BJP President: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮಹತ್ವ ಮಾಹಿತಿ ನೀಡಿದ ವಿಜಯೇಂದ್ರ
ಬೆಂಗಳೂರು, ಫೆಬ್ರವರಿ 06: ರಾಜ್ಯದ ಅಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ಯಾವುದೇ ಸಮಯದಲ್ಲಿ ಬೇಕಾದ್ರು ನಡೆಯಬಹುದು. 20ನೇ ತಾರೀಖಿನ ಒಳಗೆ ಎಲ್ಲವೂ ಮುಗಿಯುತ್ತೆ ಅನ್ನೋ ಮಾಹಿತಿಗಳು ಬರ್ತಿವೆ. ಪಕ್ಷದ ಆಂತರಿಕ ಭಿನ್ನಮತ 20ನೇ ತಾರೀಖಿನ ಒಳಗೆ ಮುಗಿದು ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರು ಮಹತ್ವದ ಮಾಹಿತಿಯನ್ನ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಲವರು ನನ್ನ ಬಗ್ಗೆ ಪಕ್ಷದ ಬಗ್ಗೆ ನಾನಾ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದ ಅಧ್ಯಕ್ಷನಾಗಿ ನಾನು ಹೇಳಿಕೆ ಕೊಟ್ರೆ ಸರಿಯಲ್ಲ, ಕಾರ್ಯಕರ್ತರಿಗೂ ನೋವಾಗುತ್ತೆ ಅದಕ್ಕೆ ಮಾತಾಡ್ತಿಲ್ಲ. ಶ್ರೀ ರಾಮುಲು ಅವರು ನನಗೆ ಅನುಭವ ಇಲ್ಲ ಅಂತ ಹೇಳಿದ್ದಾರೆ. ರಾಜ್ಯದ ಅಧ್ಯಕ್ಷನಾಗಿ ನನಗೆ ಅನುಭವ ಇಲ್ಲದೆ ಇರಬಹುದು. ಆದರೆ, ಪಕ್ಷದ ಕಾರ್ಯಕರ್ತನಾಗಿ ನನಗೆ ಅನುಭವ ಇದೆ. ಪಕ್ಷದ ಕಾರ್ಯದರ್ಶಿಯಾಗಿ, ಯುವಮೋರ್ಚಾ ಅಧ್ಯಕ್ಷನಾಗಿ, ಪಕ್ಷದ ಉಪಾಧ್ಯಕ್ಷನಾಗಿ ನನಗೆ ಅನುಭವ ಇದೆ. ನಮ್ಮ ಕಾರ್ಯಕರ್ತರು ನನ್ನನ್ನು ಪ್ರಿತಿಯಿಂದ ವಿಜಯಣ್ಣ ಅಂತಾ ಕರೀತಾರೆ ಎಂದು ಹೇಳಿದರು.

ನನ್ನ ಕೆಲಸದ ಬಗ್ಗೆ ಹಿರಿಯರಿಗೆ ಎಷ್ಟು ತೃಪ್ತಿ ಇದೆಯೋ ಗೊತ್ತಿಲ್ಲ, ಆದರೆ ಕಾರ್ಯಕರ್ತರಿಗೆ ತೃಪ್ತಿ ಇದೆ. ಶಿಕಾರಿಪುರದಲ್ಲಿ ಮದುವೆ ಮನೆಗೆ ಹೋಗಿದ್ದಾಗ ಏನಾದರೂ ಮಾಡಿ ಪಕ್ಷದ ಗಲಾಟೆ ನಿಲ್ಲಿಸಿ ಎಂದು ಮಹಿಳೆಯರು ಮನವಿ ಮಾಡಿದರು. ಯಡಿಯೂರಪ್ಪನವರ ತೇಜೋವಧೆ ಮಾಡುತ್ತಿರುವವರನ್ನು ತಡೆಯುವ ಕೆಲಸವನ್ನು ಹಿರಿಯರು ಮಾಡಲಿ. ಅವರ ಬಗ್ಗೆ ಹಿರಿಯರು ವರಿಷ್ಠರ ಗಮನಕ್ಕೆ ತರಲಿ, ಒಂದು ವರ್ಷದಿಂದ ಯಡಿಯೂರಪ್ಪನವರ ತೇಜೋವಧೆ, ಅವಮಾನ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಹೈಕಮಾಂಡ್ ಬೆಂಬಲ, ಸಂತೋಷ್ ಬೆಂಬಲ ಇದೆ ಎಂಬುದೆಲ್ಲಾ ಸತ್ಯಕ್ಕೆ ದೂರ. ಇದಕ್ಕೆ ಹೈಕಮಾಂಡ್ ನಾಯಕರ ಯಾವುದೇ ಬೆಂಬಲ ಇಲ್ಲ.
