ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆ ಮಾಡುವುದಿಲ್ಲ: ಜೆಡಿಎಸ್
ಬೆಂಗಳೂರು, ಡಿಸೆಂಬರ್ 22: ಕಾಂಗ್ರೆಸ್ ಪಕ್ಷವು ಹೊಸದಾಗಿ ಸಂಪುಟ ಸೇರುವ ಏಳು ಜನ ಶಾಸಕರ ಪಟ್ಟಿಯನ್ನು ಈಗಾಗಲೇ ರಾಜ್ಯಪಾಲರ ಕೈಗಿಟ್ಟು ಸಂಪುಟ ವಿಸ್ತರಣೆಗೆ ಸರ್ವ ಸಿದ್ಧತೆ ಮಾಡಿದೆ. ಆದರೆ ಮಿತ್ರ ಪಕ್ಷ ಜೆಡಿಎಸ್ ಮಾತ್ರ ಈ ಬಗ್ಗೆ ಮೌನವಾಗಿಯೇ ಇದೆ.
ಆದರೆ ಜೆಡಿಎಸ್‌ನ ಮೌನಕ್ಕೆ ಕಾರಣ ಹೊರ ಬಿದ್ದಿದ್ದು, ಧನುರ್ಮಾಸ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಜೆಡಿಎಸ್ ಸ್ಪಷ್ಟಪಡಿಸಿದೆ.
ಧನುರ್ಮಾಸ ಮುಗಿದು, ಸಂಕ್ರಾಂತಿ ಸಮಯದಲ್ಲಿಯೇ ಜೆಡಿಎಸ್ ಪಕ್ಷವು ತಮ್ಮ ಖಾತೆಯಲ್ಲಿರುವ ಎರಡು ಸ್ಥಾನಗಳಿಗೆ ಮಂತ್ರಿಗಳನ್ನು ಆಯ್ಕೆ ಮಾಡಲಿದೆ.

ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆ ಮಾಡಬಾರದು ಎಂದು ರೇವಣ್ಣ ಹಾಗೂ ದೇವೇಗೌಡರ ನಿಲವಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ಜೊತೆಗೆ ಸಂಪುಟ ವಿಸ್ತರಣೆ ಮಾಡಲು ಕುಮಾರಸ್ವಾಮಿ ತಯಾರಿದ್ದರು ಆದರೆ ಎಚ್.ಡಿ.ರೇವಣ್ಣ ಹಾಗೂ ದೇವೇಗೌಡರು ಇದಕ್ಕೆ ತಡೆ ಒಡ್ಡಿದ್ದಾರೆ.
ಜೆಡಿಎಸ್ ಬಳಿ ಎರಡು ಖಾತೆಗಳು ಖಾಲಿ ಇವೆ. ಈ ಎರಡು ಸ್ಥಾನಕ್ಕೆ ಮೂರು ಜನ ಆಕಾಂಕ್ಷಿಗಳಿದ್ದಾರೆ. ಸಕಲೇಶಪುರದ ಜೆಡಿಎಸ್ ಶಾಸಕ ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.












Click it and Unblock the Notifications