ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಬಗ್ಗೆ 'ಮಹತ್ವದ' ಹೇಳಿಕೆ ನೀಡಿದ ವಿ ಸೋಮಣ್ಣ
ತುಮಕೂರು, ಡಿಸೆಂಬರ್ 06: ಬಿಜೆಪಿ ಹಿರಿಯ ಲಿಂಗಾಯತ ನಾಯಕ ವಿ ಸೋಮಣ್ಣ ಅವರು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಿ ಸೋಮಣ್ಣ ಅಸಮಾಧಾನ ಹೊರಹಾಕಿದ್ದು, ಡಿಸೆಂಬರ್ 6 ರಂದು ನನ್ನ ನಿರ್ಧಾರವನ್ನ ತಿಳಿಸುವುದಾಗಿ ಹೇಳಿದ್ದ ವಿ ಸೋಮಣ್ಣ ಉಲ್ಟಾ ಹೊಡೆದಿದ್ದಾರೆ.
ಹೌದು, ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡದ ಬಳಿಕೆ ಅಸಮಾಧಾನಗೊಂಡಿದ್ದ ವಿ ಸೋಮಣ್ಣ ಕಾಂಗ್ರೆಸ್ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿದ್ರು, ಇದೀಗ ಮಂಗಳವಾರ ತುಮಕೂರು ಸಿದ್ದಗಂಗಾ ಮಠಕ್ಕೆ ಮಾಜಿ ಸಚಿವ ವಿ ಸೋಮಣ್ಣ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ.

ಈ ವೇಳೆ ಕಾಂಗ್ರೆಸ್ ಸೇರ್ಪಡೆ ಕುರಿತು ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ವಿ ಸೋಮಣ್ಣ ಅವರು, ಡಿಸೆಂಬರ್ 6 ರವರೆಗೆ ಕಾಯಿರಿ, ಎಲ್ಲ ಹೇಳ್ತೀನಿ ಅಂದಿದ್ದರು. ಆರನೇ ತಾರೀಖು ನಂತರ ಅಂತ ಹೇಳಿದ್ದೆ, ಅರರಂದು ಅಂತ ಅಲ್ಲ. ತಾನು ಕಾಂಗ್ರೆಸ್ ಸೇರಬೇಕೆಂದಿದ್ದ ವಿಚಾರವನ್ನು ಮನಸ್ಸಿನಿಂದ ತೆಗೆದುಬಿಡಿ, ಲಿಂಗೈಕ್ಯ ಡಾ ಶಿವಕುಮಾರ ಸ್ವಾಮಿಯವರ ಪುಣ್ಯಕ್ಷೇತ್ರದಲ್ಲಿದ್ದೀರಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗಾಗಿ ಒಳ್ಳೆಯದನ್ನು ಬೇಡಿಕೊಳ್ಳಿ ಅಂತ ಆಧ್ಯಾತ್ಮದ ಮಾತುಗಳನ್ನಾಡಿದ್ದಾರೆ.
ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ. ಎರಡ್ಮೂರು ದಿನ ಕಾಯ್ತೇನೆ ಆಮೇಲೆ ಹೊರಗೆ ಹಾಕ್ತೀನಿ, ನನ್ನನ್ನು ನಡೆವಳಿಯನ್ನು ಇನ್ನೊಬ್ಬರೊಂದಿಗೆ ಹೊಲಿಕೆ ಮಾಡಬೇಡಿ. ಬೆಂಗಳೂರಿನಲ್ಲಿ 14-15 ವರ್ಷ ಮಂತ್ರಿ ಆಗಿದ್ದೆ ಅನ್ನೋದಕ್ಕಿಂತ, ಧ್ವನಿ ಇಲ್ಲದವರಿಗೆ ಕೆಲಸ ಮಾಡಿದ್ದೇನೆ, ನನ್ನ ನೇರ ನುಡಿಯ ಸಂಸ್ಕಾರ ಸಿದ್ದಗಂಗಾ ಮಠದಿಂದ ಬಂತು. ವರಿಷ್ಟರು ಯಾವ ರೀತಿ ನಡೆದುಕೊಳ್ಳಬೇಕು ಅಂತ ಹೇಳ್ತಾರೆ ಗೊತ್ತಿಲ್ಲ, ಅರ್ಹತೆ ಗುರುತಿಸುವ ಮಾನದಂಡ ಈ ರೀತಿ ಆಗಿರಬಾರದು. ಅರ್ಹತೆ ಅವಕಾಶ ವಂಚಿತವಾಗಬಾರದು ಅರ್ಹತೆ ಯಾರ ಮನೆಯ ಸ್ವತ್ತಲ್ಲ, ಅರ್ಹತೆ ಇಲ್ಲದವರು ಹೇಗೆ ಬೇಕಾದ್ರೂ ನಡೆಕೊಳ್ಳಬಹುದು ಅಂತಿಲ್ಲ ಎಂದು ಹೇಳಿದರು.