ಭಿನ್ನಮತ ಶಮನಕ್ಕೆ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕೆಂಬ ಬೊಮ್ಮಾಯಿ ಆಗ್ರಹ ವಿಚಾರವಾಗಿ ಮಾತನಾಡಿ, ತಟಸ್ಥ ಬಣವನ್ನೂ ನಾನು ನೋಡಿದ್ದೇನೆ. ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕು ಅಂತಾದರೆ ಮೊದಲು ಯಡಿಯೂರಪ್ಪನವರನ್ನು ಬೈಯುವುದನ್ನು ಮೊದಲು ನಿಲ್ಲಿಸಬೇಕು. ಅದನ್ನು ಅವರು ಮಾಡಬೇಕು, ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡುವುದನ್ನು ನೋಡಿಕೊಂಡು ನೀವು ಸುಮ್ಮನೆ ಇರುತ್ತೀರಿ ಅಂತಾದರೆ?
ರಾಜ್ಯಾಧ್ಯಕ್ಷನಾಗಿ ಏನು ಮಾಡಬೇಕು ಎಂಬ ಅರಿವು ನನಗೆ ಇದೆ ಎಂದು ಹೇಳಿದರು.
ಹೊಂದಾಣಿಕೆ ರಾಜಕೀಯ ಅಂತಾದರೆ ಮೈಸೂರು ಪಾದಯಾತ್ರೆ ನಡೆಯುತ್ತಿತ್ತಾ? ಈ ರೀತಿ ಹೇಳಿಕೆಯಿಂದ ಕಾರ್ಯಕರ್ತರಿಗೆ ಅವಮಾನ ಮಾಡಲಾಗುತ್ತಿದೆ. ವಿಜಯೇಂದ್ರಗೆ ಅಪಮಾನ ಮಾಡಲಿ, ಆದರೆ ಕಾರ್ಯಕರ್ತರಿಗೆ ಅಪಮಾನ ಮಾಡುವುದು ಬೇಡ. ಗೊಂದಲಕ್ಕೆ ತೆರೆ ಎಳೆಯಬೇಕು, ವಿಜಯೇಂದ್ರ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬ ಆಪಾದನೆ ಸರಿಯಲ್ಲ. ಮೊದಲ ಬಾರಿಗೆ ಶಾಸಕನಾಗಿ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇನೆ, ಯಾವುದೋ ಎರಡು ಹೋರಾಟಕ್ಕೆ ಗೈರಾದರೆ ಅದು ಹೊಂದಾಣಿಕೆ ರಾಜಕೀಯ ಅಲ್ಲ.ಯತ್ನಾಳ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಬಳಿಕ ಅದಕ್ಕೆಲ್ಲಾ ಒಂದೊಂದಾಗಿ ಉತ್ತರ ಕೊಡುತ್ತೇನೆ. ಈಗ ಮಾತಾಡಲು ಹೋದರೆ ನನಗೂ ಅವರಿಗೂ ವ್ಯತ್ಯಾಸ ಇಲ್ಲ ಎಂದರು.
ಎಲ್ಲರೂ ಒಪ್ಪುವಂತಹ ರಾಜ್ಯಾಧ್ಯಕ್ಷ ಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬೆಂಗಳೂರು ಶಾಸಕರ ಸಭೆ ಕರೆದಾಗ ಇದನ್ನು ಚರ್ಚೆ ಮಾಡುತ್ತೇನೆ. ಯಡಿಯೂರಪ್ಪನವರ ತೇಜೋವಧೆ ನಡೆಯುತ್ತಿರುವಾಗ ಅದನ್ನು ಹಿರಿಯರು ನಿಲ್ಲಿಸುತ್ತಿಲ್ಲ ಎಂಬ ನೋವು ಯಡಿಯೂರಪ್ಪನವರ ಮಗನಾಗಿ, ರಾಜ್ಯಾಧ್ಯಕ್ಷನಾಗಿ ನನಗೆ ಇದೆ ಎಂದು ವಿಜಯೇಂದ್ರ ಅವರು ತಿಳಿಸಿದರು.
-
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ











Click it and Unblock the Notifications