ನೂತನ ಡಿಜಿ & ಐಜಿಪಿ ಹುದ್ದೆಗೆ ಇಬ್ಬರ ಹೆಸರು ಶಿಫಾರಸು

ಬೆಂಗಳೂರು, ಜನವರಿ 30 : ಕರ್ನಾಟಕದ ನೂತನ ಪೊಲೀಸ್ ಮಹಾ ನಿರ್ದೇಶಕರು ಯಾರು? ಎಂಬ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ. ಡಿಜಿ & ಐಜಿಪಿಯಾಗಿರುವ ನೀಲಮಣಿ ಎನ್. ರಾಜು ಜನವರಿ 31ರಂದು ನಿವೃತ್ತರಾಗಲಿದ್ದಾರೆ.

ಜನವರಿ 31ರ ಶುಕ್ರವಾರ ಒಟ್ಟು ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತರಾಗಲಿದ್ದಾರೆ. ಇವರಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು ಅವರು ಸೇರಿದ್ದಾರೆ. ಈಗ ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗೆ ಯಾರಿಗೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿಗಳಾದ ಪ್ರವೀಣ್ ಸೂದ್, ಎ. ಎಂ. ಪ್ರಸಾದ್ ಹೆಸರನ್ನು ಶಿಫಾರಸು ಮಾಡಿದೆ. ಇವರಲ್ಲಿ ಯಾರು ಡಿಜಿ & ಐಜಿಪಿ ಆಗಲಿದ್ದಾರೆ? ಕಾದು ನೋಡಬೇಕು. ಸೇವಾಹಿರಿತನದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಗೃಹ ರಕ್ಷಕ ದಳದ ಡಿಜಿಪಿಯಾಗಿರುವ ಎಂ. ಎನ್. ರೆಡ್ಡಿ, ಹೌಸಿಂಗ್ ಕಾರ್ಪೊರೇಷನ್ ಡಿಜಿಪಿಯಾಗಿರುವ ರಾಘವೇಂದ್ರ ಔರಾದ್ಕರ್ ಅವರು ಸಹ ಶುಕ್ರವಾರ ನಿವೃತ್ತರಾಗಲಿದ್ದಾರೆ.

ಐಪಿಎಸ್ ಅಧಿಕಾರಿ ಎ. ಎಂ. ಪ್ರಸಾದ್

ಐಪಿಎಸ್ ಅಧಿಕಾರಿ ಎ. ಎಂ. ಪ್ರಸಾದ್

ಕರ್ನಾಟಕ ಸರ್ಕಾರ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ. ಎಂ. ಪ್ರಸಾದ್ ಹೆಸರನ್ನು ಡಿಜಿ & ಐಜಿಪಿ ಹುದ್ದೆಗೆ ಶಿಫಾರಸು ಮಾಡಿದೆ. 2020ರ ಅಕ್ಟೋಬರ್‌ ತನಕ ಅವರ ಸೇವಾವಧಿ ಇದೆ.

ಎ. ಎಂ. ಪ್ರಸಾದ್ ಹೆಸರು

ಎ. ಎಂ. ಪ್ರಸಾದ್ ಹೆಸರು

ಸಿಐಡಿ ಡಿಜಿಪಿಯಾಗಿರುವ ಪ್ರವೀಣ್ ಸೂದ್ ಹೆಸರನ್ನು ಸಹ ಡಿಜಿ & ಐಜಿಪಿ ಹುದ್ದೆಗೆ ಶಿಫಾರಸು ಮಾಡಲಾಗಿದೆ. ಪ್ರವೀಣ್ ಸೂದ್ ಅವರ ಅಧಿಕಾರಾವಧಿ 2024ರ ತನಕ ಇದೆ.

ನೀಲಮಣಿ ರಾಜು

ನೀಲಮಣಿ ರಾಜು

ಜನವರಿ 31ರಂದು ನಿವೃತ್ತರಾಗಲಿರುವ ನೀಲಮಣಿ ಎನ್. ರಾಜು ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈಗ ಅವರ ಹುದ್ದೆ ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

12 ಐಪಿಎಸ್ ಅಧಿಕಾರಿಗಳ ನಿವೃತ್ತ

12 ಐಪಿಎಸ್ ಅಧಿಕಾರಿಗಳ ನಿವೃತ್ತ

ನೀಲಮಣಿ ಎನ್. ರಾಜು ಮಾತ್ರವಲ್ಲ. ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ 12 ಐಪಿಎಸ್ ಅಧಿಕಾರಿಗಳು 2020ರ ವಿವಿಧ ತಿಂಗಳಿನಲ್ಲಿ ನಿವೃತ್ತರಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+