ಹೈಕಮಾಂಡ್ ಆಗಿರುವ ತಪ್ಪನ್ನು ಯಾವ ರೀತಿ ಸರಿ ಪಡಿಸುತ್ತಾರೆ ಅನ್ನೋದು ಗೊತ್ತಿಲ್ಲ. ಅನಾವಶ್ಯಕವಾಗಿ ನಮ್ಮನ್ನು ಯಾರೋ ಸಣ್ಣಪುಟ್ಟವರ ಜೊತೆಗೆ ಹೋಲಿಕೆ ಮಾಡಬೇಡಿ. ಪರಮೇಶ್ವರ್ ಹೇಳಿರೋದು ಅವರ ದೊಡ್ಡತನ, ನನ್ನ ಅವರ ರಾಜಕೀಯ ಹಾಗೂ ಪ್ರೀತಿ 50 ವರ್ಷದ್ದು. ಸ್ವತಂತ್ರವಾಗಿ ಬೆಂಗಳೂರಿನಲ್ಲಿ ಗೆದ್ದು ಬಂದಿದ್ದೇನೆ, ಕೆಲವು ಸಂದರ್ಭದಲ್ಲಿ ನನ್ನ ದುರಂಹಕಾರ ನಮಗೆ ತೊಂದರೆ ಕೊಡ್ತು. ನಾನು ಮಾಡಿದಂತಹ ತೀರ್ಮಾನ ಮೇಲೆ ಆಕಾಶವಿದೆ ಅಂತ ಆಕಾಶಕ್ಕೆ ಉಗುಳಿದೆ, ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ.
ಶ್ರೀ ಮಠಕ್ಕೆ ಮತ್ತು ಜಿ.ಪರಮೇಶ್ವರ್‌ಗೆ ಬಹಳಷ್ಟು ಸಂಬಂಧ ಇದೆ. ಅಧಿವೇಶನದ ನಡುವೆ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಡಾ. ಜಿ.ಪರಮೇಶ್ವರ್ ಬಸವಣ್ಣನವರ ಆದರ್ಶ ಮೈಗೂಡಿಸಿಕೊಂಡಿದ್ದಾರೆ. ಎಲ್ಲವೂ ಇದ್ದರೂ ಏನೂ ಇಲ್ಲದಂತೆ ಇರುವ ಪರಮೇಶ್ವರ್ ಎಂದು ವಿ ಸೋಮಣ್ಣ ಹಾಡಿ ಹೊಗಳಿದ್ದಾರೆ. ಸೋಮಣ್ಣ ಏನು ಮಾತಾಡುತ್ತಾರೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ.
ನಾನು ಮತ್ತು ಪರಮೇಶ್ವರ್ 45 ವರ್ಷದ ಹಿಂದಿನ ಸ್ನೇಹಿತರು. ಅವರ ತಂದೆ ಗಂಗಾಧರಯ್ಯರ ಒಡನಾಡಿಗಳು ನಾವು. ಡಾ.ಪರಮೇಶ್ವರ್ ಅವರಲ್ಲಿ ವಿನಂತಿ, ಶಿವಕುಮಾರ್ ಶ್ರೀಗಳು ಓದಿದ ಸೆಂಟ್ರಲ್ ಕಾಲೇಜು ವಿವಿಯಾಗಿದೆ.
ಶಿವಕುಮಾರ ಶ್ರೀಗಳ ಹೆಸರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಸಚಿವರು ಮನಸ್ಸು ಮಾಡಬೇಕು. ರಾಜಕಾರಣಕ್ಕಾಗಿ ಈ ಕೆಲಸ ನಾನು ಮಾಡಲ್ಲ, ವಜ್ರಹೋತ್ಸವ, ಪೂಜ್ಯರ ಜನ್ಮ ಶತಮಾನೋತ್ಸವ ಮಾಡಿದ್ದೇನೆ. ಇದು ರಾಜಕಾರಣಕ್ಕಾಗಿ ಅಲ್ಲ. ಭಾರತ ಸರ್ಕಾರಕ್ಕೆ ಮೂನ್ನಾಲ್ಕು ಬಾರಿ ಮನವಿ ಮಾಡಿದ್ವಿ. ಶಿವಕುಮಾರ್ ಶ್ರೀಗಳಿಗೆ ಭಾರತ ರತ್ನ ಕೊಡುವಂತೆ ಮನವಿ ಮಾಡಿದ್ವಿ. ಬೆಳಗ್ಗೆ ಛತ್ತಿಸ್‌ಘಡದ ಗೃಹ ಕಾರ್ಯದರ್ಶಿ ಕಾಲ್ ಮಾಡಿ ನಾನು ಸಿದ್ಧಗಂಗಾ ಮಠದ ವಿದ್ಯಾರ್ಥಿ ಅಂದ್ರು, ನನ್ನ ಶ್ರೀಮತಿ ಶೈಲಜಾ ರಿಂದ ಈ ಗುರುಭವನ ನಿರ್ಮಾಣ ಆಗಿದೆ.
ಈಗ ಮಹಿಳೆಯರಿಗೆ 33% ಮೀಸಲಾತಿ ಆಗಿದೆ. ನಿನಗೆ ಅನುಕೂಲ ಆಗಬಹುದು ಅಂದೆ. 1999ರಲ್ಲಿ ಬೆಂಗಳೂರು ನಗರಕ್ಕೆ ನೀನು ಅರ್ಜಿ ಹಾಕಬೇಕು ಎಂದು ಶಿವಕುಮಾರ್ ಶ್ರೀಗಳು ಅಂದ್ರು. ಆ ಒಂದೇ ನಿಮಿಷದಲ್ಲಿ ಬಾಲಗಂಗಾಧರ ಸ್ವಾಮೀಜಿಗಳೂ ಅದನ್ನೇ ಹೇಳಿದ್ದು. 1999ರಲ್ಲಿ ನಾನು ಚುನಾವಣೆಗೆ ಸ್ಪರ್ಧೆ ಮಾಡಲು ಈ ಸ್ವಾಮೀಜಿಗಳು ಕಾರಣ, ಅನೇಕ ಸಂದರ್ಭಗಳಲ್ಲಿ ಅವಕಾಶ ವಂಚನೆ ಯಾವ ರೀತಿ ಆಗುತ್ತದೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ವಿ ಸೋಮಣ್ಣ ಹೇಳಿದರು.












Click it and Unblock the Notifications