ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಶರಣ ವಿದ್ಯಾರ್ಥಿಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 28: ರಾಜ್ಯದ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಡಿನ ಪ್ರಮುಖ ರಾಜಕಾರಣಿಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಬಸವಜ್ಯೋತಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ಸ್ಕಾಲರ್ ಶಿಪ್ ಪಡೆಯಲು ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ವೀರಶೈವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತಿಂಗಳಿಗೆ 1 ಸಾವಿರ ರು ನಂತೆ ವೇತನ ಸಿಗಲಿದೆ. ನಾಡಿನ ಪ್ರಮುಖ ವೀರಶೈವ ಮುಖಂಡರು, ರಾಜಕಾರಣಿಗಳು ಆದ ಬಿ.ಎಸ್ ಯಡಿಯೂರಪ್ಪ, ವಿಜಯ ಸಂಕೇಶ್ವರ್, ಅಶೋಕ್ ಖೇಣಿ, ಪ್ರಭಾಕರ್ ಕೋರೆ, ಜಗದೀಶ್ ಶೆಟ್ಟರ್, ಜಿ.ಎಂ. ಸಿದ್ದೇಶ್, ಯು ಎಸ್ ಶೇಖರ್ ಇವರ ಸಾಧನೆಯನ್ನು ಸ್ಮರಿಸಿ ಇವರುಗಳ ಹೆಸರಿನಲ್ಲಿ "ಬಸವಜ್ಯೋತಿ" ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರತಿ ರಾಜಕಾರಣಿಗಳ ಹೆಸರಿನಲ್ಲಿ 10 ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ

Veerashaiva Lingayat Yuva Vedike Scholarship Student list

ಮೊದಲ ಪಟ್ಟಿಯಲ್ಲಿ 216 ವಿದ್ಯಾರ್ಥಿಗಳಲಿದ್ದು, ಇನ್ನುಳಿದ 189 ವಿದ್ಯಾರ್ಥಿ/ನಿಯರ ಪಟ್ಟಿಯನ್ನು ನವೆಂಬರ್ 2ರಂದು ಪ್ರಕಟಿಸಲಾಗುವುದು. ಆಯ್ಕೆಯಾದ ಪ್ರತಿಭಾವಂತರನ್ನು ಪತ್ರ ಅಥವಾ ದೂರವಾಣಿ ಮೂಲಕ ಸಂಪರ್ಕಿಸಲಾಗುವುದು ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ್ ಕಲ್ಲೂರ್ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ ಪಡೆದ ರಾಜ್ಯದ ವಿವಿಧ ಭಾಗದಲ್ಲಿರುವ ವೀರಶೈವ ವಿದ್ಯಾರ್ಥಿಗಳ ಪಟ್ಟಿ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಿ
ಹೆಚ್ಚಿನ ಮಾಹಿತಿ ಸಂಪರ್ಕಿಸಿ:
ಶರಣ ಪ್ರಶಾಂತ್ ಕಲ್ಲೂರ್, ರಾಜ್ಯ ಅಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ (ರಿ.)
92424 44444 / 080 6455 5554

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veerashaiva Lingayat Yuva Vedike announced the list of selected students for Basavajyoti Scholarship. The list is available exclusively on Oneindia Kannada portal and vlyvedike.org. Vedike is helping needy student in the Veerashaiva community by giving scholarship.
Please Wait while comments are loading...