Get Updates
Get notified of breaking news, exclusive insights, and must-see stories!

ಕೋರ್ಟ್ ಕಟಕಟೆಯಲ್ಲಿ ನಿಂತ ಸೋನು ಗೌಡ...

ಸ್ಯಾಂಡಲ್ ವುಡ್ ಅಂಗಳದಲ್ಲೀಗ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಸದ್ದು ಮತ್ತೆ ಜೋರಾಗಿದೆ. ಅದಕ್ಕೆ ಕಾರಣ ಈಗಷ್ಟೇ ಬಂದ ಟೀಸರ್ ಝಲಕ್. ಸಖತ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿರುವ ಟೀಸರ್ ಸಮಾಜದಲ್ಲಿ ನಡುವೆ ಗಂಭೀರ ವಿಷ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಈ ಟೀಸರ್ ನೋಡ್ತಿದ್ರೆ ಕನ್ನಡ ಸಿನಿ ಸಾಮ್ರಾಜ್ಯಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕನ ಆಗಮನವಾದಂತಿದೆ.

ಒಂದಷ್ಟು ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿದ ವಿಕ್ರಂ ಪ್ರಭು ತಮ್ಮ ಇಷ್ಟು ವರ್ಷದ ಅನುಭವನ್ನು ಧಾರೆ ಎರೆದು ವೆಡ್ಡಿಂಗ್ ಗಿಫ್ಟ್ ಸಿನಿಮಾವನ್ನು ತಯಾರಿಸಿದ್ದಾರೆ ಅನ್ನೋದಕ್ಕೆ ಟೀಸರ್ ತಾಜಾ ಉದಾಹರಣೆ.

Wedding Gift Kannada Movie teaser is very promising

ತಮ್ಮ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಅಸ್ತವ್ಯಸ್ತವಾಗಿಸಿಕೊಂಡು ಹೆಣ್ಣುಮಕ್ಕಳು ಗಂಡು ಸಂತತಿಯನ್ನು ಕಷ್ಟದ ಕೂಪಕ್ಕೆ ತಳ್ಳುತ್ತಾರೆ. ಹೇಗೆಲ್ಲಾ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಅನ್ನೋದನ್ನು ಟೀಸರ್ ಝಲಕ್ ನಲ್ಲಿ ಅನಾವರಣ ಮಾಡಲಾಗಿದೆ. ಇಂಥ ಸೂಕ್ಷ್ಮ ಎಳೆಯ ಕಂಟೆಂಟಿನೊಂದಿಗೆ ಒಂದಷ್ಟು ಮನರಂಜನೆ ನೀಡುವ ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲಿ ಸೋನು ಗೌಡ ನಾಯಕಿಯಾಗಿ ಅಭಿನಯಿಸಿದ್ರೆ, ನಂದೀಶ್ ನಾಣಯ್ಯ ನಾಯಕನಾಗಿ ನಟಿಸಿದ್ದಾರೆ.

Wedding Gift Kannada Movie teaser is very promising

ಸೋನು ತಮ್ಮ ಸಿನಿಕರಿಯರ್‌ನಲ್ಲಿ ಇದೊಂದು ವಿಶೇಷವೆಂದು ಈಗಾಗಲೇ ಹೇಳಿಕೊಂಡಿದ್ದಾರೆ. ಇನ್ನು ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ನಟನೆಯಿಂದ ದೂರವೇ ಸರಿದಿದ್ದ ಪ್ರೇಮಾ ಮತ್ತೆ ಕಂಬ್ಯಾಕ್ ಮಾಡಿದ್ದು ಈ ಚಿತ್ರದಿಂದಲೇ. ಇಲ್ಲಿ ಪ್ರೇಮ ಲಾಯರ್ ಖದರ್ ನಲ್ಲಿ ಮಿಂಚಿದ್ದಾರೆ. ನಿರ್ದೇಶನದ ಜೊತೆಗೆ ವಿಕ್ರಂ ಪ್ರಭು ನಿರ್ಮಾಣದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

Wedding Gift Kannada Movie teaser is very promising

Recommended Video

      Virat ಮಾಡಿದ ಒಂದೇ ಒಂದು ಪದದ ಟ್ವೀಟ್ ಈ ಥರಾ ದಾಖಲೆ ಸೃಷ್ಟಿ ಮಾಡುತ್ತಾ? | #Cricket | OneIndia Kannada

      ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ತಾರಾಬಳಗದ ಸಿನಿಮಾಗೆ ಉದಯ್ ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನವಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+