ವಕ್ಫ್‌ ಬೋರ್ಡ್‌ ವಿವಾದ: ಕಾಂಗ್ರೆಸ್‌ ಪ್ರಭಾವಿ ಸಚಿವರಿಂದ ಸ್ಫೋಟಕ ಹೇಳಿಕೆ!

Waqf Board Controversy: ವಕ್ಫ್‌ ಬೋರ್ಡ್‌ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಈ ನಡುವೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ತೀವ್ರವಾಗುತ್ತಿದೆ. ಇದರ ಬೆನ್ನಲ್ಲೇ ವಕ್ಫ್‌ ಬೋರ್ಡ್‌ ಹಾಗೂ ವಿವಾದದ ಬಗ್ಗೆ ಪ್ರಭಾವಿ ಸಚಿವರೊಬ್ಬರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವ ಸಂದರ್ಭದಲ್ಲೇ ವಕ್ಫ್‌ ಆಸ್ತಿ ವಿವಾದ ತೀವ್ರವಾಗಿದೆ. ಇದೀಗ ಕಾಂಗ್ರೆಸ್‌ ನಾಯಕರು ವಕ್ಫ್‌ ಬೋರ್ಡ್‌ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಡೆಯೇ ಬೊಟ್ಟು ಮಾಡಿದ್ದಾರೆ.

ವಕ್ಫ್‌ ಬೋರ್ಡ್‌ ವಿವಾದ ಹಾಗೂ ಶಿಗ್ಗಾಂವಿ ಉಪ ಚುನಾವಣೆಯ ಬಗ್ಗೆ ಮಾತನಾಡಿರುವ ಎಚ್‌.ಕೆ ಪಾಟೀಲ್ ಅವರು, ಶಿಗ್ಗಾಂವಿ ಉಪಚುನಾವಣೆ ಕಣ ರಂಗೇರತಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಿಗೆ ಈ ಬಾರಿ ಗೆಲ್ತೀವಿ ಅನ್ನೋ ವಿಶ್ವಾಸ ಇದೆ. ಭಾನುವಾರ ಹುಬ್ಬಳ್ಳಿಯಲ್ಲಿ ಸಭೆ ಮಾಡಿದ್ದೇವೆ. ನಾವು ಈ ಬಾರಿ ಉಪಚುನಾವಣೆಯಲ್ಲಿ ಗೆಲ್ಲಬೇಕು ಎಂದಿದ್ದಾರೆ.

Waqf Board Controversy Explosive Statement by Congress Influential Minister

ಮುಂದುವರಿದು ವಕ್ಫ್‌ ಬೋರ್ಡ್‌ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ವಕ್ಫ್‌ ವಿಚಾರವಾಗಿ ಮೊದಲು ಪತ್ರ ಬರೆದಿದ್ದೇ. ಬಿಜೆಪಿಯವರೇ ಇದೀಗ ಉಪ ಚುನಾವಣೆ ಇದೆ ಎಂದು ನಾಟಕವಾಡ್ತಿದ್ದಾರೆ. ಹಿಂದೂ ರೈತರ ಅಲ್ಲ, ಮುಸ್ಲಿಂ ರೈತರ ಜಮೀನಿಗೂ ನೋಟಿಸ್ ಕೊಡಲಾಗಿದೆ. ಆದರೆ, ಗದಗ ಜಿಲ್ಲೆಯಲ್ಲಿ ಯಾರಿಗೂ ನೋಟಿಸ್ ಕೊಟ್ಟಿಲ್ಲ. ವಕ್ಫ್‌ ಎಂದರೆ ದಾನ, ಅದು ಕೂಡಾ ಸರ್ಕಾರದ ಒಂದು ಭಾಗ ಆಗಿದೆ. ದಾನ ಕೊಟ್ಟ ಜಮೀನು ವಿಚಾರವಾಗಿ ಮೇಲ್ವಿಚಾರಣೆ ಮಾಡ್ತಾರೆ ಎಂದು ವಿವರಿಸಿದರು.

ನಾವು ನಿಮ್ಮ ಭೂಮಿ ತೆಗೆದುಕೊಳ್ಳಲು ಬರಲ್ಲ. ಇನ್ನು ವಕ್ಫ್‌ ಗೆಜೆಟ್ ನೋಟಿಫಿಕೇಶನ್ ಮಾಡಿರೋದರಲ್ಲಿ ಬಿಜೆಪಿ ಪಾಲಿದೆ. ನೀವೇ ಮೊದಲು ನೋಟಿಸ್ ಕೊಡಿ ಅಂದಿದ್ದು. ಇದು ರಾಜಕೀಯ ಕಪಟ ನಾಟಕ ಎಂದು ಕಿಡಿಕಾರಿದ್ದಾರೆ. ಮುಂದುವರಿದು ವಕ್ಫ್‌ ವಿಚಾರವಾಗಿ ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

Waqf Board Controversy Explosive Statement by Congress Influential Minister

ಶಿಗ್ಗಾಂವಿ ಉಪ ಚುನಾವಣೆ ಸಭೆ: ಶಾಸಕ ಲಕ್ಷ್ಮಣ ಸವದಿ

ಶಿಗ್ಗಾಂವಿ ಉಪಚುನಾವಣೆ ವಿಚಾರವಾಗಿ ಸಭೆ ಮಾಡಿದ್ದೇವೆ. ಇನ್ನು ಮೂರು ಪುರಸಭೆ, ಆರು ಜಿಲ್ಲಾ ಪಂಚಾಯಿತಿ ಹಾಗೂ 23 ತಾಲ್ಲೂಕು ಪಂಚಾಯಿತಿ ಸಭೆ ಮಾಡಿದ್ದೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಈ ಸಭೆಯಲ್ಲಿ ಹಿರಿಯರ ಜೊತೆ ಸಭೆ ಮಾಡಿದ್ದೇವೆ. ಪದಾಧಿಕಾರಿಗಳಿಗೆ ಸಹ ಕೆಲವು ಸೂಚನೆ ಕೊಟ್ಟಿದ್ದೇವೆ. ನಮ್ಮ ಪ್ರಕಾರ, ಶಿಗ್ಗಾಂವಿಯಲ್ಲಿ ನಾವೇ ಗೆಲ್ತೀವಿ. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದ್ದು, ಇದು ನಮಗೆ ಅನುಕೂಲಕರವಾಗಿದೆ. ನಾನು ಬಿಜೆಪಿಯವರನ್ನು ಬಹಳ ಹತ್ತರದಿಂದ ನೋಡಿದ್ದೇನೆ. ಅವರು ಏನೋ ಒಂದು ಸತ್ತು ಹೋಗಿದೆ ಅಂದರೂ ಹಲ್ಲು ಕಿಸಿಯುತ್ತಾರೆ. ಹಾಗೆ ವಕ್ಫ್‌ ಮುಗಿದು ಹೋಗಿದೆ. ಉಪಚುನಾವಣೆ ಇರೋ ಕಾರಣಕ್ಕೆ ಗೊಂದಲ ಸೃಷ್ಟಿ ಮಾಡಿತ್ತಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+