ಯುಜಿನೀಟ್: ವೈದ್ಯಕೀಯ ಕೋರ್ಸ್‌ಗಳ ಸ್ಟ್ರೇ ವೇಕೆನ್ಸಿ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ

ಬೆಂಗಳೂರು, ಡಿಸೆಂಬರ್ 16: ಯುಜಿನೀಟ್ (UGNEET 2025) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇದರೊಂದಿಗೆ ಆಯುಷ್ ಕೋರ್ಸ್ ಗಳ ಪ್ರವೇಶದ ಕುರಿತು ಕೆಇಎ ಒಂದಷ್ಟು ಅಪ್ಡೇಟ್ ನೀಡಿದೆ. ಅಭ್ಯರ್ಥಿಗಳು ಗಮನಿಸಬೇಕಿದೆ.

ಯುಜಿನೀಟ್ ಗೆ ಸಂಬಂಧಿಸಿದಂತೆ ಒಟ್ಟು 73 ವೈದ್ಯಕೀಯ ಹಾಗೂ 34 ದಂತ ವೈದ್ಯಕೀಯ ಸೀಟುಗಳನ್ನು ಈ ಸುತ್ತಿನಲ್ಲಿ ಹಂಚಿಕೆ ‌ಮಾಡಲಾಗಿದೆ. 26 ವೈದ್ಯಕೀಯ ಸೀಟು ಹಂಚಿಕೆಗೆ ಆಗಬೇಕಿದೆ. ಈ ಕೋರ್ಸ್‌ಗಳಿಗೆ ಯಾರಿಗೆಲ್ಲ ಸೀಟು ಹಂಚಿಕೆ ಆಗಿದೆಯೋ ಅವರೆಲ್ಲ ಡಿಸೆಂಬರ್ 17ರಂದು ಸಂಜೆ 4 ಗಂಟೆಯೊಳಗೆ ಶುಲ್ಕ (ವೈದ್ಯಕೀಯ ಶುಲ್ಕ ಠೇವಣಿ ಕಡಿತ ಮಾಡಿಕೊಂಡು) ಪಾವತಿಸಬೇಕು. ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ತದನಂತರ ಸಂಜೆ 6 ಗಂಟೆ ಒಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದರು.

UGNEET 2025 medical Courses Stray Vacancy Seat Allocation Final Results Announced

ಯುಜಿನೀಟ್‌ಗೆ ಸಂಬಂಧಿಸಿದಂತೆ ಸೋಮವಾರ ಪ್ರಾಧಿಕಾರವು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಬಿಡುಗಡೆ ಮಾಡಿತ್ತು. ಇದಕ್ಕೆ ಆಕ್ಷೇಪಣೆಗಳು ಇದ್ದಲ್ಲಿ ಆಹ್ವಾನಿಸಿ, ಡಿಸೆಂಬರ್ 16ರ ಬೆಳಗ್ಗೆ 10ಗಂಟೆಯೊಳಗೆ ಪ್ರಾಧಿಕಾರಕ್ಕೆ ಇ-ಮೇಲ್ ([email protected]) ಮೂಲಕ ತಿಳಿಸುವಂತೆ ಕೋರಿತ್ತು. ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕವೇ ಇಂದು (ಡಿ.16) ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯುಜಿಅಯುಷ್ (UGAyush) 2025 ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಅಂತಿಮ ಹಾಗೂ ನಾಲ್ಕನೇ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತಿದೆ. ಸೀಟು ಹಂಚಿಕೆಯಾದವರು ಡಿಸೆಂಬರ್ 20ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.

ಈ ನಾಲ್ಕನೇ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲೆಗಳು ಹಾಗೂ ತಾವು ತೆಗೆದುಕೊಳ್ಳಬಹುದಾದ ಸೀಟಿನ ಪೂರ್ಣ ಶುಲ್ಕದ ಡಿ.ಡಿ ಸಮೇತ ಡಿಸೆಂಬರ್ 17ರಂದು ಬುಧವಾರ ಮಧ್ಯಾಹ್ನ 2 ಗಂಟೆಯೊಳಗೆ ಖುದ್ದಾಗಿ ಕೆಇಎ ಕಚೇರಿಗೆ ಬಂದು ಸಲ್ಲಿಸಬೇಕು. ಮರುದಿನ ಡಿಸೆಂಬರ್ 18ರಂದು ಬೆಳಗ್ಗೆ 11 ಗಂಟೆವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದರು.

ಇದುವರೆಗೂ ನೋಂದಣಿ‌ ಮಾಡದಿರುವ ವೈ ಕ್ಲಾಸ್ ಅಭ್ಯರ್ಥಿಗಳು ಕೂಡ ಡಿಸೆಂಬರ್ 17 ರಂದು ಕೆಇಎ ಕಚೇರಿಗೆ ಬಂದು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಡಿಸಂಬರ್ 18ರಂದು ಸಂಜೆ 5ಗಂಟೆ ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ. ಯಾರಿಗೆಲ್ಲ ಸೀಟು ಹಂಚಿಕೆ ಆಗಿರುತ್ತದೆಯೋ ಅವರು ಡಿಸೆಂಬರ್ 20ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://cetonline.karnataka.gov.in/kea/kahvs ಕ್ಕೆ ಭೇಟಿ ನೀಡಬೇಕೆಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+