆ ಕಮಿಷನ್ ಕಳಿಸಕ್ಕೆ ಈ ಕೃತಕ ಅಭಾವ. 1627 ಮಿಲಿಯನ್ ಯುನಿಟ್ ಐದು ತಿಂಗಳಲ್ಲಿ ಖರೀದಿ ಮಾಡಿದ್ದಾರೆ. ನಮ್ಮ ಕಾಲದ ದಾಖಲೆ ತೆಗೆಯಿರಿ ನಾವು 30 ಪೈಸೆ ಕಡಿಮೆ ಮಾಡಿದ್ದೇವೆ ಎಂದರು.
25 ಯುನಿಟ್ ವಿದ್ಯುತ್ ಉತ್ಪಾದನೆ:
ಏಳು ಗಂಟೆ ವಿದ್ಯುತ್ ಕೊಟ್ರು - 28 ಕೋಟಿ ಯುನಿಟ್ ಬೇಕು. 25 ಯುನಿಟ್ ವಿದ್ಯುತ್ ಉತ್ಪಾದನೆ ಆಗಿದೆ ಎಂದು ಹೇಳ್ತಿದ್ದಾರೆ. ಅವರ ಹೇಳಿಕೆ ಪ್ರಕಾರ ಮೂರು ಕೋಟಿ ವಿದ್ಯುತ್ ಮಾತ್ರ ಕೊರತೆ. ನಾನು ಹೇಳಿದಂತೆ ಇತರೆ ಮೂಲಗಳಿಂದ ಸರಿಯಾಗಿ ಉತ್ಪಾದನೆ ಮಾಡಿದ್ರೆ ಐದು ಕೋಟಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಬಹುದು. ಖರೀದಿ ಮಾಡುವುದು ಬೇಡ ನಾವೇ ಮಾಡಬಹುದು. ಗ್ಯಾರೆಂಟಿ ಕಡೆ ಗಮನ ಕೊಟ್ಟ ವಿದ್ಯುತ್ ಉತ್ಪಾದನೆ ಮರೆತರು. ಈಗ ಕಮಿಷನ್ ಗಾಗಿ ಕೃತಕ ಅಭಾವ ಸೃಷ್ಟಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ನನ್ನ ಕಾಲದಲ್ಲಿ ಎರಡು ಅವಧಿಯಲ್ಲೂ ಒಂದು ರೂಪಾಯಿ ಅವ್ಯವಹಾರ ಆಗಿಲ್ಲ. ಹಿಂದೆ ಮಾಡಿಲ್ಲ ಮುಂದೆ ಮಾಡಲ್ಲ. ಕೃತಕ ಸೃಷ್ಟಿ ಹಿಂದೆ ಇರೋದು ಸರ್ಕಾರ. ಜಾರ್ಜ್ ಗೆ ದುಡ್ಡಿನ ಅವಶ್ಯಕತೆ ಇಲ್ಲ. ಪಾವಗಡ ಸೋಲಾರ್ ಪಾರ್ಕ್ ಯಾಕೆ ಸರ್ಕಾರ ಮಾಡಲಿಲ್ಲ. ಯಾರ ಬೇನಾಮಿಗಳು ಅದರ ಹಿಂದೆ ಇದ್ದಾರೆ. ಏಳು ನಿಮಿಷ ಅರ್ಜಿ ಸಲ್ಲಿಕೆಗೆ ಅವಕಾಶ ಇತ್ತು. ಯಾರು ಸಲ್ಲಿಕೆ ಮಾಡಿದ್ದರು ಎಂದರು.
ಕರೆಂಟ್ ಈಗ ದುಬಾರಿ:
ಮತ್ತೆ 10 ಸಾವಿರ ಎಕರೆ ವಿಸ್ತಾರ ಮಾಡಲು ಡಿಫ್ಯಾಕ್ಟೋ ಚೀಫ್ ಮಿನಿಸ್ಟರ್ ಮತ್ತು ಜಾರ್ಜ್ ಹೋಗಿದ್ದರು. ಪವರ್ ಕಾರ್ಪೊರೇಷನ್ ಇಂದ ಮಾಡಿಸಲಿ ಸರ್ಕಾರಕ್ಕೆ ಉಳಿಯುತ್ತೆ. 9.12 ರೂಪಾಯಿ ಗ್ರಾಹಕರಿಗೆ ಚಾರ್ಜ್ ಮಾಡ್ತಿದ್ದೇವೆ. ಕರೆಂಟ್ ಈಗ ದುಬಾರಿ ಮಾಡಿದ್ದಾರೆ. ವಿದ್ಯುತ್ ಖರೀದಿ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಪ್ರತಿ ತಿಂಗಳಿಗೆ ಎಷ್ಟು ಖರ್ಚು ಆಗ್ತಿದೆ ಎಂದು ಹೇಳಲಿ. ನಿಮ್ಮ ಮೂಲಕ ಸಲಹೆ ಕೊಟ್ಟೆ ನನ್ನ ಬಗ್ಗೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ನಾವು ಇರೋ ಹತ್ತು ತಿಂಗಳಲ್ಲಿ ಕೆಲಸ ಮಾಡಿದ್ದೇವೆ. ಏನಾದರೂ ಇದ್ರೆ ಬಿಚ್ಚಿಡಿ ಪ್ರಥಮವಾಗಿ ಬಂಧೀಖಾನೆ ಸಚಿವರಾಗಿ ಬಂದ್ರಿ ಬಿಚ್ಚಿಡ್ತೀನಿ ಬಿಚ್ಚಿಡ್ತೀನಿ ಅಂತ ಮತ್ತೇನೋ ಆದ್ರೆ ಕಷ್ಟ ಬೇಗ ಬಿಚ್ಚಿಡಿ ಎಂದು ಸವಾಲು ಹಾಕಿದರು.
ಕೃತಕ ವಿದ್ಯುತ್ ಅಭಾವ ಸೃಷ್ಟಿಸುತ್ತಿಲ್ಲ:
ಇದಕ್ಕೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್ ಅವರು, ಕೃತಕ ವಿದ್ಯುತ್ ಅಭಾವ ಸೃಷ್ಟಿಸುತ್ತಿಲ್ಲ. ದುಡ್ಡುಹೊಡೆಯಲು ಹೋಗಿಲ್ಲ ಮೇಲೆ ಇದ್ದಾರಲ್ಲ ತನಿಖೆ ಮಾಡಿಸಲಿ. ಶ್ವೇತ ಪತ್ರಹೊರಡಿಸುವ ಬಗ್ಗೆ ಇವರು ಹೇಳಿದ್ದೆಲ್ಲಾ ಕೇಳಕ್ಕಾಗಲ್ಲ. ಬರಗಾಲದ ಸಂದರ್ಭ ಕ್ರಿಕೆಟ್ ಮ್ಯಾಚ್ ನೋಡೋದಿರಲಿ ಎಲ್ಲಾ ಕ್ಷೇತ್ರವನ್ನೂ ಗೌರವಿಸಬೇಕು, ನಮ್ಮದೇಶದ ಸಂಸ್ಕೃತಿ ಗೌರವಿಸಬೇಕು. ಅವರು ಸಿನಿಮಾ ಮಾಡುತ್ತಾರೆ ಎಂದು ಟಾಂಗ್ ನೀಡಿದರು.












Click it and Unblock the Notifications