UG NEET, UGCET 2026: ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ, ಮುಂದೇನು?

ಬೆಂಗಳೂರು: UG NEET 2026 ಮತ್ತು UGCET 2026ಗೆ ಹಾಗೂ DCET 2026 ಅಭ್ಯರ್ಥಿಗಳ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಮೊದಲ ಸುತ್ತು ಮತ್ತು ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಜೊತೆಗೆ ಡಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಸಹ ಸೋಮವಾರ ಬಿಡುಗಡೆ ಮಾಡಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.

ಆಗಸ್ಟ್ 20ರವರೆಗೆ ಅವಕಾಶ

ಮೊದಲಿಗೆ ಯುಜಿ ನೀಟ್, ಯುಜಿ ಸಿಇಟಿಗೆ ಸಂಬಂಧಿಸಿದಂತೆ ಆಗಸ್ಟ್ 13 ರಂದು ಬೆಳಗ್ಗೆ 9ಗಂಟೆವರೆಗೆ ಅಭ್ಯರ್ಥಿಗಳು ನಮೂದಿಸಿದ್ದ ಇಚ್ಛೆಗಳನ್ನು (Options) ಅಣಕು ಫಲಿತಾಂಶಕ್ಕೆ ಪರಿಗಣಿಸಲಾಗಿದೆ. ಆಗಸ್ಟ್ 20ರಂದು ಬೆಳಿಗ್ಗೆ 9ಗಂಟೆವರೆಗೆ ಇಚ್ಚೆಗಳನ್ನು ಹೊಸದಾಗಿ ಸೇರಿಸುವುದಕ್ಕೆ/ ಬೇಡವಾದಲ್ಲಿ ತೆಗೆದುಹಾಕುವುದಕ್ಕೆ/ ಕ್ರಮಾಂಕ ಬದಲಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.

UG NEET UGCET 2026

ಯುಜಿ ನೀಟ್- 2026ರಲ್ಲಿ ಅರ್ಹತೆ ಪಡೆದು, ಇದುವರೆಗೂ ಅರ್ಜಿಯನ್ನೇ ಸಲ್ಲಿಸದಿರುವ ಅಭ್ಯರ್ಥಿಗಳಿಗೆ (Clause- A ಮತ್ತು Clause- Y) ಹೊಸದಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 18ರಂದು ಸಂಜೆ 6ರವರೆಗೆ ಅವಕಾಶ ನೀಡಲಾಗಿದೆ. ನಂತರ ಅವರು ಪರಿಶೀಲನಾ (ವರಿಫಿಕೇಷನ್) ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡು, ತಮ್ಮ ಆಯ್ಕೆಗಳನ್ನು ದಾಖಲು ಮಾಡಬಹುದು ಎಂದು ಕೆಇಎ ತಿಳಿಸಿದೆ.

ಇದು ಅಣಕು ಫಲಿತಾಂಶ ವಾಗಿರುವ ಕಾರಣ ಯಾರೂ ಕಾಲೇಜಿಗೆ ಹೋಗಿ ಪ್ರವೇಶ ಪಡೆಯುವಂತಿಲ್ಲ. ಅಂತಿಮ ಸುತ್ತಿನ ಫಲಿತಾಂಶವನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಹೇಳಿದ್ದಾರೆ.

DCET 2026 ಸೀಟು ಹಂಚಿಕೆ ಫಲಿತಾಂಶ

ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ಗೆ ನೇರ ಪ್ರವೇಶ ಕಲ್ಪಿಸುವ ಡಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಸಹ ಸೋಮವಾರ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳಿಗೆ
ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 18ರಂದು ಮಧ್ಯಾಹ್ನ 12 ಗಂಟೆ ಒಳಗೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆಯ (DCET) ಒಟ್ಟು 13,152 ಸೀಟುಗಳ ಪೈಕಿ ಮೊದಲ ಸುತ್ತಿನಲ್ಲೇ 10,348 ಸೀಟು ಹಂಚಿಕೆಯಾಗಿವೆ ಎಂದು ಎಚ್. ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫಲಿತಾಂಶಗಳ ಪರಿಶೀಲನೆ ಹಾಗೂ ಹೆಚ್ಚಿನ ಮಾಹಿತಿಗೆ ನೀವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ https://cetonline.karnataka.gov.in/kea/ ಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+